ರಾಣೇಬೆನ್ನೂರು ಹಾಲುಮತದ ಜನಾಂಗದವರು ಮುಗ್ದರು, ಮೌಢ್ಯವನ್ನು ನಂಬುವವರು, ಭಕ್ತಿಯಲ್ಲಿ ಶ್ರೀಮಂತರರಾಗಿದ್ದರೂ ಮಾಂಸಾಹಾರದಲ್ಲಿ ಮುಂದಿದ್ದಾರೆ. ದೇವರನ್ನು ಓಲೈಸಲು ಕುರಿ ಕಡಿದು ಊಟ ಸೇವಿಸುವ ಬದಲು, ಆರ್ಥಿಕವಾಗಿ ಮುಂದೆ ಬರಬೇಕಾದರೆ ಮೊದಲು ಮೂಢನಂಬಿಕೆ, ಕಂದಾಚಾರ ಗೊಡ್ಡು ಸಂಪ್ರದಾಯಗಳಿದಂದ ದೂರವಾಗಬೇಕು, ಆಗ ರಾಜಕೀಯ, ಸಾಮಾಜಿಕ, ಆಥರ್ಿಕವಾಗಿ ಸದೃಢರಾಗಲು ಸಾಧ್ಯ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಅವರು ರವಿವಾರ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘದ ತಾಲೂಕು ಘಟಕ ಸೇರಿದಂತೆ ವಿವಿಧ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತಶ್ರೇಷ್ಠ ಕನಕದಾಸರ 532ನೇ ಜಯಂತ್ಯುತ್ಸವ ಹಾಗೂ ಸಂಘದ 12ನೇ ವರ್ಷದ ಅಂಗವಾಗಿ ತಾಲೂಕು ಕುರುಬ ನೌಕರರ ಸಮಾವೇಶ, ತಾಲೂಕು ಮಟ್ಟದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಜನಾಂಗದವರಲ್ಲಿ ಬಹುತೇಕರು ಪ್ರಜ್ಞಾವಂತರಾಗಿದ್ದಾರೆ. ಈ ಜನಾಂಗವು ಮೌಢ್ಯಗಳನ್ನು ಬಹಳಷ್ಟು ನಂಬುವುದರಿಂದಲೇ ಆಥರ್ಿಕವಾಗಿ ಕ್ಷೀಣಿಸಿದ್ದಾರೆ, ಆಡಂಭರದ ಭಕ್ತಿಯ ಬದಲು ನಿಷ್ಕಲ್ಮಷ ಮನಸ್ಸಿನಿಂದ ದೇವರನ್ನು ಸ್ಮರಿಸಬೇಕು, ಕುರಿಗಳನ್ನು ಬಲಿದಾನಗೈದು ಹಬ್ಬ ಸವಿದರೆ ಏನು ಬರುತ್ತದೆ? ಉದ್ದಾರವಾಗುವುದು ಯಾವಾಗ? ಜನಾಂಗದವರು ಜಾಗೃತಗೊಂಡು ಬದಲಾದರೆ ಮಾತ್ರ ಇಡೀ ಸಮಾಜವೇ ಬದಲಾಗುವುದು ಎಂದರು.
ಜಿಪಂ ಅಧ್ಯಕ್ಷ ಎಸ್.ಕೆ ಕರಿಯಣ್ಣನವರ ಮಾತನಾಡಿ ಸಮಾಜದಲ್ಲಿನ ದಾರ್ಶನಿಕರ, ಶರಣರ, ಮಹಾತ್ಮರ ಆಚಾರ-ವಿಚಾರ ಮತ್ತು ಸಂಸ್ಕಾರವನ್ನು ಜನಾಂಗದ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಆರೋಗ್ಯವಂತ ಸಮಾಜವನ್ನು ನಿಮರ್ಾಣ ಮಾಡಲು ಸಾಧ್ಯ. ಈ ದಿಸೆಯಲ್ಲಿ ಸರ್ವರೂ ತಮ್ಮ ಮಕ್ಕಳಿಗೆ ಮೊದಲು ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾದರೆ ಜೀವನದುದ್ದಕ್ಕೂ ಅವರುಗಳು ಉಜ್ವಲ ಭವಿಷ್ಯ ಹೊಂದಬಹುದು ಎಂದರು. .
ಮಾನವನ ವ್ಯಕ್ತಿತ್ವ ಬೆಳವಣಿಗೆಗೆೆ, ಅವರ ನೈತಿಕ ಮತ್ತು ಆಧ್ಯಾತ್ಮಿಕ ಚಿಂತನೆಗೆ ಆದ್ಯತೆ ನೀಡಬೇಕು. ಉತ್ತಮ ಸಮಾಜವಾಗಲು ಸಹ ಸಾಧ್ಯವಾಗುವುದುದರ ಜೊತೆಗೆ ವಿಶಾಲ ಮನೋಭಾವನೆ ರೂಢಿಸಿಕೊಳ್ಳಬೇಕು. ಪೋಷಕರು-ಪಾಲಕರು ದೂರದ ಗುರಿಯನ್ನಿಟ್ಟುಕೊಂಡು ಸರ್ವರೂ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದಾಗ ಈ ದೇಶ ಹಾಗೂ ಜನಾಂಗ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಅನರ್ಹ ಶಾಸಕ ಆರ್ ಶಂಕರ ಮಾತನಾಡಿ ತಾಲೂಕಿನ ಅಭಿವೃದ್ಧಿಗಾಗಿ ಶೀಘ್ರವೇ 60ಕೋಟಿ ರು ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು. ಡಾ.ಎಸ್ ಬಿ ಮಲ್ಲೂರ ಉಪನ್ಯಾಸ ನೀಡಿದರು.
ಶಾಸಕ ಎಸ್ ರಾಮಪ್ಪ, ಸಿದ್ದಪ್ಪ ಅಂಬಲಿ, ಮಕ್ಕಳ ತಜ್ಞ ಡಾ. ಪ್ರವೀಣ ಖನ್ನೂರು, ಮಹಾದೇವಪ್ಪ ಖನ್ನೂರ, ಗದಿಗೆವ್ವ ದೇಸಾಯಿ, ಮಲ್ಲಿಕಾಜರ್ುನ ಬಾಲದಂಡಿ, ಸುರೇಶ ಸಗರಿ, ಆದಿಕೇಶವ ಬೂದಿಹಾಳ, ನಿಂಗಪ್ಪ ಗೌಡರ, ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಎಂ.ಡಿ ದ್ಯಾಮಣ್ಣನವರ, ಕಾರ್ಯದಶರ್ಿ ಸುಭಾಸ ಕುರುಬರ, ಗುಡ್ಡಪ್ಪ ತಹಸೀಲ್ದಾರ್, ಗುಡ್ಡಪ್ಪ ಮಾಳಗುಡ್ಡಪ್ಪನವರ, ಎಚ್.ಎಂ ದೊಡ್ಡಬಿಲ್ಲ ಸೇರಿದಂತೆ ನೌಕರರು, ಸಮಾಜ ಭಾಂದವರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದತ್ತಿ ದಾನಿಗಳು ಕೊಡಮಾಡಿದ ನಿಧಿಯಿಂದ ಸಮಾಜದ ಶೈಕ್ಷಣಿಕ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರ, ನಗದು ಮೊತ್ತ ಶಾಲು ಫಲ-ಪುಷ್ಪ, ಸ್ಮರಣೀಕೆ ನೀಡಿಗೌರವಿಸಲಾಯಿತು.