ಚಿಕ್ಕೋಡಿ 20: ನಮ್ಮ ಸೈನಿಕರು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಅಪ್ರಚೋದಕ ದಾಳಿ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದ ಪಾಕಿಸ್ತಾನ ಎದೆ ನಡುಗಿಸುವ ಉತ್ತರ ನೀಡಿದೆ. ಭಾರತೀಯ ಸೈನಿಕರ ವೀರೋಚಿತ ಹೋರಾಟಕ್ಕೆ ಎಲ್ಲರೂ ಬೆಂಬಲಿಸೋಣ ಎಂದು ಮಾಜಿ ಸಚಿವೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ಸೈನಿಕ ಹಿಂದೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ಅವರ ಮನಸ್ಥೆರ್ಯ ಹೆಚ್ಚಿಸಲು ರಾಜ್ಯಾದ್ಯತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ದೇಶದ ವಿಷಯ ಬಂದಾಗ ಪಕ್ಷಾತೀತ,ಜ್ಯಾತ್ಯಾತೀತವಾಗಿ ಎಲ್ಲರೂ ಒಂದಾಗಿ ದೇಶದ ಬೆನ್ನೆಲುಬುವಾಗಿ ನಿಲ್ಲಬೇಕು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿದರು.
ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು, ಸದಲಗಾದ ಡಾ.ಶ್ರದ್ಧಾನಂದ ಮಹಾಸ್ವಾಮಿಗಳು, ಶಾಸಕರಾದ ಡಿ.ಎಂ.ಐಹೊಳೆ, ಶಾಸಕ ನಿಖಿಲ ಕತ್ತಿ,ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಸಂಜಯ ಕವಟಗಿಮಠ, ಸಂಜಯಗೌಡ ಪಾಟೀಲ, ದುಂಡಪ್ಪ ಬೆಂಡವಾಡೆ,ಶಾಂಭವಿ ಅಶ್ವಥಪುರ, ಚಂದ್ರಶೇಖರ ಅರಭಾವಿ ಸೇರಿದಂತೆ ಮಾಜಿ ಸೈನಿಕರು, ವೈಧ್ಯಕೀಯ ಸಂಘದ ಸದಸ್ಯರು, ಮಹಿಳೆಯರು, ಯುವಕರು, ಕೆಎಲ್‌ಇ, ಸಿಎಲ್‌ಇ ಹಾಗೂ ಸಿಟಿಇ ಸಂಸ್ಥೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.