ಮುದ್ರಣ, ಪ್ರಕಾಶನಕ್ಕೆ ಗದುಗಿನ ಕೊಡುಗೆ ಅಪಾರ: ಅಧ್ಯಕ್ಷ ಹಾಗೂ ಸಾಹಿತಿಗಳಾದ ಡಾ. ರಾಜೇಂದ್ರ

ಲೋಕದರ್ಶನ ವರದಿ

ಗದಗ 12: ಒಂದು ಕಾಲದಲ್ಲಿ ಮುದ್ರಣಾಲಯಗಳ ತವರೂರು ಎಂದು ಕರೆಸಿಕೊಂಡು ಗದಗ ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಹೆಚ್ಚಿನ ಪ್ರಮಾಣದ ಮುದ್ರಣಾಲಯಗಳನ್ನು ಹೊಂದಿದ್ದು, ಮುದ್ರಣ ಹಾಗೂ ಪ್ರಕಾಶನಕ್ಕೆ  ಗದುಗಿನ ಕೊಡುಗೆ ಅಪಾರವಾದುದು ಎಂದು ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಹಾಗೂ ಸಾಹಿತಿಗಳಾದ  ಡಾ. ರಾಜೇಂದ್ರ ಎಸ್. ಗಡಾದ ಅಭಿಪ್ರಾಯಪಟ್ಟರು.

ಅವರು ಗದುಗಿನ ಬಸವೇಶ್ವರ ನಗರದಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ `ಮುದ್ರಣ ಕಾಶಿ ಗದಗ' ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡುತ್ತಾ, ಅತೀ ಹೆಚ್ಚು ಪ್ರಮಾಣದ ಪುಸ್ತಕಗಳು ಗದುಗಿನಿಂದ  ಮುದ್ರಣವಾಗುತ್ತಿವೆ. ಆದ್ದರಿಂದ ಗದುಗಿಗೆ 'ಮುದ್ರಣ ಕಾಶಿ' ಎಂದು ಹೆಸರು ಬಂದಿದೆ ಹಿಂದಿನ ಕಾಲದಲ್ಲಿ ಮೌಖಿಕವಾಗಿದ್ದ ಜ್ಞಾನಪ್ರಸಾರ ಕಾರ್ಯವು ನಾಗರಿಕತೆ ಬೆಳೆದಂತೆ ಶಿಕ್ಷಣದ ಮೂಲಕ ಸಾಕ್ಷರತೆ ಪ್ರಸಾರಗೊಳ್ಳುತ್ತಾ, ವಿಚಾರಗಳನ್ನು ದಾಖಲಿಸುವ ಪ್ರಕ್ರಿಯೆಯು ಮುದ್ರಣ ಕಲೆಯ ಆವಿಷ್ಕಾರಕ್ಕೆ ನಾಂದಿ ಹಾಡಿತು. ಭಾರತದಲ್ಲಿ ಮುದ್ರಣ ಉದ್ದಿಮೆಯನ್ನು ಹುಟ್ಟುಹಾಕಿದ ಕೀರ್ತಿ ಬುಸ್ತಮೌಂಟ್ ಎನ್ನುವವರಿಗೆ ಸಲ್ಲುತ್ತದೆ. ವಿದೇಶಿಯರು ವಿಶೇಷತ ಕ್ರೈಸ್ತ ಮಿಷನರಿಗಳು, ಪಾದ್ರಿಗಳು ಕನ್ನಡ ಭಾಷೆಯನ್ನು ಕಲಿಯುವುದಕ್ಕೆ ಧರ್ಮ ಪ್ರಚಾರಾರ್ಥವಾಗಿ ಕನ್ನಡದಲ್ಲಿ ಮುದ್ರಣ ಕಾರ್ಯ ಕಾಣಿಸಿಕೊಂಡಿತು. 1896 ರಲ್ಲಿ ಗದಗದಲ್ಲಿ ಮುದ್ರಣಾಲಯಗಳು ಪ್ರಾರಂಭವಾದವು. ಗದಗ-ಬೆಟಗೇರಿಯ ಜರ್ಮನ್ ಪಾದ್ರಿಗಳ ಸಮೂಹದಲ್ಲಿ ಒಬ್ಬರಾಗಿದ್ದ ಸ್ಯಾಮುವೆಲ್ ಎನ್ನುವವರು ಗದಗಿನಲ್ಲಿ ಮೊದಲು ಮುದ್ರಣಾಲಯವನ್ನು ಪ್ರಾರಂಭಿಸಿದರು. ನಂತರ 1900ರಲ್ಲಿ ಶಂಕರನಾರಾಯಣ ಮುದ್ರಣಾಲಯ, 1919ರಲ್ಲಿ ಎಂ.ಎಸ್. ಮಡಿವಾಳಪ್ಪನವರ ಶಂಕರ ಪ್ರಿಂಟಿಂಗ್ ಪ್ರೆಸ್ ಎಂಬ ಹೆಸರಿನಲ್ಲಿ ಮುದ್ರಣಾಲಯಗಳನ್ನು ಸ್ಥಾಪಿಸಿದರು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗದುಗಿನ ಗಣ್ಯ ಉದ್ಯಮಿದಾರರು ಹಾಗೂ ಪ್ರಕಾಶಕರಾದ ಮೃತ್ಯುಂಜಯ ಸಂಕೇಶ್ವರ ಮಾತನಾಡಿ, ಗದಗ ಇಂದು ಅತ್ಯಾಧುನಿಕ ಹಾಗೂ ಹೈಟೆಕ್ ತಂತ್ರಜ್ಞಾನವನ್ನು ಹೊಂದಿದ ಮುದ್ರಣಾಲಯಗಳನ್ನು ಹೊಂದಿದ್ದು, ಇಲ್ಲಿ ಮುದ್ರಣ ಕ್ಲಷ್ಟರ್ನ್ನು ಸ್ಥಾಪನೆಯಾಗಬೇಕಾಗಿರುವುದು ಅವಶ್ಯಕವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶರಣು ಗೋಗೇರಿ ಮಾತನಾಡಿ, ಮುದ್ರಣಕಾಶಿ ಗರಿ ಮೂಡಿಸಲು ಸಕರ್ಾರದ ನೆರವಿನಿಂದ ಹಾಗೂ ಸಾರ್ವಜನಿಕರ ಸಹಾಯದಿಂದ ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಮುದ್ರಣಾಲಯದ ಕ್ಲಷ್ಟರ್ನ್ನು ಸ್ಥಾಪಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಮ್ಮೆಲ್ಲರೊಂದಿಗೆ ಕೈಜೋಡಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 6ಬೆಟಗೇರಿಯ ಅಧ್ಯಾಪಕಿಯರಾದ ಮಹಾಲಕ್ಷ್ಮೀ ತೊಂಡಿಹಾಳರವರು ಕವನ ವಾಚನ ಮಾಡಿದರು. ಲಕ್ಕುಂಡಿಯ ಬಾ.ಹೊ. ಪಾಟೀಲ ಪ್ರೌಢ ಶಾಲೆಯ ಸಂಗೀತ ಶಿಕ್ಷಕರಾದ ಸೋಮಶೇಖರ ದೊಡ್ಡಮನಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. 

ಕಾರ್ಯಕ್ರಮದಲ್ಲಿ ಅನುಸೂಯಾ ಮಿಟ್ಟಿ ಪ್ರಾರ್ಥಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶರ್ಿ ಪ್ರಕಾಶ ಮಂಗಳೂರ ಸ್ವಾಗತಿಸಿದರು. ಜಿಲ್ಲಾ ಕಸಾಪ ಸಂಚಾಲಕಿಯರಾದ ಲಾಡ್ಮಾ ನದಾಫ್ ನಿರೂಪಿಸಿದರು. ಡಾ. ಅಶೋಕ ಮತ್ತಿಗಟ್ಟಿ ವಂದಿಸಿದರು.ಅ.ಓಂ. ಪಾಟೀಲ, ಜಯಶ್ರೀ ಶ್ರೀಗಿರಿ, ಎಸ್.ಎಫ್. ಭಜಂತ್ರಿ, ಎಸ್.ಎಸ್. ದೊಡ್ಡಮನಿ, ಗಂಗಾಧರ ನಂದಿ, ಎಚ್.ಎಸ್. ದಳವಾಯಿ, ಬಸವರಾಜ ವಾರಿ, ಪ್ರ.ತೋ. ನಾರಾಯಣಪೂರ, ಆರ್.ಡಿ. ಕಪ್ಪಲಿ, ಎ.ಜಿ. ವ್ಯಾಪಾರಿ, ಏಕನಾಥಸಾ ಹಾವನೂರ, ರಾಕೇಶ ಹಿರೇಮನಿ, ಮಂಜುಳಾ ಹೊನ್ನಗುಡಿ, ಮಂಜುನಾಥ ನ್ಯಾರಳಗಂಟಿ, ಕೆ.ವಿ. ಕುಂದಗೋಳ, ರವಿರಾಜ್ ಪವಾರ, ವಿ.ವಿ. ಹಿರೇಮಠ, ಮಂಜುಳಾ ಅಕ್ಕಿ, ಜಯದೇವ ಮೆಣಸಗಿ, ಜಗನ್ನಾಥ ಟಿಕಾನದಾರ, ಮಂಜುನಾಥ ಹಳೇಪೇಟೆ, ಬಿ.ಪಿ. ರಂಗವಾಲೆ, ಎಸ್.ಬಿ. ಅಂಗಡಿ, ಪಿ.ಬಿ.ಇನಾಮದಾರ, ಕೆ.ಎ. ಉಪ್ಪಿನ್, ಆರ್.ಡಿ. ಸೊಪ್ಪಡ್ಲ, ಪಿ.ಎ. ಉಮಚಗಿ, ಎಚ್.ಡಿ. ಕುರಿ, ಎಸ್.ಎಂ. ಚಂದಕ್ಕನವರ, ಮಲ್ಲಿಕಾಜರ್ುನ ನಿಂಗೋಜಿ, ಸಂಗಮೇಶ ಬಿಳೇಎಲಿ, ವೀರೇಶ ಪಿ., ಆಯ್.ಕೆ. ಕಮ್ಮಾರ್, ಸಂತೋಷ ಕಾಶಪ್ಪನವರ, ಆನಂದ ಕಲ್ಮಠ, ಡಿ.ವಿ. ಬಡಿಗೇರ, ಪುಟ್ಟರಾಜ ಹಿರೇಮಠ, ಎಚ್.ಜಿ. ಹಾಲಕೇರಿ ಮುಂತಾದವರು ಉಪಸ್ಥಿತರಿದ್ದರು.