ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟನೆ

Inauguration of District Level Industrial Goods Exhibition and Sale Fair

ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟನೆ

ಹಾವೇರಿ  01 : ಇಂದು  ಗುಡಿ   ಕೈಗಾರಿಕೆ  ನಶಿಸುತ್ತಿದ್ದು, ಗೃಹ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ವದೇಶಿ ಗುಡಿ ಕೈಗಾರಿಕೆಗಳನ್ನು  ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರ​‍್ಪ ಮಾನಪ್ಪ ಲಮಾಣಿ ಅವರು  ಹೇಳಿದರು. ಹಾವೇರಿ ನಗರದ   ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಹಾಗೂ  ಹಾವೇರಿ ಗ್ರಾಮೀಣ ಕೈಗಾರಿಕಾ ವಿಭಾಗದ ಸಹಯೋಗದಲ್ಲಿ  ಆಯೋಜಿಸಲಾದ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಕುಶಲಕರ್ಮಿಗಳು, ಅತೀ ಸಣ್ಣ, ಸಣ್ಣ ಕೈಗಾರಿಕೆಗಳು, ಖಾದಿ ಗ್ರಾಮೋದ್ಯೋಗ, ಕೈಮಗ್ಗ ಮತ್ತು ಜವಳಿ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳು ತಯಾರಿಸುವ ಕರಕುಶಲ ವಸ್ತುಗಳು, ಬಿದಿರಿನ ಅಲಂಕಾರಿಕ ವಸ್ತುಗಳು, ಟೇರಾಕೋಟ, ಆಹಾರ ಉತ್ಪನ್ನಗಳು, ಖಾದಿ, ಕೈಮಗ್ಗ, ಜವಳಿ ಉತ್ಪನ್ನಗಳು, ಅಗರಬತ್ತಿ, ಕಸೂತಿ ಸೀರೆಗಳು, ಬ್ಯಾಗ್, ಗೊಂಬೆಗಳು, ಕೃತಕ ಆಭರಣಗಳು ಹಾಗೂ ಇತರೆ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಜರುಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ರಾಮದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಮಾರಾಟಗಾರರು ಭಾಗವಹಿಸಿದ್ದಾರೆ.  ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ವಸ್ತು ಪ್ರದರ್ಶನಕ್ಕೆ ತಪ್ಪದೇ ಬೇಟಿ ನೀಡಿ   ಕರಕುಶಲ ವಸ್ತುಗಳನ್ನು ಖರೀದಿಸ ಬೇಕು ಎಂದು  ಹೇಳಿದರು. ನಗರ ಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ ಮಾತನಾಡಿ, ಸಣ್ಣ ಸಣ್ಣ ಉದ್ಯಮಿಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಈ ಮೇಳ ಆಯೋಜಿಸಲಾಗಿದೆ.  ಗಣಜೂರ್ -ಕೋಳೂರ ಪ್ರದೇಶಲ್ಲಿ 407 ಎಕರೆ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ. 

  ರಸ್ತೆ, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲ ಸೌಲಭ್ಯ ಗಳು ದೊರೆಯಲಿ ವೆ. ಹಾಗಾಗಿ ಜಿಲ್ಲೆಯಲ್ಲಿ ಕೈಗಾರಿಕೆ ಆರಂಬಿಸಲು ಯುವ ಉದ್ಯಮಿಗಳು  ಮುಂದಾಗಬೇಕು ಎಂದು ಕರೆ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌.ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜು ಸಾತೇನಹಳ್ಳಿ  ಹಾಗೂ  ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ  ಎಂ.ಎಂ.ಮೈದೂರ, ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಬೇವಿನಮರದ ಕಾರ್ಯಕ್ರಮ ನಿರೂಪಿಸಿದರು.