ಇಂದಿನ ನಿರುದ್ಯೋಗ ಸಮಸ್ಯೆಗೆ ಗಾಂಧಿ ಚಿಂತನೆಗಳು ಪರಿಹಾರ: ಬೊಮ್ಮಾಯಿ

ಹಾವೇರಿ: ಇಂದಿನ ನಿರುದ್ಯೋಗ ಸಮಸ್ಯೆಗಳಿಗೆ ಗಾಂಧೀಜಿ ಅವರ ಚಿಂತನೆಗಳು ಪರಿಹಾರ ಎಂದು ಗೃಹ  ಹಾಗೂ ಸಹಕಾರಿ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ  ಗಾಂಧೀಜಿ ಅವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ  ಆಯೋಜಿಸಲಾದ ಮಹಾತ್ಮಾಗಾಂಧೀಜಿ ಹಾಗೂ ಲಾಲ್ಬಹದ್ದೂರ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮ ಚರಕದಿಂದ ನೂಲು ತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬೃಹತ್ ಯಂತ್ರಗಳ ಬಳಕೆ ಆಧಾರಿತ ಉದ್ಯೋಗಾವಕಾಶಗಳಿಗಿಂತ ಗಾಂಧೀಜಿ ಅವರ ಗುಡಿ ಕೈಗಾರಿಕೆ ಆಧಾರಿತ ಗ್ರಾಮ ಸ್ವರಾಜ್ ಚಿಂತೆನಗಳನ್ನು ಅಳವಡಿಸಿಕೊಂಡರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

     ಗಾಂಧಿಜೀ ವಿಶೇಷ ವ್ಯಕ್ತಿತ್ವ ಮೌಲ್ಯಗಳಿರುವ ಸೂಕ್ಷ್ಮ ಜೀವಿ. ಇತರರ ನೋವಿನೊಂದಿಗೆ ಸ್ಪಂದಿಸುವ ಕರುಣಾ ನಿಧಿ. ಅವರ ಉಡುಗೆ ತೊಡುಗೆ ಕೈಗಡಿಯಾರ ಕೋಲು ಇವೆ ಇವರ ಸರಳತೆಯನ್ನು ತೋರಿಸುತ್ತದೆ. ವರ್ಣಭೇದ ನೀತಿ ವಿರುದ್ಧ ಸಿಡಿದೆದ್ದ ಅವರು ಗಿರಿ ವರ್ಗದ ಜನರಿಗೆ ದೇವರಿಗೆ ಹೋಲಿಕೆ ಮಾಡಿ ಅವರ ಬದುಕು ಉನ್ನತ ಮಟ್ಟಕ್ಕೆ ತರುವಲ್ಲಿ ಶ್ರಮಿಸಿದರು. ಹೀಗೆ ತಮ್ಮ ಜೀವನದ ಪ್ರತಿ ಘಟನೆಯಿಂದ ದೇಶದ ದಿಕ್ಕನ್ನೆ ಬದಲಾಯಿಸಿ ದೇಶದ ಮಹಾತ್ಮರಾದರು ಎಂದು ಅವರು ಹೇಳಿದರು.

  ಸಕರ್ಾರದಿಂದ ಒಂದು ವರ್ಷ ಕಾಲ ಗಾಂಧೀಜಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಇರುತ್ತದೆ, ಅವರ ವಿಚಾರಗಳಿಂದ ಅವರನ್ನು ಜೀವಂತವಾಗಿಸುವ ಮೂಲಕ ಅವರಿಗೆ ಗೌರವ ನೀಡಬೇಕು.  ನೆಮ್ಮಲ್ಲರ ಬದುಕಿನಲ್ಲಿ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಲಾಲಬಹದ್ದೂರ ಶಾಸ್ತ್ರೀ ಕೂಡ ಸತ್ಯವಂತ ನಾಯಕರಾಗಿದ್ದರು ಹಾಗೂ ಗಾಂಧೀಜಿ ಅವರ ಕೆಲಸಗಳನ್ನು ಪ್ರಮಾಣಿಕವಾಗಿ ಮುಂದುವರೆಸಿದ ಮಹಾನ್ ವ್ಯಕ್ತಿ.  ಸ್ವಾತಂತ್ರ್ಯ ಪೂರ್ವದಲ್ಲಿ ಸುಭಾಸ್ಚಂದ್ರ ಭೋಸ್ ಹಾಗೂ ಸ್ವಾತಂತ್ರ್ಯ ನಂತರ ಲಾಲಬಹದ್ದೂರು ಶಾಸ್ತ್ರೀ ಎರಡು ಧೃವತಾರೆಗಳಾಗಿದ್ದಾರೆ. ಮಹಾತ್ಮಾಗಾಂಧೀಜಿ ನಿಜವಾದ ವಾರಸುದಾರ ಲಾಲಬಹದ್ದೂರ ಶಾಸ್ತ್ರೀಜಿ. ಅವರ "ಜೈ ಜವಾನ್ ಜೈಕಿಸಾನ್ ಘೋಷವಾಕ್ಯ ಇಂದಿಗೂ ಜೀವಂತವಾಗಿದೆ  ಎಂದು ಹೇಳಿದರು.

ಸಂಸದರಾದ ಶಿವಕುಮಾರ ಉದಾಸಿ ಅವರು ಮಾತನಾಡಿ, ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಇಬ್ಬರೂ ನಾಯಕರು ಆದರ್ಶ ಪ್ರಾಯರು.  ಲಾಲಬಹದ್ದೂರ ಶಾಸ್ತ್ರೀ ಅವರ ಕೈಗಾರಿಕಾ ನೀತಿ ಮಾದರಿಯಾಗಿದೆ. ಅವರ ಸೇವೆ ಇನ್ನೂ ಸ್ವಲ್ಪ ಲಭ್ಯವಾಗಿದ್ದಾರೆ ಭಾರತ ಸಂಪತ್ತಭರಿತದೇಶವಾಗುತ್ತಿತ್ತು. ಮಕ್ಕಳು ಹಾಗೂ ಯುವ ಸಮೂಹ ಗ್ರಂಥಾಲಯಗಳಿಗೆ ಹೋಗಿ ಗಾಂಧೀಜಿ ಹಾಗೂ ಲಾಲಹದ್ದೂರ ಶಾಸ್ತ್ರೀ ಅವರ ಜೀವನ ಕುರಿತು ಓದಿ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಅವರು  ಸರಳ  ವ್ಯಕ್ತಿಹೊಂದಿದ ಮಹಾನ್ ಮೇಧಾವಿಗಳು. ದೇಶದ ಬಡತನ ಹೋಗಲಾಡಿಸಲು ಹೋರಾಟಮಾಡಿದ ಮಹಾನುಭಾವರು ಎಂದು ಹೇಳಿದರು.

ವಿಶೇಷ ಉಪನ್ಯಸಕರಾಗಿ ಭಾಗವಹಿಸಿದ ಸರ್ಕಾರಿ  ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಡಾ.ಪ್ರಮೋದ ನಲವಾಗಲ ಅವರು ಮಾತನಾಡಿ, ಗಾಂಧೀಜಿ ಅವರು ಸತ್ಯ ಹಾಗೂ ಅಹಿಂಸೆಯಿಂದ ಮಹಾತ್ಮರಾದ ಅವರು ಜಗತ್ಪ್ರಸಿದ್ಧರಾದರು. ವಿದ್ಯಾಥರ್ಿ ಯುವ ಸಮೂಹ ಇವುಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಗಾಂಧೀಜಿ ಅವರ ತತ್ವಸಿದ್ಧಾಂತಗಳಿಗೆ ಬಹಳಷ್ಟು ಮಹತ್ವವಿದೆ.  ಈ ಸಿದ್ಧಾಂತಗಳು ನೆಮ್ಮಲ್ಲರಿಗೂ ಸ್ಪೂತರ್ಿದಾಯಕವಾಗಿವೆ. 

  ಮಹಾತ್ಮಾಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಅವರ ಆತ್ಮ ಚರಿತ್ರೆಯನ್ನು ನಾವು ಓದಬೇಕು. ಆದರ್ಶ ವಿಚಾರಗಳನ್ನು ಅನುಸರಿಸಬೇಕು ಎಂದು ಹೇಳಿದರು.

   ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಪ್ಲಾಸ್ಟಿಕ್ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಜಿ.ಎಚ್.ಭಟ್ ಅವರು ಭಗದ್ಗೀತೆ, ಪಿ.ಮೋಹಸ್ಸಿನ  ಕುರಾನ್ ಹಾಗೂ ಸಿಸ್ಟರ್ ರೇಜಿನಾ ಮತ್ತು ಟೆರಿನ್ ಬೈಬಲ್ ವಾಚಿಸಿದರು.

      ಹಿಂದೂಸ್ತಾನಿ ಹಾಡುಗಾರರಾದ ವಾಣಿ ಕಣೇಕಲ್  ಹಾಗೂ ಸಂಗಡಿಗರು  ಗಾಂಧೀಜಿ ಅವರಿಗೆ ಪ್ರಿಯವಾದ  ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

 ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ,ಜಿ.ಪಂ.ಸದಸ್ಯ ಸಿದ್ದರಾಜ ಕಲಕೋಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಪೌರಾಯುಕ್ತ ಬಸವರಾಜ ಜಿದ್ದಿ ಇತರರು ಉಪಸ್ಥಿತರಿದ್ದರು.

     ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ  ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಉಪನಿದರ್ೆಶಕಿ ಶಶಿಕಲಾ ಹುಡೇದ ಅವರು ವಂದಿಸಿದರು.

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಪ್ರಯುಕ್ತ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪುತ್ಥಳಿಗೆ ವಿಧಾನಸಭೆ ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಪುಷ್ಪನಮನ ಸಲ್ಲಿಸಿದರು.