ಅಂತರಾಷ್ಟ್ರೀಯ ವ್ಯಾಪಾರದಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯ

International trade can lead to economic growth for the country

ಹೂವಿನಹಡಗಲಿ 16 :  ಅಂತರಾಷ್ಟ್ರೀಯ  ಸಂಬಂಧಗಳ  ಒಂದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತವೆ ಎಂದು ಹರಪನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಬುಳ್ಳಪ್ಪ ಹೇಳಿದರು.

ಪಟ್ಟಣದ  ಜಿಬಿಆರ್ ಪದವಿ ಮಹಾವಿದ್ಯಾಲಯದ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ದೇಶದ ಆರ್ಥಿಕತೆಯು ವಿಶ್ವ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಬೇಕಾದರೆ ಒಂದು ದೇಶದಲ್ಲಿನ ಸಂಪನ್ಮೂಲವನ್ನು ಸಮರ​‍್ಕವಾಗಿ ಬಳಕೆಯಾಗಬೇಕು.  ದೇಶದಲ್ಲಿ ಕೈಗಾರಿಕೆಗಳ ಉತ್ಪನ್ನ ಮತ್ತು ಬೇಡಿಕೆಗಳಿಂದ ಆರ್ಥಿಕತೆ ಭದ್ರವಾಗುತ್ತದೆ. ನಾವು  ವಿದೇಶಿ ವಿನಿಮಯವನ್ನು ಮಾಡಿಕೊಳ್ಳಲು ಮುಂದಾಗಬೇಕು. ಚರ್ಮ ಮತ್ತು ಓಷಧಿ  ಉತ್ಪನ್ನಗಳು, ಆಟೋಮೊಬೈಲ್ ವಸ್ತುಗಳು, ಜೈವಿಕ ರಸಾಯನಿಕಗಳು, ಕೈಮಗ್ಗ ವಸ್ತುಗಳು, ಸಿರಿಧಾನ್ಯಗಳು ಸೇರಿದಂತೆ  ಅನೇಕ ಕೃಷಿ ಉತ್ಪನ್ನಗಳನ್ನು ರು​‍್ತಮಾಡುತ್ತಿದ್ದೇವೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕಾದರೆ ದೇಶದ ಆಮದು ಮತ್ತು ರಫ್ತುನ್ನು ಹೆಚ್ಚಿಸಬೇಕು ಎಂದರು.

ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ ಮಾತನಾಡಿ, ಭಾರತ ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆಯನ್ನು ಕಾಣಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅಂತರಾಷ್ಟ್ರೀಯ ವ್ಯಾಪಾರ ಮುಖ್ಯವಾಗುತ್ತದೆ. ಅಂತರಾಷ್ಟ್ರೀಯ ವ್ಯಾಪಾರಕ್ಕೆ ಬೇರೆ ಬೇರ ಆಯಾಮಗಳಿವೆ ಎಂದರು. ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ರವಿಕುಮಾರ್, ಮೊಹಿದ್ದೀನ್ ಕೆ, ಡಾ.ಶರಣಪ್ಪ, ಶೇಕ್ಷಾವಲಿ, ಬಡೇಸಾಬ್‌ನಾಯಕ ಹಾಗೂ ವಿದ್ಯಾರ್ಥಿಗಳು ಇದ್ದರು .