ಸಂಜಯ ಮಿಣಚೆಗೆ ಅಂತರರಾಷ್ಟ್ರೀಯ ಡಾಕ್ಟರೇಟ್ ಪದವಿ ಪ್ರದಾನ

ಲೋಕದರ್ಶನ ವರದಿ

ಕಾಗವಾಡ 17: ಅಂತರ-ರಾಷ್ಟ್ರೀಯಜಾಗತಿಕ ಶಾಂತಿ ವಿಶ್ವ ವಿದ್ಯಾಲಯ, ಅಂತರ-ರಾಷ್ಟ್ರೀಯ ಸಾಧಕರ ಸಂಘಟನೆ ಮತ್ತು ಭಾರತೀಯ "ಜಾಗತಿಕ ಶಾಂತಿ" ಸಂಘಟನೆಯ ಸಹಕಾರದಿಂದ ಸಾಮಾಜಿಕ ಸೇವೆ ಹಾಗೂ ಜನಸಂಪರ್ಕ ಈ ಕ್ಷೇತ್ರದಲ್ಲಿ ಸಾಧನೆಗೈದ ಬಗ್ಗೆ ಕಾಗವಾಡ ತಾಲೂಕಿನ ಜುಗೂಳ ಗ್ರಾಮ ಪಂಚಾಯತಿಯ ಅಧ್ಯಕ್ಷ ಸಂಜಯ ವಿಶ್ವನಾಥ ಮಿಣಚೆ ಇವರಿಗೆ "ಇಂಟರ ನ್ಯಾಶನಲ್ ಗ್ಲೋಬಲ್ ಪೀಸ್ ಯ್ಯುನಿವರಸಿಟಿ" ಇವರಿಂದ ಡಾಕ್ಟರೇಟ್ ಪ್ರಶಸ್ತಿ ನೀಡಿ, ಗೌರವಿಸಿದ್ದಾರೆ.

ಶನಿವಾರರಂದು ತಮಿಳನಾಡು ರಾಜ್ಯದ ಹೊಸುರ ನಗರದಲ್ಲಿ ಗ್ಲೇರೆಸ್ಟಾ ಇಂಟರನ್ಯಾಶನಲ್ ಹೊಟೇಲ್ದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಸಂಜಯ ಮಿಣಚೆ ಇವರಿಗೆ ಡಾಕ್ಟರೇಟ್ ಪದವಿ ನೀಡಲಾಯಿತು. ಪದವಿ ವಿತರಣೆ ಸಮಾರಂಭದಲ್ಲಿ ಇಂಟರ ನ್ಯಾಶನಲ್ ಗ್ಲೋಬಲ್ ಪೀಸ್ ಯ್ಯುನಿವರಸಿಟಿ ಅಧ್ಯಕ್ಷ ಡಾ. ಅಶೋಕ ಕುಮಾರ, ಡಾ. ಎಸ್.ಎ.ಮೋಹನ ಕೃಷ್ಣನ, ಅಸೋಸಿಯೇಟ್ ಪ್ರೋಫೆಸರ್ ಡಿಪಾರ್ಟಮೆಂಟ್ ಆಫ್ ಮೆಕ್ಯಾನಿಕಲ್ ಇಂಜಿನಿಯರ, ಸಮಾರಂಭದ ಸಾನಿಧ್ಯ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸ್ವಾಮಿ ತುಮಕೂರು ಜಿಲ್ಲೆಯ ನಿಲಕಂಠಾಚಾರ್ಯ ಸ್ವಾಮೀಜಿ, ಡಾ.ಪ್ರಭು ಸ್ವಾಮೀಜಿ, ಹಾವೇರಿ ಜಿಲ್ಲೆಯ ಹಾಲವಡಿ ಮಠ, ವಿಜಯ ಕುಮಾರ ರಾಮಸ್ವಾಮಿ, ಡಾ.ಗುನವಂತಾ ಮಂಜು, ಚಲನಚಿತ್ರ ನಿರ್ದೇಶಕರು, ಡಾ. ರಾಜೇಶ ಪೊಲೀಸ್ ಆ್ಯಂಡ್ ಪಬ್ಲಿಕ್ ವೆಲಫೆರ ಅಸೊಸಿಯೇಶನ್ ವಹಿಸಿದರು. ಡಾ. ಬಿ.ಜಿ.ಸುದಾ, ಪ್ರೊ.ಆ್ಯಂಡ್ ವೈಸ್-ಚಾನ್ಸಲರ್ ಬೆಂಗಳೂರು ಯ್ಯುನಿವರಸಿಟಿ ಇವರ ಸಾನಿಧ್ಯದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

ಸಂಜಯ ಮಿಣಚೆ ಇವರು ಕಳೇದ ಅನೇಕ ದಿನಗಳಿಂದ ಜುಗೂಳ ಗ್ರಾಮದಲ್ಲಿ ಸಾಮಾನ್ಯ ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಾಗ, ಕೃಷ್ಣಾ ನದಿಗೆ ಮಹಾಪುರ ಬಂದಾಗ ತಮ್ಮ ಜೀವದ ಹಂಗ ತೊರೆದು ನದಿ ನೀರಿನಲ್ಲಿ ಇಳಿದು ಅನೇಕರನ್ನು ಡೋಣಿಗಳಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಒಯ್ಯಲು ನೀಡಿದ ಸಮಾಜ ಸೇವೆ ಮತ್ತು ಮಹಾಪೂರದಲ್ಲಿ ಜನರು ತಮ್ಮಊಟಿನ ಅವ್ಯವಸ್ಥೆ ಕಂಡು ಸಂಜಯ ಮಿಣಚೆ ಇವರು ಕರ್ನಾಟಕ ಅಲ್ಲದೇ ಮಹಾರಾಷ್ಟ್ರ ಗಡಿಭಾಗದ ಸಾವಿರಾರು ಕುಟುಂಬಗಳಿಗೆ 12 ದಿನ ಊಟದ ವ್ಯವಸ್ಥೆ ಮಾಡಿದ್ದರು. ಈ ಸಮಾಜ ಸೇವೆಯನ್ನು ಕಂಡು "ಇಂಟರನ್ಯಾಶನಲ್ ಗ್ಲೋಬಲ್ ಪೀಸ್ ಯ್ಯುನಿವರಸಿಟಿ" ಜಿ.ಎ.ಎಫ್,ಯು.ಎಸ್.ಎ. ಇವರು ಈ ಸಮಾಜ ಸೇವೆ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದಾರೆ.

ಇವರೊಂದಿಗೆ ಜುಗೂಳ ಗ್ರಾಮದ ಹಿರಿಯರಾದ ರಾವಸಾಬ ಪಾಟೀಲ, ಶುಭಂ ಪಾಟೀಲ, ಮಹಾವೀರ ಐತವಾಡೆ, ರೋಹಿತ ಪಾಟೀಲ, ಸಚಿನ ಯಮಕನಮರಡಿ, ಆನಂದ ಕುಲಕರ್ಣಿ, ಸರದಾರ ಅತ್ತಾರ, ರವಿ ಕಾಂಬಳೆ, ಸೇರಿದಂತೆ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಂಜಯ ಮಿಣಚೆ ಇವರು ಪ್ರಶಸ್ತಿ ಪಡೆದು ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಅವರ ಬೆಂಬಲಿಗಾರರಿಂದ ಅದ್ಧೂರಿವಾಗಿ ಸ್ವಾಗತ ನೀಡಿದರು.