ಬೆಳಗಾವಿ 25: ಹಳೆಯ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವದು ಶ್ಲಾಘನೀಯವೆಂದು ಎಂ.ಎನ್.ಹಳ್ಳಿಕೇರಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ 2001-02 ನೇ ಸಾಲಿನ ಕೆ ಎಲ್ ಇ ಸಂಸ್ಥೆಯ ಜಿ.ಎ. ಸಂಯುಕ್ತ ಮಹಾವಿದ್ಯಾಲಯದ ಪಿಯೂಸಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುಗಳು ವಿದ್ಯಾರ್ಥಿಗಳು ಮಾರ್ಗದರ್ಶನ ಮಾಡುವದಲ್ಲದೆ ಜೀವನದಲ್ಲಿ ನೆಲೆ ನಿಲ್ಲುವದನ್ನು ಹೇಳಿಕೊಡುತ್ತಾರೆ. ಅಂಥ ಶಿಕ್ಷಕರನ್ನು ನೆನೆದು ಗುರುವಂದನೆ ಆಯೋಜಿಸಿರುವದು ಸಂತೋಷದ ವಿಷಯವಾಗಿದೆ ಎಂದರು.
ನಿವೃತ್ತ ಶಿಕ್ಷಕರಾದ ಡಿ.ಬಿ.ಕೋಳಿ, ಎಸ್.ಎಸ್.ಬಿಂಜವಾಡಗಿ, ಸೋಮಶೇಖರ ಖೋದನ್ನವರ, ಎಂ. ಆರಿ್ಶವನಾಯ್ಕರ, ಎಸ್.ಎನ್.ಮಡಿವಾಳರ, ಎಂ.ವಿ.ಸಿಂದಗಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಒಂದೇಡೆ ಸೇರಿಕೊಂಡು ಕಲಿಸಿದ ಗುರುಗಳನ್ನು ನೆನೆಯುವ ಸತ್ಸಂಪ್ರದಾಯ ಎಲ್ಲೆಡೆ ಬೆಳೆಯುತ್ತಿರುವದು ಒಳ್ಳೆಯ ಸಂಪ್ರದಾಯ ಎಂದರು. ಸಿ.ಕೆ.ಉಣಕಲ್ ಅದ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಇಟಗಿ ಇವರು ಗುರುಗಳ ತೈಲವರ್ಣ ಚಿತ್ರ ರಚಿಸಿ ಒಪ್ಪಿಸಿದರು. ಕರ್ನಾಟಕ ಸರ್ಕಾರದ ವಸತಿ ಸಚಿವರ ಕಾರ್ಯದರ್ಶಿ ಹಸನ್ ತಹಸಿಲ್ದಾರ್, ಪ್ರಸ್ತುತ ಜಿ.ಎ ಕಾಲೇಜಿನ ಪ್ರಾಂಶುಪಾಲರಾದ ಆರ್ .ಎಸ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಗುರುಗಳ ಪಾದಪೂಜೆಯನ್ನು ಶಿವಕುಮಾರ್ ಹಿರೇಮಠ ಹಾಗೂ ಸಂಗೀತ ಕುಡಚಿ ಮತ್ತು ಸಂತೋಷ್ ಹಿರೇಮಠ ನೆರವೇರಿಸಿದರು. ಪುಷ್ಪಲತಾ ಯಡ್ರಾವಿ ಹಾಗೂ ಆಶಾ ಹಾವನವರ, ಲಕ್ಷ್ಮಣ್ ಕೆ ಡೊಂಬರ್. ಹಾಗೂ ಮಹಾಂತೇಶ್ ಪಡಿ ಪಾಟೀಲ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಜಯಶ್ರೀ ವಾಲಿಶೆಟ್ಟಿ ಹಾಗೂ ಈರಮ್ಮ ಬಾಗೇವಾಡಿ ನಿರೂಪಿಸಿದರು. ರುದ್ರ್ಪ ಕುರ್ಲಿ ಸ್ವಾಗತಿಸಿದರು. ಬಾಳಪ್ಪ ಮಕಾಟೆ ವಂದಿಸಿದರು.