ಮದುವೆಗೆೆ ಸಾಲ ಮಾಡದೆ ಸಾಮೂಹಿಕ ವಿವಾಹ ಮೊರೆ ಹೋಗೊದು ಉತ್ತಮ

It is better to go for a mass wedding than to take out a loan for the wedding.

ಮದುವೆಗೆೆ ಸಾಲ ಮಾಡದೆ ಸಾಮೂಹಿಕ ವಿವಾಹ ಮೊರೆ ಹೋಗೊದು ಉತ್ತಮ

ಕುಕನೂರು 02: ತಾಲ್ಲೂಕಿನ ಸೋಂಪೂರಗ್ರಾಮದಲ್ಲಿ ಶುಕ್ರವಾರದಂದು 58ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರಜಾತ್ರಾ ಮಹೋತ್ಸವ ಪುರಾಣ ಮಂಗಳೋತ್ಸಮ, 101 ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ, ಮತ್ತು 13 ಜೋಡಿ ಸಾಮೂಹಿಕ ವಿವಾಹ   ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ಬಡಜನರು ವಿವಾಹ ಹೆಸರಿನಲ್ಲಿ ಸಾಲ ಸೂಲ ಮಾಡಿ ಮದುವೆ ಮಾಡುವದನ್ನುತಪ್ಪಿಸಲು ಸಾಮೂಹಿಕ ವಿವಾಹ ಉತ್ತಮ ನಡೆಯಾಗಿದೆ ವೈಭವದ ಮದುವೆಗಳಿಗೆ ಪ್ರೋತ್ಸಾಹ ನೀಡದೆ ಸಾಮೂಹಿಕ ವಿವಾಹಕ್ಕೆ ಹೆಚ್ಚಿನಒತ್ತು ನೀಡಿದಾಗ ಮಾತ್ರ ದುಂದುವೆಚ್ಚಗಳಿಗೆ ಕಡಿವಾಣ ಬೀಳಲಿದೆ  ಸಾಮೂಹಿಕ ವಿವಾಹ ಏರಿ​‍್ಡಸುವುದರಿಂದ ಬಡವ-ಬಲ್ಲಿದ, ಜಾತಿ, ಧರ್ಮದ ಸಂಕೋಲೆಯಿಂದ ಹೊರ ಬರಲು ಸಹಾಯವಾಗುತ್ತದೆ. 

 ಭಾವೈಕ್ಯ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕುಎಂದು ಆಶಿಸಿದರು.ಜಾತ್ರಾ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಟಿ. ಗುರುರಾಜ ಪಿಎಸ್‌ಐ ಮತ್ತು ಸಿಬ್ಬಂದಿ ವರ್ಗದವರು ಬಿಗಿ ಬಂದೋಬಸ್ತ್‌ ನೆರವೇರಿಸಿದರು.ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟೀಲ, ಸಿದ್ದಪ್ಪ ಹೈದ್ರಿ, ಕೆ.ಬಿ. ನಾಯಕರ, ಹುಚ್ಚೀರ​‍್ಪ ಹೈದ್ರಿ, ಹೊಳಿಬಸಪ್ಪ ಮ್ಯಾಗೇರಿ, ಸಣ್ಣ ಮೈಲಾರಗೌಡ, ಶರಣಪ್ಪಗಟ್ಟಿರ ಟಾಳ್, ನಾಗಪ್ಪಕರಗಲ್, ಬಸಪ್ಪಕರಗಲ್, ಬಸವರಾಜ ಹಳ್ಳಿಕೇರಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸೋಂಪೂರಗ್ರಾಮದಗುರು ಹಿರಿಯರುಗ್ರಾಮ ಪಂಚಾಯತ್‌ಅಭಿವೃದ್ಧಿಅಧಿಕಾರಿ ಮತ್ತು ಸದಸ್ಯರುಗಳು ಇತರರುಇದ್ದರು.