ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ಜಯಂತಿ ನಿಮಿತ್ಯ ಮಾಲಾರ್ಫಣೆ

Jayanti wreath laying at the first Savita Maharshi circle of the state

ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ಜಯಂತಿ ನಿಮಿತ್ಯ ಮಾಲಾರ್ಫಣೆ 

ಗದಗ  12 :  ಸವಿತಾ ಸಮಾಜಕ್ಕೆ ಸಂಬಂಧಿಸಿದ 27 ಉಪಪಂಗಡದ ಎಲ್ಲಾ ಕ್ಷೌರಿಕರು ಪರಿಶಿಷ್ಟ ಜಾತಿಯ ಒಂದು ಭಾಗ ಅಂದರೆ ತಪ್ಪಾಗಲಾರದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಕಮೀಟಿಯ ಮಾಜಿ ಅಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅಭಿಪ್ರಾಯಪಟ್ಟರು.  ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಸವಿತಾ ಸಮಾಜದ ಬಾಂಧವರೊಂದಿಗೆ ಸೇರಿ ಗದಗ ಜಿಲ್ಲಾಡಳಿತ ಭವನದಿಂದ ಬೈಕ್ ರಾಲಿ ಮೂಲಕ ಹೊರಡಿ ಗಂಗಿಮಡಿ ರೋಡ ಮಧ್ಯದಲ್ಲಿರುವ ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ತಲುಪಿ ವೃತ್ತಕ್ಕೆ ಗೌರವಗಳೊಂದಿಗೆ ಮಾಲಾರ್ಫಣೆ ಮಾಡಿ ಫಟಾಕಿ ಸಿಡಿಸಿ ಸಿಹಿ  ಹಂಚಿ ಸಂಭ್ರಮಿಸಲಾಯಿತು ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆ ಒಹಿಸಿ ಮಾತನಾಡಿ ಭಾರತದ ಸರ್ವೋಚ್ಚ  ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ  ಒಳಮೀಸಲಾತಿ  ನೀಡುವ ನಿರ್ದೇಶನವನ್ನು ನೀಡಿದ್ದು ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ಮಾಜಿ ಸಚಿವರು ಎಚ್‌.  ಆಂಜನೇಯ  ಮಾತುಗಳನ್ನು ಕೃಷ್ಣ ಎಚ್‌.  ಹಡಪದ ಸ್ವಾಗತಿಸಿ ಮಾತನಾಡಿ ನಾವುಗಳು ಪ್ರಬಲ ಜಾತಿಗಳ ಮುಖಂಡರ ಹಾಗೂ ಬಲಿಷ್ಟ ಜಾತಿಗಳ ದೌರ್ಜನ್ಯಕ್ಕೆ ಮುಲಾಜಿಗೆ ಹೆದರಿ ಇವತ್ತು  ಹಿಂದುಳಿದ ವರ್ಗದಲ್ಲಿ ಅಪಮಾನಕ್ಕೆ ಜಾತಿ ನಿಂದನೆಗೆ, ಅಪಹಾಸ್ಯಕ್ಕೆ ಗುರಿಯಾಗಿ ಹಿಂದುಳಿದವರಲ್ಲಿ ಅತೀ ಹಿಂದುಳಿದವರಾಗಿ ಉಳಿದಿದ್ದೆವೆ ಎಂದು ಹೆಳಿದರಲ್ಲದೆ.  

ಇನ್ನು ಮುಂದೆ ಯಾರಿಗೂ ಹೆದರುವ ಅವಶ್ಯಕತೆ ಬೇಡ ಹೆದರಿಸುವವರ ವಿರೂದ್ದ ಹೋರಾಡಲು ಗದಗ ಜಿಲ್ಲಾ ಸವಿತಾ ಸಮಾಜವು ಸನ್ನದ್ದವಾಗಿದೆ ಮತ್ತು ಸಮಾಜದ ಕಟ್ಟ ಕಡೆಯವರೆಗೂ ಕ್ಷೌರ ಮಾಡುವುದು ನಮ್ಮ ಕ್ಷೌರಿಕ  ಧರ್ಮವಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ದಲಿತ ಸಮುದಾಯದ ಬಂಧು ಬಾಂದವರಿಗೆ ಕ್ಷೌರ ಸೇವೆಯನ್ನು ನೀಡಬೇಕಾಗಿ ರಾಜ್ಯದ ಎಲ್ಲಾ  ಕ್ಷೌರಿಕರಲ್ಲೂ ಕೃಷ್ಣಾ ಎಚ್‌. ಹಡಪದ ಮನವಿ ಮಾಡಿ ಕರೆ ನಿಡಿದರು.ಅಥಿತಿಗಳಾಗಿ ಬಾಗವಹಿಸಿದ ದಾವಣಗೇರಿ ಸವಿತಾ ಸಮಾಜದ ಮುಖಂಡರಾದ ವೆಂಕಟೇಶ ಮಾತನಾಡಿ ಜಾತಿ ಬೇಧವಿಲ್ಲದೆ ರೋಗ ರುಜಿನುಗಳನ್ನು ಲೆಕ್ಕಿಸದೆ ಮಾಡುವ ವೃತ್ತಿ ಕ್ಷೌರಿಕ ವೃತ್ತಿ, ನಿಷೇಧಿತ (ಹಜಾಮ) ಎಂಬ ಪದ ಬಳಸುವುದರಿಂದ ನಮ್ಮ ಸವಿತಾ ಸಮಾಜಕ್ಕೆ ಕ್ಷೌರಿಕ ವೃತ್ತಿ ಮಾಡುವ ರಾಜ್ಯದ ಎಲ್ಲ ಕೇಶ ವಿನ್ಯಾಸಕರಿಗೆ ತುಂಬಲಾರದ ನೋವುಂಟಾಗುತ್ತಿದೆ ಈ ವಿಷಯವನ್ನು ಹಿರಿಯರು ಹಾಗೂ ಕಾನೂನು ಸಚೀವರಾದ ಎಚ್‌.ಕೆ.ಪಾಟೀಲರು ಹಾಗೂ ಕರ್ನಾಟಕ ಸರ್ಕಾರವು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಯಾರೇ ಈ ಪದ ಬಳಕೆ ಮಾಡಿದರೂ, ಅವರಿಗೆ ತಕ್ಷಣ ಶಿಕ್ಷೆ ಆಗುವಂತಹ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.  ಧಾನಿಗಳು ಹಾಗೂ ಜಿಲ್ಲಾ ಸವಿತಾ ಸಮಾಜದ ಪ್ರಮುಖ ನಾಯಕರಾದ ಪರಶುರಾಮ ಬಳ್ಳಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಸವಿತಾ ಮಹರ್ಷಿ ಜಯಂತಿ ನಿರ್ವಹಣೆ ಸಮಿತಿ ಅಧ್ಯಕ್ಷರಾದ ನವೀನ ಕೊಟೇಕಲ್ಲ ನಿರೂಪಿಸಿದರು ಉಪಾಧ್ಯಕ್ಷರಾದ ವಿಜಯ ಬುದೂರ ಸ್ವಾಗತಿಸಿದರು ಸದಶ್ಯ ಸುದೀರ ಮಾನೆ ವಂದನಾರೆ​‍್ಣ ಗೈದರು.  

ಈ ಸಂದರ್ಭದಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ. ಉಪಾಧ್ಯಕ್ಷರಾದ ಜಂಬಣ್ಣ ಕಡಮೂರ, ಸಂತಸೇನಾ ಮಹರಾಜ ನಾಭೀಕ್ ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ರಾಜು ಮಾನೆ ನಗರ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಬೆಟಗೇರಿ ಸವಿತಾ ಸಮಾಜದ ಅಧ್ಯಕ್ಷರಾದ ರಮೇಶ ರಾಂಪೂರ ಹಿರಿಯರಾದ ಹನಮಂತಪ್ಪ ರಾಂಪೂರ ಪಾಂಡು ಕಾಳೆ. ಬಾಲರಾಜ ಕೊಟೇಕಲ್ಲ ದೀಪಕ ಮಾನೆ, ಹೇಮಂತ ವಡ್ಡೆಪಲ್ಲಿ, ಕೀರಣ ರಾಂಪೂರ ರವಿಕುಮಾರ ಹಡಪದ ತುಕಾರಾಮ ಮಾನೆ ಸುರೇಶ ಬುದೂರ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಖಜಾಂಚಿ ಅರುಣ ರಾಂಪೂರ, ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಪ್ರಮುಖ ಯುವ ನಾಯಕರಾದ ಸುನೀಲ ರಾಯಚೂರ ಕೃಷ್ಣಾ ಬುದೂರ ವೆಂಕಟೇಶ ಕೊಟೇಕಲ್ಲ ವಿಶಾಲ ಮಾನೆ ವಿನಾಯಕ ರಾಯಚೂರ ಶ್ರೀಧರ ಕಡಬೂರ, ಕಾರ್ತಿಕ ಆಗಲಾವೆ, ಅಕ್ಷಯ ಮಾನೆ. ಸಾಗರ ಕೊಟೇಕಲ್ಲ ಸುರೇಶ ರಾಂಪೂರ ಗೋಪಾಲ ರಾಂಪೂರ ಹಾಗೂ ಸಮಾಜದ ನೂರಾರು ಪ್ರಮುಖರು ಹಾಜರಿದ್ದು ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತಕ್ಕೆ ಮಾಲಾರ್ಫಣೆ ಮಾಡುವ ಮೂಲಕ ಗೌರವ ಸಮರ​‍್ಿಸಿದರು.ಕೃಷ್ಣಾ ಎಚ್ ಹಡಪದ9845650612