ಮುಗಿದ ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆಗೆ ತೀವ್ರಗೊಂಡ ಲಾಬಿ

ಬೆಂಗಳೂರು, ಜೂನ್  11, ರಾಜ್ಯಸಭಾ ಚುನಾವಣೆ ಬಹಳ ಶಾಂತವಾಗಿ,  ತಣ್ಣಗಾಗಿ ಮುಗಿಯುತ್ತಿದ್ದಂತೆಯೇ, ವಿಧಾನನಸಭೆಯಿಂದ ವಿಧಾನ ಪರಿಷತ್ತಿನ  7 ಸ್ಥಾನಗಳ  ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾಗಿದ್ದು  ನಾಮಪತ್ರ ಸಲ್ಲಿಕೆ ಇಂದಿನಿಂದಲೇ ಆರಂಭವಾಗಲಿದೆ.ಮೇಲಾಗಿ  ಮೂರು ಪಕ್ಷಗಳಲ್ಲಿ   ಟಿಕೆಟ್ಗಾಗಿ ಆಕಾಂಕ್ಷಿಗಳ ಲಾಬಿಯೂ ಆರಂಭವಾಗಿದೆ.ಬಿಜೆಪಿ ನಾಲ್ಕು ಸ್ಥಾನ ಗೆಲ್ಲಲು ಅವಕಾಶವಿದೆ.ಶುಕ್ರವಾರ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ನಾಯಕರು ಸಭೆ ಸೇರಲಿದ್ದಾರೆ ಎನ್ನಲಾಗಿದೆ.ಆಕಾಂಕ್ಷಿಗಳು ತೆರೆಮರೆಯಲ್ಲೇ ಲಾಬಿ ತೀವ್ರಗೊಳಿಸಿದ್ದು ಇನ್ನೂ  ಸಂಖ್ಯಾಬಲದಲ್ಲಿ ಕಾಂಗ್ರೆಸ್  ಎರಡು ಸ್ಥಾನ, ಹಾಗೂ . ಇನ್ನು ಜನತಾದಳಕ್ಕೆ ಒಂದು ಸ್ಥಾನ  ಗೆಲ್ಲುವ ಅವಕಾಶವಿದ್ದು, ದಳದ  ನಾಯಕರು  ಕಾಂಗ್ರೆಸ್ ಜೊತೆ ಮತ್ತೆ  ಚೌಕಾಸಿ ಮಾಡಲಿದ್ದಾರೆ ಎನ್ನಲಾಗಿದೆ.