ಉಚಿತ ಆರೋಗ್ಯ ತಪಾಸಣೆ ಹಾಗೂ ಔಷದೋಪಚಾರ ಶಿಬಿರದ ಸದುಪಯೋಗಕ್ಕೆ ಕರೆ

ಲೋಕದರ್ಶನ ವರದಿ

ರಾಮದುರ್ಗ, 28: ಪಟ್ಟಣದ ಆಸ್ಪತ್ರೆಯಲ್ಲಿ ವೈದ್ಯರುಗಳ ಕೊರತೆಯಿಂದ ಜನತೆಗೆ ಆಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಮಾರ್ಚ-2 ರಂದು ಶನಿವಾರ ಮುಂಜಾನೆ-9-30 ರಿಂದ 4 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷದೋಪಚಾರ ವಿತರಣಾ ಕಾರ್ಯಕ್ರಮವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದ ಎದುರುಗಡೆ ಇರುವ ವಿದ್ಯಾಚೇತನ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಧುರೀಣ ಮಲ್ಲಣ್ಣ ಯಾದವಾಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕೆ.ಎಲ್.ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಪ್ರಭಾಕರ ಕೋರೆ ಉಚಿತ ಆಸ್ಪತ್ರೆ, ಬಟಕುಕರ್ಿಯ ಶ್ರೀ ಈರಮ್ಮ ಶಿವಲಿಂಗಪ್ಪ ಯಾದವಾಡ ಸ್ಮಾರಕ ಸೇವಾ ಸಮಿತಿ, ರೋಟರಿ ಇನ್ನರವ್ಹೀಲ್ ಸಂಸ್ಥೆ ಹಾಗೂ ರಾಮದುರ್ಗ ಪ್ರೆಸ್ ಕ್ಲಬ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. 

ಕೆ.ಎಲ್.ಇ ಸಂಸ್ತೆಯ ಸುಮಾರು 80-85 ನುರಿತ ಅನುಭವಿ ತಜ್ಞವೈಧ್ಯರುಗಳು, 40-50 ಸ್ಟಾಪ್ ನರ್ಸಗಳನ್ನೊಳಗೊಂಡ 22 ಕೌಂಟರ್ಗಳಲ್ಲಿ ಆರೋಗ್ಯ ತಪಾಸಣೆ ನಡೆಲಾಗುತ್ತಿದೆ. ಕ್ಯಾನ್ಸರ್ ಹೊರತುಪಡಿಸಿ ಎಲ್ಲ ರೋಗಗಳ ತಪಾಸಣೆ ನಡೆಸಿ ಔಷದೋಪಚಾರವನ್ನು ಒದಗಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ತಜ್ಞ ವೈಧ್ಯರ ಸಲಹೆಯ ಮೇರೆಗೆ ಕೆ.ಎಲ್.ಸಿ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿರುವ ಐಎನ್ಟಿ ಮಕ್ಕಳಿಗೆ, ಅಂಗವಿಕಲರಿಗೂ ಆರೋಗ್ಯ ತಪಾಸಣೆ ಸೇವೆ ಲಭ್ಯವಿದ್ದು ತಾಲೂಕಿನ ಜನತೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕ ಎಂದು ಮಲ್ಲಣ್ಣ ಯಾದವಾಡ ಹೇಳಿದರು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ.ಎಲ್.ಸಿ ಸಂಸ್ಥೆಯ ಕಾಯರ್ಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ, ವಿ.ಪ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಮಹಾದೇವಪ್ಪ ಯಾದವಾಡ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಚಿನ್ನಾಕಟ್ಟಿ, ಬಸವರಾಜ ಬಸವರಾಜ ಉದುಪಡಿ, ನಾಗರಾಜ ಕಟ್ಟಿಮನಿ, ಶಿವಾನಂದ ಗುರುಬಸಣ್ಣನವರ, ವಿಜಯ ನಾಯಕ ಸೇರಿದಂತೆ ಹಲವರಿದ್ದರು.