ಪಹಲ್ಗಾಮ ಹತ್ಯೆ ಖಂಡಿಸಿ ರಾಣೆಬೆನ್ನೂರಲ್ಲಿ ಜೆಡಿಎಸ್ ಪ್ರತಿಭಟನೆ

JDS protests in Ranebennur condemning Pahalgam killings

ಪಹಲ್ಗಾಮ ಹತ್ಯೆ ಖಂಡಿಸಿ ರಾಣೆಬೆನ್ನೂರಲ್ಲಿ  ಜೆಡಿಎಸ್ ಪ್ರತಿಭಟನೆ

ರಾಣಿಬೆನ್ನೂರ 26 :   ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರಗ್ರಾಮಿಗಳನ್ನು  ಪತ್ತೆ ಹಚ್ಚಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಆರ್‌.ಎಸ್ ಭಾಗವಾನರ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.      ಪ್ರವಾಸಿಗರನ್ನು ಕೊಲೆ ಮಾಡಿದ ಉಗ್ರಗಾಮಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯವಾಗಿದ್ದು, ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದವರುಗಳು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಮೇಶ ಮಾಕನೂರ, ಸಿದ್ದಪ್ಪ ಗುಡಿಮುಂದ್ಲರ, ವೀರ​‍್ಪ ಆಣೂರ, ಶಿವಪ್ಪ ಕಡೂರ, ಶಿವಪ್ಪ ಬಾಣಾವರ, ಇಬ್ರಾಹಿಂ ಯಲಗಚ್ಚಿ, ದೀಪಾ ದಳವಾಯಿ, ಗಂಗಾ ಇಚ್ಚಂಗಿ ಮತ್ತಿತರರು ಇದ್ದರು.