ಮುಂಚಿತವಾಗಿ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ನಿರೀಕ್ಷೆ

Southwest monsoon expected to start early in Kerala

ಹೊಸದಿಲ್ಲಿ 20: ಕಳೆದ ವಾರ ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ, ಮೇ 27 ಕ್ಕಿಂತ ಮುಂಚಿತವಾಗಿ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಂಗಳವಾರ ಬಗ್ಗೆ ಐಎಂಡಿ ಮಾಹಿತಿ ನೀಡಿದ್ದು, ಸದ್ಯದ ಪರಿಸ್ಥಿತಿ ಪ್ರಕಾರ ನೈಋತ್ಯ ಮಾನ್ಸೂನ್ 4-5 ದಿನಗಳು ಬೇಗನೇ ಆರಂಭವಾಗಬಹುದು ಎಂದಿದೆ.

ಒಂದು ವೇಳೆ ಇದು ನಿಜವಾಗಿದ್ದರೆ, ವರ್ಷದ ಮಾನ್ಸೂನ್ 2010 ನಂತರ ಮೊದಲ ಬಾರಿ ಬೇಗನೇ ಆರಂಭವಾಗಲಿದೆ.

ಸಾಮಾನ್ಯವಾಗಿ ಕೇರಳದಲ್ಲಿ ಮಳೆ ಆರಂಭವಾಗುವ ದಿನಾಂಕ ಜೂನ್ 1. ಇದು ದೇಶದಲ್ಲಿ ನಾಲ್ಕು ತಿಂಗಳ ಕಾಲ ನಡೆಯುವ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ. ಮಾನ್ಸೂನ್ ಮಾರುತಗಳು ಬಲಗೊಳ್ಳುತ್ತಿದ್ದಂತೆ, ದೇಶದ ಉಳಿದ ಭಾಗಗಳಿಗೆ ಮಾನ್ಸೂನ್ ಮುಂದುವರಿಯುತ್ತದೆ. ಜುಲೈ ಮಧ್ಯದ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

ಸಾಗರ ಮತ್ತು ವಾತಾವರಣದ ಎಲ್ಲಾ ಅಂಶಗಳು ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದೆಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮೇ 22 ಸುಮಾರಿಗೆ ಕರ್ನಾಟಕ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.