ಹಳ್ಳೂರ 16 ಸಂಸ್ಕೃತಿ ಸಂಸ್ಕಾರ ಅನ್ನೋದು ಮನುಷ್ಯನಿಗೆ ಮಹತ್ವದ್ದು ಇತ್ತೀಚಿಗೆ ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ರಸಮಂಜರಿ, ಡಾಲ್ಮಿ ಹಚ್ಚಿ ಅಸ್ಲಿಲ್ ಹಾಡು ಕೇಳುವದರಿಂದ ಯುವಕರು ವ್ಯಸನಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಮಹಾತ್ಮರ ಮಾತು ಕೇಳಿ ಸತ್ಯದ ಕಾಯಕದ ಜೊತೆಗೆ ಸತ್ಯ ಧರ್ಮದ ದಾರಿಯಲ್ಲಿ ನಡೆದು ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಮುಗಖೋಡ ಬಸವ ನಗರದಲ್ಲಿರುವ ಕಂಟೆಮ್ಮ ದೇವಿ ಜಾತ್ರೆ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಥಣಿ ಮುರುಗೇಂದ್ರ ಶಿವಯೋಗಗಳು ಯಾವ ಅಧಿಕಾರ ಅಂತಸ್ತು ಹೆಣ್ಣು ಹೊಣ್ಣಿಗಾಗಿ ಆಸೆ ಪಡಲಿಲ್ಲ ಅವರ ನಡೆಡಿದ್ದು ನುಡಿದಿದ್ದೆ ಪವಾಡ ಭಕ್ತರ ಬೇಡಿಕೆಗಳನ್ನು ಈಡೇರಿಸುವ ದೈವ ಶಕ್ತಿ ಪಡೆದಿದ್ದಾಕ್ಕಾಗಿ ಶಿವಯೋಗಿಗಳೆಣಿಸಿದರು.
ಶೇಗುಣಸಿ ಮಹಾಠ್ ಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿ ಭಕ್ತಿ ಇರುವ ಭಕ್ತರಲ್ಲಿ ದೇವರಿರುತ್ತಾನೆ ಭಾರತ ದೇಶ ಪವಿತ್ರವಾದದ್ದು ಮಕ್ಕಳಿಗೆ ಒಳ್ಳೆ ಸಂಸ್ಕಾರ ಸಂಸ್ಕೃತಿ ಕಲಿಸಿ ಪ್ರವಚನ ಅದ್ಯಾತ್ಮ ದ ಕಡೆ ಗಮನ ಸೆಳೆಸಬೇಕು ಮೊಬೈಲ್ ಟಿವಿಗೆ ಮಾರು ಹೋಗಿ ಸಂಸ್ಕೃತಿ ಹಾಳಾಗುತ್ತಿದೆ ಆದ್ಯಾತ್ಮ ಎಲ್ಲದಕ್ಕಿಂತ ದೊಡ್ದದು ತಾಯಿ ತಂದೆಯರನ್ನು ಗೌರವಿಸಬೇಕು ಬಸವಣ್ಣ ಮಹಾ ಮಾನವತಾವಾದಿ ಜಗತ್ತಿಗೆ ಒಳ್ಳೆ ಸಂದೇಶ ಸಾರಿ ಹೇಳಿ 12ನೇ ಶತಮಾನದಲ್ಲಿ ಬಿಜ್ಜಳ ರಾಜನ ಅರಮನೆ ಮಂತ್ರಿಯಾಗಿ ಸಮಾನತೆ ಸ್ತ್ರೀಯರಿಗೆ ಸ್ಥಾನ ಮಾನವನ್ನು ಕಲ್ಪಿಸಿ ಕೊಟ್ಟವರು ಬಸವಣ್ಣವರು ಸ್ತ್ರೀಯರು ಪುರುಷರಷ್ಟೇ ಸಮಾನರು ಅಡುಗೆ ಮನೆಗೆ ಸೀಮಿತವಾಗದೆ ಪುರುಷರಂತೆ ಶಿಕ್ಷಣ ಕಲಿತು ಸಮಾಜದಲ್ಲಿ ಧರ್ಮದ ದಾರಿಯಲ್ಲಿ ಸಾಗುತ್ತಾ ಮುಖ್ಯ ವಾಹಿನಿಗೆ ಬರಬೇಕು ಹೆಣ್ಣು ಗಂಡು ಎಂಬ ಭೇದ ಬಾವ ಮಾಡಬೇಡಿ ಕಂಟೆಮ್ಮ ದೇವಿ ಜಾಗೃವಿದ್ದಾರೆ.
ಗಾಳಿ ನೀರು, ದೇವರು ದಯೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಮುತ್ತು ರತ್ನ ಗಳಾಗಿರಿ ಕಸವಾಗಿ ವ್ಯರ್ಥವಾಗಬೇಡಿ ಸಗಣಿ ಹುಳದಂತೆ ಜೀವನ ವ್ಯರ್ಥವಾಗದೆ ಶರೀರದ ಲಾಭ ಪಡೆದುಕೊಳ್ಳಬೇಕು ಅತೀ ಆಸೆ ಮಾಡದೆ ಇದ್ದಷ್ಟರಲ್ಲಿ ತೃಪ್ತಿ ಪಡಬೇಕು ಯಲ್ಲವನ್ನು ಅಪೇಕ್ಷೆ ಪಡಬೇಡಿ ದೇವರು ಕೊಟ್ಟದರಲ್ಲಿ ತೃಪ್ತಿ ಪಡಿರ. ಉಪವಾಸ ವೃತ ಮಾಡಿದರೆ ತಿನ್ನಲು ಆಹಾರವಿಲ್ಲದವರಿಗೆ ಊಟ ಮಾಡಿಸಿದರೆ ಉಪವಾಸ ವೃತ ಸಾರ್ಥಕವಾಗುತ್ತದೆ, ಸಾತ್ವಿಕ ಆಹಾರ ಸೇವನೆ ಮಾಡೀರಿ ಡಾಭಾ ಸಂಸ್ಕೃತಿ ಅಂಟಿಕೊಂಡು ಧಾಭಾ ಊಟ, ಸಾರಾಯಿ ಕುಡಿದು ಶರೀರ ಹಾಳು ಮಾಡಿಕೊಳ್ಳಬೇಡಿರಿ ಏಳುವಾಗ ದೇವರ ನಾಮಸ್ಮರಣೆ ಮಾಡಿದರೆ ಶುಭವಾಗುವುದು.ಹಗಲಿರುಳು ದುಡಿದ ಹಣವನ್ನು ವ್ಯರ್ಥ, ಕೆಟ್ಟದ್ದಕ್ಕೆ ಉಪಯೋಗಿಸಬೇಡಿರೆಂದು ಹೇಳಿದರು.
ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ದೇವಸ್ಥಾಕ್ಕೆ ಬೆಟ್ಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಈ ಸಮಯದಲ್ಲಿ ಶಿವಶರಣೆ ಸಂಗಮ್ಮ ತಾಯಿ, ಹಳ್ಳೂರ ಸಿದ್ದಾರೂಡ ಮಠದ ಶಿವಾನಂದ ಸ್ವಾಮಿಗಳ. ಗುರು ಹಿರಿಯರು ಉಪಸ್ಥಿತರಿದ್ದರು.