ಪಟ್ಟಣದಲ್ಲಿ ಹನುಮ ಜಯಂತೋತ್ಸವ
ಶಿಗ್ಗಾವಿ 13: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ಶ್ರೀ ನೇರದೃಷ್ಟಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮತ್ತು ಧವನದ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರ, ಕುಂಕುಮಾರ್ಚನೆ, ಅಭಿಷೇಕ, ತೊಟ್ಟಿಲೋತ್ಸವ ನಂತರ ಪ್ರಸಾದ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ನೇರ ದೃಷ್ಟಿ ಆಂಜನೇಯ ಸೇವಾ ಸಮಿತಿ ಟ್ರಸ್ಟ್ ಪದಾಧಿಕಾರಿಗಳಾದ ಸಿ.ವ್ಹಿ.ಚಿಕ್ಕಮಠ, ಮಹಾದೇವ ಅಡರಕಟ್ಟಿ, ಜಗದೀಶ ಶೇಜವಾಡಕರ, ಚಂದ್ರು ಸೊಲಭಕ್ಕನವರ, ಓಂಕಾರೇಶ್ವರ ಆಲೂರ, ಸಿ.ಎಸ್.ಕಲ್ಲಮನಿ, ಮಂಜು ಭಜಂತ್ರಿ, ಸಿದ್ದು ಮೆಳ್ಳಳ್ಳಿ, ಸುಧಾಕರ ದೈವಜ್ಞ ಸೇರಿದಂತೆ ಮಂಜುನಾಥ ಶೇಜವಾಡಕರ, ಪರಮೇಶ ಅಂದಲಗಿ, ಮಂಜುನಾಥ ಹಾವೇರಿ ಹಾಗೂ ಹೌಸಿಂಗ್ ಬೋರ್ಡ ಕಾಲನಿಯ ಸದ್ಬಕ್ತರು ಉಪಸ್ಥಿತರಿದ್ದರು .ಭಾಕ್ಸ ಸುದ್ದಿ : ಪಟ್ಟಣದ ಕಾರ ನಿಲ್ದಾಣದ ಹತ್ತಿರವಿರುವ ಆಂಜನೇಯನ ಸನ್ನಿಧಿಯಲ್ಲಿ ವೀರ ಕೇಸರಿ ಆಂಜನೇಯ ಸೇವಾ ಸಮಿತಿವತಿಯಿಂದ ಹನುಮ ಜಯಂತಿ ನಿಮಿತ್ಯ ವಿಶೇಷ ಪೂಜೆಯೊಂದಿಗೆ ಅನ್ನ ಸಂತಪರ್ಣೆ ನೇರವೇರಿತು.