ಬ್ಯಾಡಗಿ. 12 : ರಾಜ್ಯದ 9 ಜಿಲ್ಲೆಯ ಸೇರಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಹಾವೇರಿ ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ಬ್ಯಾಡಗಿ ಮಾಜಿ ಸೈನಿಕರ ಸಂಘ ಹಾಗೂ ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಭ್ರಷ್ಟಾಚಾರ ವಿರೋಧಿ ಜನಾಂದೊಲನ ನ್ಯಾಸ ಕಮಿಟಿ ಇವರ ಸಯುಕ್ತಾಕ್ಷರದಲ್ಲಿ ಇಂದು ತಹಶೀಲ್ದಾರ್ ಹೇಳಿದರು.
ಪ್ರತಿಭಟನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸೈನಿಕ ಹಾಗೂ ಭ್ರಷ್ಟಾಚಾರ ವಿರೋಧಿ ಜನಾಂದೊಲನ ನ್ಯಾಸ ಕಮಿಟಿಯ ರಾಜ್ಯ ಸಂಚಾಲಕರು ಎಂ ಡಿ ಚಿಕ್ಕಣ್ಣನವರ್ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ಮುಚ್ಚುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅಷ್ಟೇ ಅಲ್ಲದೆ ಪ್ರಾದೇಶಿಕವಾಗಿ ಆಯಾ ಜಿಲ್ಲೆಗಳ ಸರ್ವಾಂಗಿಣ ಅಭಿವೃದ್ಧಿಗೆ ಮಾರಕವಾಗಬಹುದು ಹಾಗಾಗಿ ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ತೀರ್ಮಾನವನ್ನು ರದ್ದುಪಡಿಸಿ ಯಥಾಸ್ಥಿತಿಯಲ್ಲಿ ವಿವಿಗಳನ್ನು ಮುಂದುವರೆಸಬೇಕು ಒಂದು ವೇಳೆ ಸರ್ಕಾರವು ತಮ್ಮ ಈ ನಿರ್ಧಾರವನ್ನು ಬದಲಿಸದೆ ಇದ್ದಲ್ಲಿ ಜಿಲ್ಲೆಯ ಎಲ್ಲಾ ನಿವೃತ್ತ ನೌಕರರು ಹಾಗೂ ಮಾಜಿ ಸೈನಿಕರು ಮತ್ತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಎಮ್ ಎ ಬಣಕಾರ. ವಸಂತ್ ನಿ ಮಾಳಪ್ಪನವರ. ಆರ್ ಬಿ ಹೊಸಳ್ಳಿ, ಪ್ರಭು ಪಾಟೀಲ್, ಎಂ ಆರ್ ಕೊತ್ವಾಲ್, ಕೆಎನ್ ಹುಚ್ಚೇರ್ ,ಮಾದೇವಪ್ಪ ಸಂಕಣ್ಣನವರ್, ಎಂ ಕೋರಿ ಶೆಟ್ಟರ್, ಎಂ ಎಸ್ ಕಲ್ಯಾಣಿ, ಸಿ ಎಸ್ ಪಾಟೀಲ, ಎಸ್ ಎಸ್ ಬಿದರಿ, ಶ್ರೀಕಾಂತ್ ಹುಣಸಿಮರದ, ಆರ್ ಎಸ್ ತೊಪ್ಪಲ. ಎಸ್ ಕೆ ಗುರ್ನವರಿ್್ಪ ವಿ ಗಂಗಪ್ಪನವರ. ರಮೇಶ್ ಮೊರೆ ,ಬಸವರಾಜ್ ಭೀಮಾ ನಾಯ್ಕರ್ ಹಾಗೂ ಅನೇಕರು ಉಪಸ್ಥಿತರಿದ್ದರು.