ಶಿಗ್ಗಾವಿ 11 : ಪಾಕಿಸ್ತಾನ ವಿರುದ್ಧ ಭಾರತ ನಡೆಸುತ್ತಿರುವ ಆಫರೇಶನ ಸಿಂಧೂರನಲ್ಲಿ ಪಾಲ್ಗೊಳ್ಳಲು ಸಜ್ಜಾಗಿರುವ ತಾಲೂಕಿನ ಕಂಕಣವಾಡ ಗ್ರಾಮದ ಗಡಿ ಭದ್ರತಾ ಪಡೆಯ ಮಾಜಿ ಸೈನಿಕ ಫಕ್ಕೀರಪ್ಪ ಮಾಹದೇವಪ್ಪ ಮಾದರ ಅವರನ್ನು ತಾಲೂಕು ಸಮತಾ ಸೈನಿಕ ದಳ ಮತ್ತು ಜೀವಿಕ ಜಿಯಾ ವಿಮುಕ್ತಿ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅಸಂಘಟಿತ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈನಿಕ ಮಾದರ ಅವರು ಗುಜರಾತ್, ರಾಜಸ್ತಾನ್, ಪಂಜಾಬ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಗಡಿ ಪ್ರದೇಶದಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಪಾಕಿಸ್ತಾನ ವಿರುದ್ಧ ಭಾರತ ನಡೆಸುತ್ತಿರುವ ಯುದ್ಧದಲ್ಲಿ ಪಾಲ್ಗೊಳ್ಳುವ ಆಸೆಯಿಂದ ಕೇಳಿದ್ದೇನೆ. ಆದೇಶ ಕೊಟ್ಟರೆ ಹೋಗುವುದಾಗಿ ತಿಳಿಸಿದರು.
ಸಮಾತಾ ಸೈನಿಕ ಜಿಲ್ಲಾಧ್ಯಕ್ಷ ಅಶೋಕ ಕಾಳೆ ಮಾತನಾಡಿದರು. ಜೀವಕ ಜೀವದಾಳು ಜಿಲ್ಲಾಧ್ಯಕ್ಷ ಸುರೇಶ ಹರಿಜನ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಫಕ್ಕೀರೇಶ ಶಿಗ್ಗಾವಿ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ವಿದ್ಯುತ್ ಗುತ್ತಿಗೆದಾರ, ಅಬ್ದುಲ್ ಸತ್ತಾರ್, ರವಿ ಕೊಣ್ಣಪ್ಪನವರ, ಗಣೇಶ ಭಗಾಡೆ, ಮೊಲಾಲಿ ಶೇಖಲ್ಲಿ ಶೇಖಣ್ಣ ವಾಲ್ಮೀಕಿ, ಮಾಂತೇಶ ನೀಲಮ್ಮನವರ, ಮುಕ್ಸುಲ್ ಯಲ್ಲಾಪುರ, ರಫೀಕ್ ಆರೆಗೊಪ್ಪ, ವರದಿಗಾರ ಬಸವರಾಜ ಹಡಪದ ಮತ್ತಿತರರು ಉಪಸ್ಥಿತರಿದ್ದರು.