ಪ್ರಜ್ಞಾವಂತ ಸಮಾಜವಿದ್ದರೂ ಇಲ್ಲದ ಆರೋಗ್ಯ ಭದ್ರತೆ

ಬ್ಯಾಡಗಿ09: ಪ್ರಜ್ಞಾವಂತರು ಹೆಚ್ಚಾಗಿರುವ ಕಾಲಘಟ್ಟದಲ್ಲಿಯೇ ಸಮಾಜ ಆರೋಗ್ಯ ಭದ್ರತೆಯನ್ನು ಕಳೆದುಕೊಳ್ಳುತ್ತಿರುವುದು ದುರಂತ, ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಆರೋಗ್ಯವಂತ ದೇಶಗಳೇ ನೂರಾರು ಕುತ್ತುಗಳನ್ನು ಎದುರಿಸುತ್ತಿವೆ ಎಂದು ಡಾ.ಅನಿರುದ್ಧ ದಾಸ್ ಖೇದ ವ್ಯಕ್ತಪಡಿಸಿದರು.

  ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಪಟ್ಟಣದ ಬಿಇಎಸ್ ವರ್ತಕರ ಮಹಾವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ (ಎನ್ಎಸ್ಎಸ್) ಘಟಕ ದಾವಣಗೆರೆಯ ಬಾಪೂಜಿ ದಂತ ಮಹಾವಿದ್ಯಾಲಯ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರವ ನ್ನುದ್ದೇಶಿಸಿ ಮಾತನಾಡಿದ ಅವರು, ರೋಗಗಳು ಬಡವ ಶ್ರೀಮಂತರೆನ್ನದೇ ಏರಗುತ್ತಿವೆ ಹಿಂದಿನಂತೆ ಜೀವನ ಸುಲಭ ಎನ್ನುವ ಮಾತುಗಳಲ್ಲಿ ಉಳಿದಿಲ್ಲ, ಒತ್ತಡದ ಕೆಲಸಗಳಿಂದಾಗಿ ಜೀವನ ಶೈಲಿಯಲ್ಲಿ ಏರುಪೇರಾಗಿ ಹಣವಂತರೂ ಸಹ ದೀರ್ಘ ಕಾಲದ ರೋಗದಿಂದ ನರಳುತ್ತಿದ್ದಾರೆ, ಕನಿಷ್ಠ ಪಕ್ಷ ಉಚಿತ ಆರೋಗ್ಯ ಶಿಬಿರಗಳಲ್ಲಿ ಜನರು ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯದ ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು.

 ರೋಗ ತಗುಲಿದ ಬಳಿಕ ವೈದ್ಯಕೀಯ ಸೇವೆಗೆ ಮೊರೆ ಹೋಗುವುದು ಬುದ್ಧಿವಂತರ ಲಕ್ಷಣವಲ್ಲ, ರೋಗ ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳುವುದು ಸೂಕ್ತ, ಮನುಷ್ಯ ಈಗಾಗಲೇ ತನ್ನ ಸ್ವಾರ್ಥಕ್ಕಾಗಿ ಶುದ್ಧ ಕುಡಿಯುವ ನೀರು ಗಾಳಿ ಇನ್ನಿತರ ವಸ್ತುಗಳನ್ನು ನಾಶಪಡಿಸುತ್ತಿದ್ದಾನೆ, ಮುಂದಿನ ಪೀಳಿಗೆಯಲ್ಲಿ ಮಕ್ಕಳು ಹುಟ್ಟುವಾಗಲೇ ಒಂದೊಂದು ರೋಗದಿಂದ ಬಳಲುವಂತಹ ಆಶ್ಚರ್ಯವೇನಿಲ್ಲ ಎಂದರು.ಮುಖದ ಸೌಂದರ್ಯಕ್ಕೆ ಹಲ್ಲುಗಳು ಮುಖ್ಯ: ಡಾ.ಡಿಂಪಲ್ ಚಾವ್ಲಾ ಮಾತನಾಡಿ, ಮುಖದ ಸೌಂದರ್ಯಕ್ಕೆ ಹಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ, ವಯೋ ಸಹಜವಾಗಿ ಬೀಳುವ ಹಲ್ಲುಗಳ ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಇತ್ತೀಚೆಗೆ ಕೇವಲ 40 ವರ್ಷ ಪೂರೈಸಿದವರಲ್ಲಿ ದಂತಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತಿವೆ, ಇದೊಂದು ಅಪಾಯಕಾರಿ ಸೂಚನೆ ಎಂದರು. ಒಟ್ಟು 16 ವೈದ್ಯಾಧಿಕಾರಿಗಳ ತಂಡವು ಉಚಿತ ಶಿಬಿರದಲ್ಲಿ ಪಾಲ್ಗೊಂಡಿತ್ತು, ಸುಮಾರು 120ಕ್ಕೂ ಹೆಚ್ಚು ರೋಗಿ ಗಳು ತಪಾಸಣೆ ಮಾಡಿಸಿಕೊಂಡು ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು. ಡಾ.ರಕ್ಷಿತಾ ಸೇರಿದಂತೆ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ ಎನ್ಎಸ್ಎಸ್ ಘಟಕಾಧಿಕಾರಿಗಳಾದ ಎನ್.ಎಸ್.ಪ್ರಶಾಂತ, ಪ್ರಭು ದೊಡ್ಮನಿ, ಸುರೇಶ ಪಾಂಗೆ, ಸಂತೋಷ ಉದ್ಯೋಗಣ್ಣನವರ, ಶಶಿಧರ ಮಾಗೋಡ, ಮಲ್ಲಿಕಾಜರ್ುನ ಕೋಡಿಹಳ್ಳಿ ಹಾಗೂ ಇನ್ನಿತರರರು ಉಪಸ್ಥಿತರಿದ್ದರು