ಜಿಲ್ಲೆಯಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ಪರಿಶೀಲನೆ

ಹಾವೇರಿ04:   ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ, ಈ ಯೋಜನೆಗಳ ಅದರ ಸಾಧಕ ಬಾಧಕ ಕುರಿತುಂತೆ ಮಾಚರ್್ 4 ರಿಂದ 12ರವರೆಗೆ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತಿಗಳಿಗೆ ನ್ಯಾಷನಲ್ ಲೆವೆಲ್ ಮಾನೀಟರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸಿರುವ ಮಾನಟರಿಂಗ್ ತಂಡದ ಲಕ್ಷ್ಮೀದೇವಿ ಹಾಗೂ ಡಾ. ಅಕಿಲಾಂಡೇಶ್ವರಿ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಅನುಷ್ಠಾಧಿಕಾರಿಗಳೊಂದಿಗೆ ಚಚರ್ಿಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದೇವೆ. ಪ್ರತಿ ಗ್ರಾಮ ಪಮಚಾಯತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳ ಸಭೆ ನಡೆಸಿ ಚಚರ್ಿಸಲಿದ್ದೇವೆ. ಕೇಂದ್ರ ಯೋಜನೆಗಳ ಆಯ್ದ ಫಲಾನುಭವಿಗಳೊಂದಿಗೆ ಚಚರ್ಿಸಲಿದ್ದೇವೆ. ಸಾರ್ವಜನಕಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಅನುಷ್ಠಾನಾಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ಕೇಂದ್ರ ತಂಡದ ಲಕ್ಷ್ಮೀದೇವಿ ಅವರು ಸೂಚನೆ ನೀಡಿದರು.

     ಮನರೇಗಾ ಯೋಜನೆ ಪಂಚಾಯತ್ ರಾಜ್ ವ್ಯವಸ್ಥೆಯ ಕಾರ್ಯನಿರ್ವಹಣೆ, ಸಾಮಾಜಿಕ ಭದ್ರತೆ ಯೋಜನೆಗಳ ಅನುಷ್ಠಾನ, ಆದರ್ಶ ಗ್ರಾಮ ಯೋಜನೆ, ಎನ್.ಆರ್.ಎಲ್.ಎಂ. ಯೋಜನೆ, ಪಿ.ಎಂ.ಜಿ.ಎಸ್.ವೈ ಯೋಜನೆ,  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸಮಗ್ರ ಜಲಾನಯನ ನಿರ್ವಹಣಾ ಯೋಜನೆ, ಡಿಡಿಯು ಜಿ.ಕೆ.ವೈ ಯೋಜನೆ, ಡಿ.ಐ.ಎಲ್.ಆರ್.ಎಂ.ಪಿ. ಯೋಜನೆಗಳು ಒಳಗೊಂಡಂತೆ ಸ್ವ ಸಹಾಯ ಸಂಘಗಳ ಚಟುವಟಿಕೆಗಳು, ತರಬೇತಿ, ಮಾನವ ಸಂಪನ್ಮೂಲಗಳ ನಿರ್ವಹಣೆ, ಪಂಚಾಯತ್ಗಳ ಕಾರ್ಯನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಲಿದೆ. ಜಿಲ್ಲೆಯಲ್ಲಿ ಅಂತರ್ಜಲ ನಿರ್ವಹಣೆ, ಉದ್ಯೋಗ ಖಾತ್ರಿಯಲ್ಲಿ ಮಾದರಿ ಕಾರ್ಯಗಳು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಗುರುತರ ಸಾಧನೆ ಕುರಿತಂತೆ ಮಾಹಿತಿ ಪಡೆದ ತಂಡ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.

      ಜಿಲ್ಲೆಯ ಹಾವೇರಿ ತಾಲೂಕಿನ ಕರ್ಜಗಿ, ಕುರುಬಗೊಂಡ, ನೆಗಳೂರು, ಹಿರೇಕೆರೂರು ತಾಲೂಕಿನ ಚನ್ನಳ್ಳಿ, ಅರಳಿಕಟ್ಟೆ, ಹುಲ್ಲತ್ತಿ, ಚಿನ್ನಮುಳಗುಂದ ಹಾಗೂ ಶಿಗಾಂವ ತಾಲೂಕಿನ ನಾರಾಯಣಪುರ, ಬಾಡ, ಕೊಣನಕೇರಿ ಭೇಟಿ ನೀಡಲು ಪ್ರವಾಸ ನಿಗಧಿಪಡಿಸಲಾಯಿತು.

    ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದಶರ್ಿ ಜಾಫರ್ ಶರಿಫ್, ಸಾಮಾಜಿಕ ಭದ್ರತಾ ಯೋಜನೆಯ ತಹಶೀಲ್ದಾರ ಪ್ರಶಾಂತ ನಾಲವಾರ, ತಾಲೂಕಾ ಪಂಚಾಯತಿ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಾಹಿತಿ ಒದಗಿಸಿದರು.