ಎಲ್ಲ ಅಂಗನವಾಡಿಗಳಿಗೂ ಸ್ವಂತ ಕಟ್ಟಡ ನಿರ್ಮಿಸುವ ಗುರಿ: ಶಾಸಕ ಸವದಿ

Goal is to build own building for all Anganwadis: MLA Savadi

ಅಥಣಿ 17: ಅಂಗನವಾಡಿ ಕೇಂದ್ರಗಳ ಮೂಲಕ ಚಿಕ್ಕ ಮಕ್ಕಳಿಗೆ ಶಿಕ್ಷಣ, ಸಂಸ್ಕಾರಗಳ ಜೊತೆಗೆ ಗುಣಮಟ್ಟದ ಪೌಷ್ಠಿಕ ಆಹಾರ ಜೊತೆಗೆ ಗರ್ಭಿಣಿ ಸ್ತೀಯರಿಗೆ ಮತ್ತು ಬಾಳಂತಿಯರಿಗೂ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಸ್ಥಳೀಯ ದೇಶಪಾಂಡೆ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.  

ಪುರಸಭಾ ವ್ಯಾಪ್ತಿಯ  27. ವಾರ್ಡಗಳಲ್ಲಿ 54  ಮತ್ತು ತಾಲೂಕಿನಾದ್ಯಂತ ಒಟ್ಟು 338 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು ಅಥಣಿ ಪಟ್ಟಣ ಸೇರಿದಂತೆ ಅನೇಕ ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ,  ಸಮುದಾಯ ಭವನ ಸೇರಿದಂತೆ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಅಂಗನವಾಡಿಗಳಿಗೂ ಸ್ವಂತ ಕಟ್ಟಡ ನಿರ್ಮಿಸುವ ಗುರಿ ತಮ್ಮದಾಗಿದೆ ಎಂದರು.   

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಂಜುನಾಥ ಸೌಂದಲಗೇಕರ ಶಾಸಕ ಲಕ್ಷ್ಮಣ ಸವದಿ ಇವರನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಪುರಸಭಾ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರನ್ನು ಹಾಗೂ ಇಲಾಖಾ ಅಧಿಕಾರಿ ಮಂಜುನಾಥ ಸೌಂದಲಗೇಕರ ಇವರನ್ನು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಿಬ್ಬಂದಿ ಸತ್ಕರಿಸಿದರು.   

ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಮಲ್ಲೇಶ ಹುದ್ದಾರ, ರವಿ ಬಡಕಂಬಿ, ರಾಜಶೇಖರ ಗುಡೋಡಗಿ, ಮಲ್ಲಿಕಾರ್ಜುನ ಬುಟಾಳಿ, ನರಸು ಬಡಕಂಬಿ, ಧುರೀಣರಾದ ಅವಿನಾಶ ಜಾಧವ, ನಾನಾಸಾಹೇಬ ಜಾಧವ, ಹಿರಿಯ ಮೇಲ್ವಿಚಾರಕಿ ಬಿ.ಎಚ್‌.ಅಲಗೂರ, ಮೇಲ್ವಿಚಾರಕಿಯರಾದ ಎಸ್‌.ಬಿ.ಮಗದುಮ್, ಜ್ಯೋತಿ ಚವ್ಹಾಣ, ಪ್ರೀಯದರ್ಶನಿ ಬಿರಾದಾರ, ರೂಪಶ್ರೀ ಕೊಡತಿ, ಅಂಗನವಾಡಿ ಕಾರ್ಯಕರ್ತೆ ಸವೀತಾ ಕೊಟ್ಟಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು