ಕ್ಯೋಕುಶಿನ್ ಕ್ಯಾಮಂಡೋ ಕಪ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಕಲಬುರಗಿ 19: ಇತ್ತೀಚಿಗೆ ಕೇರಳದಲ್ಲಿ ನಡೆದ 3ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಕ್ಯೋಕುಶಿನ್ ಕ್ಯಾಮಂಡೋ ಕಪ್‌ನಲ್ಲಿ ಕಲಬುರಗಿಯ ಅಕ್ಷಯ್‌ಕುಮಾರ್ ರಾಠೋಡ ನೇತೃತ್ವದ ಎಎಂಆರ್ ಕರಾಟೆ ತರಬೇತಿಕ್ಲಬ್‌ನ 8 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ.
ಚಾಂಪಿಯನ್‌ಶಿಪ್ ನಲ್ಲಿ 15 ವರ್ಷ ವಯೋಮಿತಿ ವರ್ಗದಲ್ಲಿ ಶಿವರಾಜ ಪ್ರಥಮ ಸ್ಥಾನ ಪಡೆದಿದ್ದಾನೆ. ಅದೇರೀತಿ 9 ವರ್ಷ ವರ್ಗದಲ್ಲಿ ವಿಷ್ಣು, 11 ವರ್ಷ ವರ್ಗದಲ್ಲಿಯಧುವೀರ್, 12 ವರ್ಷ ವರ್ಗದಲ್ಲಿ ಶ್ರೇಯಸ್.ವಿ, 11 ವರ್ಷ ವರ್ಗದಲ್ಲಿರುತೀಕ್‌ಕುಮಾರ್, 17 ವರ್ಷ ವರ್ಗದಲ್ಲಿರಾಮಕುಮಾರ್, 27 ವರ್ಷ ವರ್ಗದಲ್ಲಿಅರುಣ್ ಮತ್ತು 32 ವರ್ಷ ವರ್ಗದಲ್ಲಿ ಮೋತಿಲಾಲ್‌ಅವರುಎರಡನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆಎಎಂಆರ್‌ಕರಾಟೆತರಬೇತಿಕ್ಲಬ್ ನ ಅಕ್ಷಯ್‌ಕುಮಾರ್‌ರಾಠೋಡ ಅಭಿನಂದಿಸಿದ್ದಾರೆ.