ಮುಂಡಗೋಡಿನಲ್ಲಿ ಗೋ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಮುಂಡಗೋಡ 25: ಪಟ್ಟಣದ ರಜಾಕಿಯಾ ದರ್ಗಾದ ಹಿಂಭಾಗದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಗೋ ಮಾತೇಯ ಕಡಿದು ಹತ್ಯೆ ಮಾಡಿದ್ದಾರೆ. ಗೋ ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಿ ಗಡಿ ಪಾರು ಮಾಡಬೇಕೆಂದು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡಿಸಿದ್ದರು.
ಇಲ್ಲಿಯ ಶಿವಾಜಿ ಸರ್ಕಲ್ ನಿಂದು ಮುಂಡಗೋಡ ಪೋಲಿಸ ಠಾಣೆ ವರೆಗೂ ಪ್ರತಿಭಟಿಸಿ ಮೆರವಣಿಗೆ ನಡೆಸಿದ ಹಿಂದೂ ಸಂಘಟನೆಯವರು ಹಾಗೂ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಗೋ ಹತ್ಯೆಯ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಘೋಷಣೆ ಕೂಗುತ್ತ ಗೋ ಹತ್ಯೆ ಮಾಡಿದ ಹಂತಕರನ್ನು ಕಠಿಣ ಶಿಕ್ಷೆ ವಿಧಿಸಬೇಕೆಂದು ಹಾಗೂ ಗಡಿ ಪಾರು ಮಾಡಬೇಕೆಂದು ಆಗ್ರಹಿಸಿ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಂಗನಾಥ್ ನೀಲಮ್ಮನವರ ಭರವಸೆ ನೀಡಿದರು.
ಈ ವೇಳೆಗೆ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕರು ಪ್ರಕಾಶ ಬಡಿಗೇರ, ಶಂಕರ ಲಮಾಣಿ, ಮಂಜುನಾಥ ಎಚ್.ಪಿ ತಂಗಮ್ ಚಿನ್ನನ್ ಅಯ್ಯಪ್ಪ ಭಜಂತ್ರಿ, ಫಣಿರಾಜ ಹದಳಗಿ, ಶೇಖರ ಲಮಾಣಿ, ಮಂಜುನಾಥ ಪಾಟೀಲ, ಸುರೇಶ ಕಲ್ಲೋಳ್ಳಿ, ಭರತ ಹದಳಗಿ, ಬಾಬು ವಾಲ್ಮೀಕಿ, ರಾಜೇಶರಾವ್, ಮಂಜುನಾಥ ಶೇಟ್ ನಾಗರಾಜ ಹದಳಗಿ ಸೇರಿದಂತೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.