ದೇವರಹಿಪ್ಪರಗಿ 26: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ವಿಚಾರವಾಗಿ ಪಟ್ಟಣದ ಜಡೆ ಮಠದ ಷ.ಬ್ರ.ಶ್ರೀ ಜಡಿ ಸಿದ್ದೇಶ್ವರ ಶಿವಾಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಅತ್ಯಂತ ನೋವಿನ ಸಂಗತಿ. ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಟೆರೆರಿಸ್ಟ್‌ಗಳು ಅಮಾನುಷ ಕೃತ್ಯ ಮೆರೆದಿದ್ದಾರೆ.ಇದು ನಿಜವಾಗಲೂ ಖಂಡನೀಯ ಕೃತ್ಯವಾಗಿದೆ. ಇದನ್ನು ದೇಶದ ಪ್ರತಿಯೊಬ್ಬರು ಖಂಡಿಸಲೇಬೇಕಿರುವಂತದ್ದು.ನಮ್ಮ ದೇಶ ಶಾಂತಿ, ಸಹೋದರ ಭಾವವನ್ನ,ಪ್ರೀತಿಯನ್ನ ಹಂಚುವಂತ ದೇಶ ನಮ್ಮ ಭಾರತ.ಈ ಕೃತ್ಯವನ್ನು ಎಲ್ಲರೂ ಖಂಡಿಸಲೇಬೇಕು. ಭಯೋತ್ಪಾದನೆಯನ್ನ ಹೊಗಲಾಡಿಸಬೇಕಂತ ಸರ್ಕಾರವೂ ಸಹ ಈಗಾಗಲೇ ಕ್ರಮಕೈಗೊಳ್ತಿದೆ. ಇದಕ್ಕೆ ಜನರ ಸಹಕಾರ ಬೇಕಾಗಿದೆ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಭಾಷಾತೀತವಾಗಿ ನಾವೆಲ್ಲರೂ ಕೂಡ ಭಾರತೀಯತೆಯ ಅಖಂಡತ್ವವನ್ನ ಕಾಪಾಡಿಕೊಳ್ಳಬೇಕಿದೆ, ಅದು ನಮ್ಮ ಕರ್ತವ್ಯ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಾವೆಲ್ಲರೂ ಭಾರತೀಯರು ಎನ್ನುವಂತ ಭಾವನೆ ಬರಬೇಕಿದೆ. ನಾವೆಲ್ಲಾ ಭಾರತೀಯರಾಗಿ ನಮ್ಮ ದೇಶ, ರಾಷ್ಟ್ರಗೀತೆಯನ್ನ ಗೌರವಿಸಬೇಕು. ನಮ್ಮ ರಾಷ್ಟ್ರ ಧ್ವಜವನ್ನ ಎತ್ತಿ ಮೆರೆಯಬೇಕು. ನಮ್ಮ ಸಂವಿಧಾನವನ್ನ ಗೌರವಿಸಬೇಕು ಎಂದರು.
ಅಂಖಂಡ ಭಾರತೀಯ ಭಾವನೆ ನಮ್ಮೆಲ್ಲರಲ್ಲೂ ಬರಬೇಕಾಗಿದೆ. ಭಾರತದ 145 ಕೋಟಿ ಜನರೂ ಕೂಡ ಈ ಘಟನೆಯನ್ನ ಖಂಡಿಸಬೇಕು. ಧರ್ಮದ ಹೆಸರಿನನಲ್ಲಿ ಉಗ್ರರ ಹೇಯ ಕೃತ್ಯ ನಡೆದಿದೆ. ಭಾರತೀಯ ಸೈನಿಕರು ಗಡಿಯನ್ನ ಹಗಲು ರಾತ್ರಿ ಕಾಯ್ತಿದ್ದಾರೆ. ದೇಶವನ್ನ ಕಾಪಾಡುವಾಗ ಎಷ್ಟೋ ಜನ ಸೈನಿಕರು ಹತ್ಯೆಯಾಗ್ತಿದ್ದಾರೆ. ಅಂತ ಪರಿಸ್ಥಿತಿ ಇದೆ ಇದಕ್ಕೆ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ತದೆ. ಎಲ್ಲರೂ ಒಟ್ಟಾಗಿ ಈ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಧೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.