ದುಬಾೖ 07: ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ 25 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿರುವ ದುಬಾೖ ಸ್ಟೇಡಿಯಂನಲ್ಲಿ ನಡೆಯಲಿದ್ದು, ಟಿಕೆಟ್ ಕೇವಲ 40 ನಿಮಿಷದಲ್ಲಿ ಪೂರ್ತಿ ಮಾರಾಟವಾಗಿದೆ.
ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಆದರೆ ಇದರಲ್ಲಿ ಹೆಚ್ಚಿನವರು ಭಾರತೀಯರೇ.
ಸಾಮಾನ್ಯ ಟಿಕೆಟ್ ದರ 250 ದಿರ್ಹಮ್ ಆಗಿದ್ದು(6 ಸಾವಿರ ರೂ.), ವಿಶೇಷ ಸ್ಕೈ ಬಾಕ್ಸ್ ಟಿಕೆಟ್ ದರ 12 ಸಾವಿರ ದಿರ್ಹಮ್ ಆಗಿದೆ (2,83,871 ರೂ.). ಪ್ರೀಮಿಯಮ್ ಮತ್ತು ಪೆವಿಲಿಯನ್ ವಿಭಾಗದ ಟಿಕೆಟ್ ದರ 11 ಸಾವಿರ ರೂ.ನಿಂದ 28 ಸಾವಿರ ರೂ. ಆಗಿದೆ.