ಬಿಸಿಪಾಟೀಲರು ಮುತ್ಸದ್ಧಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಬಾರದು: ರಾಮಪ್ಪ

ಲೋಕದರ್ಶನವರದಿ

ರಾಣೇಬೆನ್ನೂರು28: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಗ್ಗೆ ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರು ಹಗುರವಾಗಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಚಾರವಲ್ಲ. ಮತ್ತೆ ಸಿದ್ದರಾಮಯ್ಯನವರ ಬಗ್ಗೆ ಬಿ.ಸಿ.ಪಾಟೀಲರು ಹೀಗೆ ಲಘುವಾಗಿ ಮಾತನಾಡಿದರೆ ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹರಿಹರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೇಳಿದರು.

   ಬುಧವಾರ ಸಂಜೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಶಾಸಕರಾಗಿ ಅನುಭವ ಹೊಂದಿರುವ ಬಿ.ಸಿ.ಪಾಟೀಲರು ಮೇರು ವ್ಯಕ್ತಿತ್ವದ ರಾಜ್ಯ ಮತ್ತು ರಾಷ್ಟ್ರದ ಮುಖಂಡರಾಗಿರುವ ಸಿದ್ದರಾಮಯ್ಯನವರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿರುವುದು ಅವರ ಹತಾಶೆತನವನ್ನು ಎತ್ತಿ ತೋರಿಸುತ್ತದೆ. ಸೋಲಿನ ಭಯದಿಂದ ಪಾಟೀಲರು ಈ ರೀತಿಯಾಗಿ ಮಾತನಾಡಿದ್ದಾರೆ ಎಂದು ಅವರ ಹೇಳಿಕೆಯಲ್ಲಿಯೇ ಗೊತ್ತಾಗುತ್ತದೆ ಎಂದರು.

     ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಶಾಸಕರಾಗಿ ಇದೀಗ ಅನರ್ಃಗೊಂಡು ಬಿಜೆಪಿಯಿಂದ ಸ್ಪಧರ್ೆ ಮಾಡಿರುವ ಪಾಟೀಲರು ಮಾತಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ದುಡ್ಡಿನ ಅಹಂಕಾರದಿಂದ ಈ ರೀತಿಯಾಗಿ ಮಾತನಾಡಬಾರದು. ಮುಂಬೈನಲ್ಲಿದ್ದುಕೊಂಡು ಸರಕಾರವನ್ನು ಬೀಳಿಸುವುದರ ಮೂಲಕ ಬಿಜೆಪಿಯಿಂದ ಪಾಟೀಲರು ಖರೀದಿಗೊಳಗಾದರೆಂದು ಇಡೀ ಸಮಾಜಕ್ಕೆ ಬಹಿರಂಗವಾಗಿದೆ ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದರು.

     ಈ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಬಾರಿ ಪ್ರಚಾರ ಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಡೆ ಕಾಂಗ್ರೆಸ್ ಅಲೆ ಕೇಳಿ ಬರುತ್ತಿದ್ದು, ಕೆ.ಬಿ.ಕೋಳಿವಾಡರ ಗೆಲುವು ಸರಳವಾಗಲಿದೆ. ಕೋಳಿವಾಡರನ್ನು ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರೂ ಸಹ ಶ್ರಮಿಸಬೇಕಾಗಿದೆ ಎಂದರು. ಶಾಸಕಿ ಕುಸಮಾ ಶಿವಳ್ಳಿ, ಕೆಪಿಸಿಸಿ ಕಾರ್ಯದಶರ್ಿ ಪ್ರಕಾಶ ಕೋಳಿವಾಡ, ರಾಜೇಶ್ವರಿ ಪಾಟೀಲ, ಶಾಂತಾ ಗುಜ್ಜಾಳ, ನಿಂಗಪ್ಪ ಗೌಡ್ರ, ಮೃತ್ಯುಂಜಯ ಗುದಿಗೇರ, ಮಂಜಣ್ಣ ಕಂಬಳಿ, ಮಹೇಶ ಕಂಬಳಿ, ನಿಂಗಪ್ಪ ಕೋಡಿಹಳ್ಳಿ, ಆನಂದ ಹುಲಬನ್ನಿ ಸೇರಿದಂತೆ ಮತ್ತಿತರರು ಇದ್ದರು.