ಜಮಖಂಡಿ 11: ಶಿಕ್ಷಣವನ್ನು ಪಡೆದುಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ದೊಡ್ಡ ಆಸ್ತಿಯಾಗಲು ಸಾಧ್ಯ ಎಂದು ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಹೇಳಿದರು.
ನಗರದ ರುದ್ರಾವಧೂತ ಮಠದ ಸಭಾ ಭವನದಲ್ಲಿ ನಡೆದ ಶ್ರೀ ರುದ್ರಾವಧೂತ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 6ನೇ ವರ್ಷದ ಉಚಿತ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಚಿತವಾಗಿ ಶಿಕ್ಷಣ ದೊರಯುತ್ತದೆ ಎಂದರೆ. ಅದನ್ನು ಸರಿಯಾಗಿ ಉಪಯೋಗವನ್ನು ಮಾಡಿಕೊಂಡು. ಹೆತ್ತ ತಂದೆ,ತಾಯಿ, ಕಲಿಸಿದ ಗುರುಮಾತೆಯರು ಹಾಗೂ ಕಲಿತಿರುವ ಮಠದ ಕೀರ್ತಿಯ ಹೆಸರನ್ನು ತರುವಂತಹ ವಿದ್ಯಾರ್ಥಿಗಳು ತಾವುಗಳು ಆಗಬೇಕು ಎಂದರು.
ಬೇಸಿಗೆ ಶಿಬಿರದಲ್ಲಿ ಬೇರೆ ಕಡೆಗಳಲ್ಲಿ ಸಾವಿರಾರೂ ಹಣವನ್ನು ನೀಡಿ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ. ಆದರೆ ಬಡ ವಿದ್ಯಾರ್ಥಿಗಳು ಸಾವಿರಾರು ಹಣವನ್ನು ಕೊಟ್ಟು ಶಿಕ್ಷಣ ಕಲಿಯಲ್ಲು ಸಾಧ್ಯವಿಲ್ಲ. ಆದಕಾರಣ ಶ್ರೀ ರುದ್ರಾವಧೂತ ಮಠದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಚಿತ ಪಠ್ಯಪುಸ್ತಕಗಳು, ಪೆನ್ನುಗಳು, ಊಟಉಪಚಾರ, ವಸತಿ, ಪ್ರತಿನಿತ್ಯ ಬಳಸುವ ವಸ್ತುಗಳು.ಪೇಸ್ಟ್, ಬ್ರೇಶ್ ಹೀಗೆ ಹಲವಾರು ವಸ್ತುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ಬೇಕಾಗುವ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಜೊತೆಗೆ ನುರಿತ ಶಿಕ್ಷಕ,ಶಿಕ್ಷಕಿಯರಿಂದ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು.
ಮಠದ ಹಿರಿಯ ಪೀಠಾಧಿಕಾರಿ ಸಹಜಾನಂದ ಅವಧೂತರು, ನಗರಸಭೆ ಸದಸ್ಯ ಸಿದ್ದು ಮೀಶಿ, ಅಶೋಕ ಮೀಶಿ, ಸುರೇಂದ್ರ ಕಡಕೋಳ, ರವಿ ಲಗಳಿ, ಬಿ,ಬಿ,ಮನಗೂಳಿ, ಜಗದೀಶ ಕಾಂಬಳೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಕಾಶ ಮೀಶಿ, ಶಿವಪ್ಪ ಕಡಕೋಳ, ಭೀಮಶಿ ಗಡಕರ, ಮಾದೇವ ಕಡಕೋಳ, ಜಗದೀಶ ತರತರಿ, ಶಶಿಕಾಂತ ತೇರದಾಳ, ದೀಲೀಪ ದಾಶ್ಯಾಳ, ಕುಮಾರ ಕಾಂಬಳೆ, ರುದ್ರ್ಪ ಲಗಳಿ, ಸತ್ಯಪ್ಪ ಕಾಂಬಳೆ, ಶ್ರೀಶೈಲ್ ಧರೇನ್ನವರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಸಹಜಾನಂದ ಅವಧೂತರು ಹಾಗೂ ಕೃಷ್ಣಾನಂದ ಅವಧೂತರು ವಿತರಣೆ ಮಾಡಿದರು.