ರಾಣೇಬೆನ್ನೂರು12: ನಗರದ ಗುರು ಸಂಗೀತ ಪಾಠಶಾಲೆಯ ಶಿಕ್ಷಕರಾದ ಎ.ಎಮ್.ಅರುಣಕುಮಾರ ಅವರಿಗೆ ನ.13 ರಂದು ಧಾರವಾಡದ ಸಮುಚ್ಛ ಭವನದಲ್ಲಿ ಸಂಜೆ.5 ಗಂಟೆಗೆ ನಡೆಯಲಿರುವ ಜಾನಪದ ಕಲಾಸಿರಿ ಉತ್ಸವದಲ್ಲಿ ಧಾರವಾಡದ ನಾಟ್ಯ ಸ್ಪೂತರ್ಿ ಆರ್ಟ & ಕಲ್ಚರಲ್ ಅಕಾಡಮಿಯವರು ಕಲಾಸಿರಿ ಬಿರುದನ್ನು ನೀಡಿ ಗೌರವಿಸುವರು. ಅರುಣ ಕುಮಾರವರು ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಲ್ಚರಲ್ ಅಕ್ಯಾಡಮಿಯು ಪ್ರಕಟಣೆಯಲ್ಲಿ ತಿಳಿಸಿದೆ.