ಶ್ರೀನಗರ, ಜನವರಿ 25, ಐದು ತಿಂಗಳ ಬಳಿಕ ಜಮ್ಮು ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ಶನಿವಾರದಿಂದ ಇಂಟರ್ನೆಟ್ ಸೇವೆ ಪುನರಾರಂಭಿಸಲಾಗಿದೆ. ಪೋಸ್ಟ್ ಪೈಡ್ ಮತ್ತು ಪ್ರಿಪೈಡ್ ಮೊಬೈಲ್ 2ಜಿ ಇಂಟರ್ನೆಟ್ ಸೇವೆಗಳು ಆರಂಭವಾಗಲಿದೆ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ನಿರ್ಭಂಧವಿಲ್ಲದೆ ಮುಂದುವರಿಯಲಿದೆ ಎನ್ನಲಾಗಿದೆ.ಇದೊಂದು ದೊಡ್ಡ ಸಮಾಧಾನ. ಸಂಪರ್ಕ ಸಾಧನಗಳ ಈ ಕಾಲದಲ್ಲಿ ಕಾಶ್ಮೀರಿಗಳು ಆ ಜಗತ್ತಿನಿಂದ ದೂರವಾಗಿದ್ದೆವು. ಮುಂದೆ ಎಲ್ಲಾ ರೀತಿಯಿಂದಲೂ ಇದು ಸುಧಾರಣೆಯಾಗಲಿದೆ ಎಂಬ ವಿಶ್ವಾಸವನ್ನು ಸ್ಥಳೀಯ ನಾಗರಿಕರೊಬ್ಬರು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಆಗಸ್ಟ್ 5ರಂದು ವಿಶೇಷಾಧಿಕಾರವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.