ಜೆಎನ್ ಯು ದೇಶದ್ರೋಹಿಗಳಿಂದ ತುಂಬಿದೆ; ಕಲ್ಲಡ್ಕ ಪ್ರಭಾಕರ JNU is full of traitors; Kalladka Prabhakaran
Lokadrshan Daily
3/28/25, 11:03 AM ಪ್ರಕಟಿಸಲಾಗಿದೆ
ಭಟ್ತುಮಕೂರು, ಜ 8 ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ ಎನ್ ಯು) ದೇಶದ್ರೋಹಿಗಳಿಂದ ತುಂಬಿದೆ ಎಂದು ಹೇಳುವ ಮೂಲಕ ಆರ್ ಎಸ್ ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ರಾಷ್ಟ್ರೀಯ ನಾಗರಿಕ ವೇದಿಕೆ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ದೇಶ ದ್ರೋಹಿಗಳು, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರಿಂದ ತುಂಬಿದ್ದು, ರಾಷ್ಟ್ರ ವಿರೋಧಿಗಳನ್ನು ಸೃಷ್ಟಿಸುತ್ತಿದೆ. ಆದರೆ, ವಿಶ್ವ ವಿದ್ಯಾಲಯವನ್ನು ಮುಚ್ಚುವ ಆಗತ್ಯವಿಲ್ಲ. ಪ್ರೀತಿ ಹಾಗೂ ವಿಶ್ವಾಸದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಮೂಡಿಸಬೇಕು. ಸತ್ಯ ಎನು..? ಎಂಬುದು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ಸಿಎಎ ಕುರಿತಂತೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ಪಡಿಸಿದರು.ಮುಸ್ಲಿಂ ಸಮುದಾಯ ಕುರಿತು ಮಾತನಾಡಿದ ಭಟ್, ನಮ್ಮ ದೇಶಕ್ಕೆ ಅತಿಥಿಗಳಾಗಿ ಬಂದವರು ಅತಿಥೇಯರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಲಕ್ಷಾಂತರ ಮಸೀದಿ ನಿರ್ಮಿಸಿಕೊಳ್ಳಲು ಭೂಮಿ ನೀಡಿದ್ದು ಯಾರು? ಭಾರತಕ್ಕೆ ಬರುವಾಗಲೇ ಅವರು ಜಮೀನು ಖರೀಸಿದ್ದರೇ? ಎಂದು ಅವರು ಪ್ರಶ್ನಿಸಿದರು.ದೇಶ ವಿಭಜನೆಯ ಸಮಯದಲ್ಲಿ ನಮ್ಮ ದೇಶದ ನಾಯಕರು ರಣಹೇಡಿಗಳಾಗಿದ್ದರಿಂದಲೇ ದೇಶದ ನಾಗರೀಕರು ಇಂದು ತೊಂದರೆ ಅನುಭವಿಸಬೇಕಾಗಿದೆ ಎಂಬುದು ಸತ್ಯ ಎಂದು ಭಟ್ ಹೇಳಿದರು.