ಜತ್ತ - ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಮೇಲ್ದಜರ್ೆಗೇರಿಸಲು ಆಗ್ರಹಿಸಿ ಪ್ರತಿಭಟನೆ: ಮನವಿ

ಅಥಣಿ 10: ಪಟ್ಟಣದ ಹೃದಯ ಭಾಗದಲ್ಲಿರುವ ಶಿವಯೋಗಿ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಜತ್ತ - ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಮೇಲ್ದಜರ್ೆಗೇರಿಸದೆ, ಅನ್ಯಾಯ ವೆಸಗಲಾಗುತ್ತಿದೆ ಎಂದು ಆರೋಪಿಸಿ ಕರವೇ ತಾಲೂಕಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. 

ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರೆಪ್ಪನವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ), 1 ಕಿ.ಮೀಗಿಂತಲೂ ಕಡಿಮೆ ಇರುವ ಈ ಪ್ರದೇಶದಲ್ಲಿ ಮುಖ್ಯವಾಗಿ ತಾಲೂಕಾ ಸಕರ್ಾರಿ ಆಸ್ಪತ್ರೆ ಇದ್ದು, ಅಲ್ಲಿ ದಾಖಲಾಗುವ ರೋಗಿಗಳಿಗೆ ರಸ್ತೆಯ ಮೇಲಿಂದ ಏಳುವ ಧೂಳಿನಿಂದಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ, ಅಲ್ಲದೇ ಹಳೆ ತಹಶೀಲ್ದಾರ ಕಚೇರಿ ಮತ್ತು ಪೊಲೀಸ್ ಠಾಣೆಗಳಿದ್ದು ಈ ರಸ್ತೆ ಸದಾ ಜನದಟ್ಟಣೆಯಿಂದ ತುಂಬಿರುತ್ತದೆ, ಆದ್ದರಿಂದ ಕೂಡಲೇ ಈ ರಸ್ತೆಯನ್ನು ಮೇಲ್ದಜರ್ೆಗೇರಿಸುವಂತೆ ಆಗ್ರಹಿಸಿದರು. 

ಇದೇ ರಸ್ತೆಯ ಮೇಲಿರುವ ಮರಾಠಿ ಪ್ರಾಥಮಿಕ ಶಾಲೆ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಆಗಮಿಸುವವರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ರಸ್ತೆಯನ್ನು ಮೇಲ್ದಜರ್ೆಗೇರಿಸಲು ಕೆಲವು ಕಾಣದ ಕೈಗಳ ಪ್ರಭಾವ ಬೀರುತ್ತಿವೆ ಎಂದು ಆರೋಪಿಸಿದ ಅವರು, ಮುಂಬರುವ ಹದಿನೈದು ದಿನಗಳಲ್ಲಿ ಈ ಭಾಗದಲ್ಲಿಯ ರಸ್ತೆಯನ್ನು ಮೇಲ್ದಜರ್ೆಗೇರಿಸದಿದ್ದಲ್ಲಿ ಕರವೇ ಉಗ್ರವಾಗಿ ಪ್ರತಿಭಟನೆ ಕೈಗೊಳ್ಳುವುದೆಂದು ಅವರು ಎಚ್ಚರಿಕೆ ಕೂಡ ನೀಡಿದರು. 

ಕರವೇ ಕಾರ್ಯಕರ್ತರಾದ ಸುಂದರ ಸೌದಾಗರ, ಶಬ್ಬೀರ ಸಾತಬಚ್ಚೆ, ಮಂಜು ಹೋಳಿಕಟ್ಟಿ, ಸಚೀನ ಪಾಟೀಲ, ಸಿದಗೌಡ ಹಿಪ್ಪರಗಿ, ಅಭಿಜೀತ ಕೊಡಗ, ಓಂಕಾರ ಇಂಗೋಲೆ, ವಿಶಾಲ ಬೋರಾಡೆ, ನವನಾಥ ಮಗರ, ಚೇತನ ಹಳ್ಳದಮಳ, ಅಪ್ಪು ಪಾಟೀಲ, ಸುನೀಲ ಮಗದುಮ್ಮ, ಅನೀಲ ಬೋರಾಡೆ, ಅಜಯ ಲಿಂಗಾಡೆ, ಸಿದ್ಧನಾಥ ಮರಾಠೆ, ಜ್ಞಾನೇಶ್ವರ ವನಾರಸೆ, ಉಮೇಶ ಬನ್ನೆನ್ನವರ ಸೇರಿದಂತೆ ಅನೇಕರು ಇದ್ದರು. ಸಾಂಕೇತಿಕ ರಸ್ತೆ ತಡೆ ನಡೆಸಿದ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಸಿ.ಪಿ.ಐ ಎಚ್. ಶೇಖರಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ ಒದಗಿಸಿದ್ದರು.