ಲೋಕದರ್ಶನ ವರದಿ
ಡಾಽ ವಾಯ್.ಎಸ್. ಶೆಟ್ಟೆಪ್ಪನವರ ಅವರಿಂದ ಗ್ರಾಂಮೀಣ ಮಕ್ಕಳಿಗೆ ಉಚಿತ ತರಬೇತಿ
ಸಂಬರಗಿ, 27 : ಗ್ರಾಮೀಣ ಪ್ರದೇಶದಲ್ಲಿ ಇರುವ ಮಕ್ಕಳಿಗೆ ಖಾಸಗಿ ತರಬೇತಿ ಪಡೆಯಲು ದುಡ್ಡಿಲ್ಲ. ಇಂತಹ ಪರಿಸ್ಥಿತಿ ಬರಗಾಲದ ಗ್ರಾಮದಲ್ಲಿ ಬಂದಿದೆ. ತಾಯಿ-ತಂದೆಯರ ಸಮಸ್ಯೆಯನ್ನು ಪರಿಗಣಿಸಿ ನಿವೃತ್ತ ವೈದ್ಯಾಧಿಕಾರಿ ಡಾಽ ವಾಯ್.ಎಸ್. ಶೆಟ್ಟೆಪ್ಪನವರ, ಜಂಬಗಿ ಗ್ರಾಮದಲ್ಲಿ ಮಕ್ಕಳಿಗೆ ಉಚಿತವಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಾರಣದಿಂದ ಪ್ರತಿ ವರ್ಷ ಮಕ್ಕಳು ಒಳ್ಳೆಯ ಗುಣಮಟ್ಟದಲ್ಲಿ ಉತ್ತೀರ್ಣರಾಗುತ್ತಿದ್ದಾರೆ.
ಪಟ್ಟಣ ಪ್ರದೇಶದಲ್ಲಿ ಮಕ್ಕಳು ಎಲ್.ಕೆ.ಜಿ ಇದ್ದಾಗಲೇ ಅವರ ತಾಯಿ-ತಂದೆ-ಪೋಷಕರು ಖಾಸಗಿ ತರಬೇತಿ ನೀಡಿ ಅವರಿಗೆ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಯಾವುದೇ ಖಾಸಗಿ ತರಬೇತಿ ಇಲ್ಲ. ಆ ಕಾರಣ ವಿದ್ಯಾರ್ಥಿಳಿಗೆ ಗಣಿತ ಮತ್ತು ಇಂಗ್ಲೀಷ ವಿಷಯಗಳನ್ನು ಉತ್ತೀರ್ಣರಾಗಲು ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಯನ್ನು ವಾಯ್.ಎಸ್. ಶೇಟ್ಟಪ್ಪನವರ ಇವರು ಪರೀಶಿಲಣೆ ಮಾಡಿ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ಬಡ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅವರು ವಾಸಿಸುವ ಮನೆಯಲ್ಲಿ ದಿನನಿತ್ಯ ಬೇಸಿಗೆಯಲ್ಲಿ ಎರಡು ತಿಂಗಳು ಮಕ್ಕಳಿಗೆ ಪಾಠ ಹೇಳಿ ಅವರಿಗೆ ಅನುಕೂಲ ಮಾಡಿತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಮಕ್ಕಳು ಸೈನ್ಯ ಹಾಗೂ ಇನ್ನೀತರ ಸರಕಾರಿ ಇಲಾಖೆಯಲ್ಲಿ ನೌಕರಿ ಪಡೆದಿದ್ದಾರೆ.
ವಾಯ್.ಎಸ್. ಶೆಟ್ಟಪ್ಪನವರ ಇವರು ವೈದ್ಯಕೀಯ ಸೇವೆಯಿಂದ ನಿವೃತ್ತಿ ಹೊಂದಿ ಹತ್ತು ವರ್ಷವಾಗಿದೆ. ಇವರು ನಿವೃತ್ತಿ ನಂತರ ಬಡ ವಿದ್ಯಾರ್ಥಿಗಳುಗೆ ಉಚಿತವಾಗಿ ವಿವಿಧ ವಿಷಯದಲ್ಲಿ ಖಾಸಗಿ ತರಬೇತಿ ಮಕ್ಕಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ಇಂತಹ ವೈದ್ಯರುಗಳಿಂದ ಸತತವಾಗಿ ತರಬೇತಿ ನೀಡಬೇಕೆಂದು ಪಾಲಕರು ವಿನಂತಿಸಿದ್ದಾರೆ.