ರಾಜು ನಾಯ್ಕರ್ ಗೆ ಗೌರವ ಡಾಕ್ಟರೇಟ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ, ಸಮಾಜ ಸೇವಕ ನವನಗರದ ರಾಜು ವ್ಹಿ. ನಾಯ್ಕರ್ ರವರಿಗೆ ಭಾರತೀಯ ವೃತ್ತಿಪರ ಶೈಕ್ಷಣಿಕ ಮಿಷನ್ನ ಭಾಗವಾಗಿರುವ ಬೆಂಗಳೂರಿನ ಭಾರತ ವಚರ್ುವಲ್ ಯುನಿವಸರ್ಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. 

   ಏಪ್ರೀಲ್ 6 ರಂದು ಬೆಂಗಳೂರಿನ ಗುಡ್ ಶೆಫಡರ್್ ಆಡಿಟೋರಿಯಂನಲ್ಲಿ ಜರುಗಿದ ವಿಶ್ವ ವಿದ್ಯಾಲಯದಲ್ಲಿ ಘಟಿಕೋತ್ಸವದಲ್ಲಿ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ ವಿಶೇಷ ಸಾಧನೆ ಮಾಡಿದ 32 ಕ್ಕೂ ಹೆಚ್ಚು ಸಾಧಕರಿಗೆ ಈ ಪದವಿ ಪ್ರದಾನ ಮಾಡಲಾಯಿತು. 

  ಪ್ರಥಮ ದಜರ್ೆ ಗುತ್ತಿಗೆದಾರರಾಗಿ, ಗೃಹ ನಿಮರ್ಾಣ ಮತ್ತು ಕಟ್ಟಡ ಕಾಮರ್ಿಕರ ಸಂಘ, ವುಶೋ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ, ಬಾಗಲಕೋಟ ಕೋ-ಆಪ್ ಬ್ಯಾಂಕಿನ ನಿದರ್ೇಶಕರಾಗಿ, ನವನಗರದ ಶ್ರೀ ಲಕ್ಷ್ಮೀದೇವಿ ಯುವಕ ಸಂಘ ಹಾಗೂ ವಿದ್ಯಾಗಿರಿಯ ವಿವೇಕಾನಂದ ಸೇವಾ ಸಮಿತಿಯ ಅಧ್ಯಕ್ಷರಾಗಿ ಮತ್ತು ಬಾಗಲಕೋಟೆಯ ಬಸವನಾಡು ಗೋ-ಶಾಲಾ ಸಮಿತಿಯ ಉಪಾಧ್ಯಕ್ಷರಾಗಿ ಮಾಡಿದ ಅವರ ಸಮಾಜಮುಖಿ ಕಾರ್ಯಗಳು, ಸಾಮಾಜಿಕ ರಂಗದಲ್ಲಿನ ಸೇವೆಯಲ್ಲಿ ತೊಡಗಿರುವ ರಾಜು ನಾಯ್ಕರ ಅವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ. 

  ವಿಶ್ವವಿದ್ಯಾಲಯದ ರಜಿಸ್ಟ್ರಾರ್, ಡೀನ್ ಡಾ.ಟಿ.ಎಂ. ಸ್ವಾಮಿ, ಹಾಗೂ ಭಾರತೀಯ ಸೇನೆಯ ಗ್ರುಪ್ ಕ್ಯಾಪ್ಟನ್ ಜಿ.ಎಸ್.ವೋರಾ, ಮೇಜರ್ ದುಬೆ, ಆಂಧ್ರ ಪ್ರದೇಶ ದಿಂಡುಗಲ್ನ ಈಮಾಸ್ ಆಗ್ಯರ್ಾನಿಕ್ ಪ್ರೊಡಕ್ಟ್ ಇಂಡಿಯಾ ಲಿ. ಅಧ್ಯಕ್ಷ ರಾಜಾ ಪಾಂಡಿ ವೀರಸ್ವಾಮಿ, ಸೇರಿದಂತೆ ಗೋವರ್ಧನಲಾಲ್, ಡಾ. ರಾಜೇಶ್ಕುಮಾರ, ಡಾ.ವಾಸುದೇವನ್ ನೀರಜ್ ಜಾ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ರಾಜು ವ್ಹಿ. ನಾಯ್ಕರ್ಗೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು, ವಿವಿಧ ಸಮಾಜದವರು ಅಭಿನಂದಿಸಿದ್ದಾರೆ