ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದ ಮಳೆ: ಕುಮಟಾ ಸಿದ್ದಾಪುರ ರಾಜ್ಯ ಹೆದ್ದಾರಿ ಕೆಲ ಸಮಯ ಬಂದ್

Incessant rains in Uttara Kannada district, Kumta-Siddapur state highway closed for some time

ಕಾರವಾರ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ,ಕುಮಟಾ ಸೇರಿದಂತೆ ಎಲ್ಲೆಡೆಎಡೆಬಿಡದ ಮಳೆ ಮಂಗಳವಾರ ಬೆಳಗಿನಿಂದ ಸುರಿಯುತ್ತಿದೆ. ಕುಮಟಾದಲ್ಲಿ ಅತ್ಯಧಿಕ ಮಳೆಯಾಗುತ್ತಿದೆ.

ಕುಮಟಾ ಸಿದ್ದಾಪುರ ರಾಜ್ಯ ಹೆದ್ದಾರಿ ಕೆಲ ಸಮಯ ಬಂದ್ ಆಗಿತ್ತು. ಶಿರಸಿ ಸಿದ್ದಾಪುರ ಮಧ್ಯೆ ಸಹ ಸಂಚಾರಕ್ಕೆ ಕೆಲ ಸಮಯ ಅಡ್ಡಿಯುಂಟಾಯಿತು.ದಾಂಡೇಲಿ, ಹಳಿಯಾಳ ದಲ್ಲಿ ಸಹ ಮಳೆಯಾಗಿದೆ. ಹೊನ್ನಾವರ ,ಭಟ್ಕಳ, ಅಂಕೋಲಾದಲ್ಲಿ ಮಳೆ ಸುರಿಯುತ್ತಿದೆ.ಸೋಮವಾರ ಸಂಜೆ ಅಂಕೋಲಾ ಶಿರೂರು ನಲ್ಲಿ ಸಿಡಿಲು ಬಡಿದು ತಿಮ್ಮಾಣಿ ಗೌಡ ಶಿರೂರು ಎಂಬ ವೃದ್ಧ ಮೃತಪಟ್ಟ ಘಟನೆ ಸಹ ನಡೆದಿದೆ. ಇವರು ಕಳೆದ ವರ್ಷ ಶಿರೂರು ಗ್ರಾಮದ ಹೆದ್ದಾರಿಯಲ್ಲಿ ನಡೆದ ಮಣ್ಣು ಕುಸಿತ ದುರ್ಘಟನೆಯಲ್ಲಿ ಅಪಾಯದಿಂದ ಪಾರಾಗಿದ್ದರು ಎನ್ನಲಾಗಿದೆ.ಬೆಳಗಿನನಿಂದ ಸೂರ್ಯನ ದರ್ಶನ ಇಲ್ಲ ಉತ್ತರ ಕನ್ನಡದ ಬಹುತೇಕ ತಾಲೂಕುಗಳಲ್ಲಿ ಎಡೆ ಬಿಡದೆ ಸಣ್ಣನೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಆರಂಭವಾದ ಮಳೆ ಸಂಜೆ ಆರು ಗಂಟೆಯಾದರೂ ಬಿಟ್ಟಿಲ್ಲ. ಕೆಲವೊಮ್ಮೆ ರಭಸದ ಮಳೆ ಕಾರವಾರ, ಕುಮಟಾ, ಸಿದ್ದಾಪುರ, ಶಿರಸಿ, ದಾಂಡೇಲಿಯಲ್ಲಿ ಸುರಿದಿದೆ.ಮಂಗಳವಾರ ಬೆಳಗಿನಿಂದ ಸಂಜೆತನಕ ಜಿಲ್ಲೆಯಲ್ಲಿ ಮಳೆ ಬೀಳುತ್ತಲೇ ಇದೆ. ಮಾರ್ಚನಿಂದ ಬಿಸಿಲ ಧಗೆ ಉಂಡಿದ್ದ ಭೂಮಿಗೆ ಮಳೆ ತಂಪೆರಚಿದೆ.ಸೂರ್ಯನ ದರ್ಶನ ಸಹ ಕಾಣದಂತೆ ಆಕಾಶದಲ್ಲಿ ಮೋಡಗಳು ಆವರಿಸಿವೆ. ಪೂರ್ವ ಮುಂಗಾರು ಇದಾಗಿದ್ದು, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ ಪರಿಣಾಮ. ಎಡಬಿಡದೆ ಮಳೆ ಸುರಿಯುತ್ತಿದೆ. ಮುಂದಿನ ಮೂರು ದಿನಗಳ ಕಾಲ ಮಳೆ ಸುರಿಯಲಿದೆ. ನಿನ್ನೆ ಜಿಲ್ಲಾಧಿಕಾರಿ ಕಚೇರಿ ನೀಡಿದ ಸೂಚನೆ ನಿಜವಾಗಿದೆ. ಜನ ಮಳೆಯಲ್ಲಿ ದಿನ ನಿತ್ಯದ ವಹಿವಾಟು ಪ್ರಾರಂಭಿಸಿದರು.ಮಳೆಗೆ ಜನ ನಿಧಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.ಸೋಮವಾರ ಅಲ್ಪ ಪ್ರಮಾಣದ ಮಳೆಯಾಗಿತ್ತು.

ಮಂಗಳವಾರ ಬೆಳಗಿನತನಕ ಕಳೆದ 24 ತಾಸುಗಳಲ್ಲಿ ಬಿದ್ದ ಮಳೆಯ ವಿವರ ಇಂತಿದೆ. ಅಂಕೋಲಾದಲ್ಲಿ 23.9 ಮಿಲಿ ಮೀಟರ್ ಭಟ್ಕಳದಲ್ಲಿ 4.0, ಹಳಿಯಾಳ 5.2, ಹೊನ್ನಾವರ 17.6,ಕಾರವಾರ 10.0 ಕುಮಟಾ 18.9 ಮುಮಡಗೋಡ 20.0 ಸಿದ್ದಾಪುರ 18.4, ಶಿರಸಿ 19.8, ಸುಫಾ 5.9, ಯಲ್ಲಾಪುರ 209, ದಾಂಡೇಲಿಯಲ್ಲಿ 8.1 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮಳೆ ದಾಖಲೆ ವಿಭಾಗ ತಿಳಿಸಿದೆ. ಜಲ ಸಾಹಸ ಕ್ರೀಡೆ ಬಂದ್ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕಡಲತೀರದಲ್ಲಿ ಪ್ರವಾಸೋದ್ಯಮದ ಭಾಗ ಜಲ ಸಾಹಸ ಕ್ರೀಡೆಗೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ನಾವಿ, ಮುರುಡೇಶ್ವರ, ಗೋಕರ್ಣ, ಕಾರವಾರ ಸೇರಿದಂತೆ ಒಟ್ಟು 8 ಸಂಸ್ಥೆ ಗಳಿಗೆ ಮಳೆಗಾಲ ಮುಗಿಯುವತನಕ ಜಲ ಸಾಹಸ ಕ್ರೀಡಾ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿದ್ದಾರೆ. ಘಟ್ಟದ ಮೇಲೆ ಕಾಳಿ ನದಿ ರಾಫ್ಟಿಂಗ್ ಗೆ ಇನ್ನೂ ಬ್ರೇಕ್ ಬಿದ್ದಿಲ್ಲ.