ಯಲ್ಲಾಪುರ- ಭೂಮಿಯ ಮೇಲೆ ಹವಾಮಾನ ವೈಪರೀತ್ಯಗಳಿಂದ ಪರಿಸರ ಹದಗೆಡುತ್ತಿದೆ. ನಾವು ಸುತ್ತಮುತ್ತಲಿನ ಕಾಡಿನ ಬಗ್ಗೆ ಕಾಳಜಿವಹಿಸುವ ಮೂಲಕ ಸಸ್ಯ ಸಂಪತ್ತನ್ನು ವೃದ್ದಿಸಬೇಕಿದೆ. ಜಾಗತಿಕವಾಗಿ ಅಪರೂಪದ ಅರಣ್ಯವು ಈ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿದೆ. ಮನುಷ್ಯನ ಜೀವನಕ್ಕೆ ಆಧಾರವಾದ ಹಸಿರು ಅರಣ್ಯವನ್ನು ರಕ್ಷಿಸಬೇಕಿದೆ.ಎಂದು ಇಡಗುಂದಿ ವಲಯಅರಣ್ಯಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಸವರ್ೋದಯ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯ "ಹಸಿರು ಕನರ್ಾಟಕ ಆಂದೋಲನ"ದ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ ಈ ಭಾಗದ ಅರಣ್ಯಗಳಲ್ಲಿರುವ ಅಪರೂಪದ ಗಿಡಮೂಲಿಕೆಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಬಗೆಗೆ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಮಕ್ಕಳು ಆಧುನಿಕ ಒತ್ತಡಗಳಲ್ಲಿ ಕಳೆದು ಹೋಗದೇ ಪರಿಸರಕ್ಕೆ ಪೂರಕವಾದ ಜೈವಿಕ ಇಂಧನಗಳ ಕುರಿತಾಗಿ ಜಾಗೃತಿವಹಿಸಬೇಕಾಗಿದೆ. ವಿದ್ಯಾಥರ್ಿಗಳು ಪರಿಸರ ಶಿಕ್ಷಣಕ್ಕೆ ಒತ್ತು ನೀಡಬೇಕು ಜೊತೆಗೆ ಪರಿಸರಕ್ಕೆ ಪೂರಕವಾದ ಸಂಶೋಧನೆಗಳನ್ನು ಕೈಗೊಂಡು ನಮ್ಮ ಸಮಾಜದ ಅಭ್ಯುದಯಕ್ಕೆ ಕಾರಣವಾಗಬೇಕಿದೆ. ಎಂದರು.
ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಅಧ್ಯಕ್ಷತೆವಹಿಸಿದ್ದರು. ಉಪವಲಯರಣ್ಯಾಧಿಕಾರಿ ಪ್ರಕಾಶ ಯರಗಟ್ಟಿ, ಅರಣ್ಯ ರಕ್ಷಕರಾದ ಸುಳ್ಯದ ಗೌಡರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರೌಢಶಾಲೆಗೆ ಉತ್ತಮ ಶ್ರೇಯಾಂಕಗಳಿಸಿದ 5 ವಿದ್ಯಾಥರ್ಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿದ ಹಿಮವತಿ ಭಟ್ಟರನ್ನು ಪರಿಸರ ಸಂವಧರ್ಿನಿ ಇಕೋ ಕ್ಲಬ್ ನ ಪರವಾಗಿ ಗೌರವಿಸಿದರು. ಶಿಕ್ಷಕ ಜಿ ಎಸ್ ಗಾಂವ್ಕಾರ ಸ್ವಾಗತಿಸಿದರು., ಸುದರ್ಶನ ಭಟ್ಟ ನಿರೂಪಿಸಿ ವಂದಿಸಿದರು.