ಲೋಕದರ್ಶನ ವರದಿ
ಶಿಗ್ಗಾವಿ 04: ರಾಜ್ಯ ಸಭೆ ಚುನಾವಣೆಗೆ ಅನೇಕ ನಾಯಕರು, ಮುತ್ಸದ್ದಿಗಳು, ಸಮಾಜಸೇವಕರು ಪ್ರಯತ್ನ ಪಡುತ್ತಿದ್ದು ಕಾರಣ ಮಾಜಿ ಸಂಸದ ಮಂಜುನಾಥ ಕುನ್ನೂರ ಸಹಿತ ಆಕಾಂಕ್ಷಿ ಏಕೆಂದರೆ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ದೈವಿ ಪುರುಷ ಅವರ ವ್ಯಕ್ತಿತ್ವವನ್ನು 217 ರಾಷ್ಟ್ರಗಳು ಸ್ವೀಕಾರ ಮಾಡಿವೆ ಆದ್ದರಿಂದ ಅವರ ನೇತೃತ್ವದ ಅಡಿಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಬಿಟ್ಟರೆ ದುರಾಸೆ ಇಲ್ಲ ಎಂದು ಹೇಳಿದರು.
ಪಟ್ಟಣದ ಮಾಜಿ ಸಂಸದರ ಕಾಯರ್ಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ನಾನು ಸಹಿತ ರಾಜ್ಯ ಸಭೆ ಸ್ಥಾನಕ್ಕೆ ಆಕಾಂಕ್ಷಿ ರಾಜ್ಯಸಭಾ ಸದಸ್ಯರಾಗಲು ಸಂಘಟನಾ ಶಕ್ತಿ, ಕ್ರಿಯಾಶೀಲತೆ, ವ್ಯಕ್ತಿತ್ವ , ಸಮಾಜಸೇವೆ, ಅಭಿವೃದ್ದಿ ಕೆಲವೊಂದು ನಾಯಕರ ಗುಣಗಳ ಅವಲೋಕನ ಮಾಡಿದಾಗ ಮತ್ತು ಯಾವುದೇ ಜವಾಬ್ದಾರಿ ಕೊಟ್ಟರು ಸಹಿತ ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿತ್ವ ಮಾಜಿ ಸಂಸದ ಮಂಜುನಾಥ ಕುನ್ನೂರದು.
ಉತ್ತರ ಕನರ್ಾಟಕದಲ್ಲಿ ಮೂರು ಮುಖಂಡರು ಸಹಿತ ಲಿಂಗಾಯತ ಸಮಾಜದ ಪ್ರಭಾವಿ ವ್ಯಕ್ತಿತ್ವವುಳ್ಳ ನಾಯಕರು ಮೂರು ಜನ ಪ್ರಭಲ ಆಕಾಂಕ್ಷಿಗಳು ಪ್ರಭಾಕರ ಕೋರೆ, ಚುನಾವಣೆ ಪೂರ್ವ ಸಂಸದರ ಹುದ್ದೆಗೆ ಆಕಾಂಕ್ಷಿಯಾಗಿದ್ದು ಸಿಗದೇ ಇರುವ ಕಾರಣ ರಮೇಶ ಕತ್ತಿ ಸಹಿತ ಆಕಾಂಕ್ಷಿ, ಧಾರವಾಡ ದಕ್ಷಿಣದ ಮಾಜಿ ಸಂಸದ ಮಂಜುನಾಥ ಕುನ್ನೂರ ಸಹಿತ ನಾನು ಆಕಾಂಕ್ಷಿ ಎಂದು ಹೇಳುತ್ತಾರೆ.
ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ ಮೂಲತ: ಕೃಷಿಕ ಕುಟುಂಬದಲ್ಲಿ ಶಿಗ್ಗಾವಿ ತಾಲೂಕ ವನಹಳ್ಳಿ ಗ್ರಾಮದಲ್ಲಿ ಹುಟ್ಟಿ ಸಮಾಜಸೇವೆಯ ಮೂಲಕ ರಾಜಕೀಯ ಚಟುವಟಿಕೆ ಪ್ರಾರಂಬಿಸಿದ ನ್ಯಾಯವಾದಿ ಎಲ್ಲರಿಗೂ ಚಿರಪರಿಚಿತರು ಹಾಗೂ ಸ್ನೇಹ ಜೀವಿ ಮತ್ತು ಸಂಘ ಜೀವಿ ಇವರು ವಿಧ್ಯಾಬ್ಯಾಸ ಮಾಡುವಾಗಿನಿಂದ ಇವರ ಕ್ರಿಯಾಶೀಲ ಸಂಘಟನೆ ಮೂಲಕ 1973-74 ರಲ್ಲಿ ಕನರ್ಾಟಕ ವಿಜ್ಞಾನ ಮಹಾವಿಧ್ಯಾಲಯದ ಜನರಲ ಸೆಕ್ರೆಟರಿಯಾಗಿ ಆಯ್ಕೆಯಾಗಿ ಅಂದಿನಿಂದ ಇಂದಿನವರೆಗೂ ಸಹಿತ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ 1989-1994, 1995-1999 ಎರಡು ಅವಧಿಗೆ ಶಾಸಕರಾಗಿ ಅನೇಕ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆ ಪಡೆದವರು. 2004 ರಲ್ಲಿ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದರಾಗಿ ಆಯ್ಕೆಯಾಗಿ ಅನೇಕ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿದರು. 1997-1999 ರವರೆಗೆ ಉತ್ತರ ಕನರ್ಾಟಕ ಶಾಸಕರ ಅಭಿವೃದ್ದಿ ಸಮಿತಿ ಕನಿವಿನಿಯರ ಆಗಿ ಸೇವೆ ಸಲ್ಲಿಸಿದ ಅನುಭವ, 1992 - 93 ರಲ್ಲಿ ಕನರ್ಾಟಕ ಕಾನೂನಾತ್ಮಕ ಸಲಹಾ ಸಮಿತಿ ಮತ್ತು ಪೇಪರ ಲೇಡ ಹಾಗೂ ಟೇಬಲ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ, ರಾಷ್ಟ್ರೀಯ ವೀರಶೈವ ಮಹಾಸಭಾ ಕಾರ್ಯಕಾರಿ ಸಮಿತಿಯ ಸದಸ್ಯ, ಹುಬ್ಬಳ್ಳಿ-ಶಿಗ್ಗಾವಿ ನದಿ ಮತ್ತು ನೀರಾವರಿ ಜೋಡಣೆಯ ಜೈ ಕಿಸಾನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು, ಕೇಂದ್ರದ ಹೆಚ್.ಆರ್.ಡಿ ಮತ್ತು ಕೇಂದ್ರ ಶಿಕ್ಷಣ ಮತ್ತು ನೀರು ಮಂಡಳಿ ಸ್ಟ್ಯಾಂಡಿಂಗ್ ಸಮಿತಿ ಸದಸ್ಯರಾಗಿ ಕಾರ್ಯ ಪ್ರವೃತ್ತರಾಗಿದ್ದು ಅಲ್ಲದೇ 2018 ರಲ್ಲಿ ರಾಜ್ಯದಲ್ಲಿ ನೆಡೆದ ಭಾರತೀಯ ಜನತಾ ಪಕ್ಷದ ಚುನಾವಣೆಯಲ್ಲಿ ಪಕ್ಷದ ಸಂಘಟನೆ ಮಾಡಿ ಎಲ್ಲ ಕ್ಷೇತ್ರಗಳಲ್ಲೂ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡಿದ ಹಿನ್ನಲೆಯಲ್ಲಿ ವಿಜಯ ಪತಾಕೆ ಹಾರಿಸುವಂತೆ ಮಾಡಲು ಮಾಜಿ ಸಂಸದ ಮಂಜುನಾಥ ಕುನ್ನೂರ ಅವರ ಶ್ರಮವನ್ನು ಪರಿಗಣಿಸಲೇಬೇಕಾಗುತ್ತದೆ ಆದ್ದರಿಂದ ಇವರನ್ನು ರಾಜ್ಯಸಭಾ ಸ್ಥಾನಕ್ಕೆ ಆಯ್ಕೆಮಾಡಬೇಕೆಂದು ಉತ್ತರ ಕನರ್ಾಟಕ ಜನತೆಯ ಆಸೆಯಾಗಿದೆ ಅಲ್ಲದೇ ಮೋದಿಜೀಯವರ ನೇತೃತ್ವದಲ್ಲಿ ಯಾವುದೇ ಕೆಲಸವಾದರೂ ನಿಭಾಯಿಸಬೇಕು ಎಂಬ ಆಸೆ ಕುನ್ನೂರವರದ್ದಾಗಿದೆ.