ಓರಂಗಾಬಾದ 30 :ಕರ್ನಾಟಕ ಸಂಭ್ರಮ 50 ಸವಿನೆನಪು ನಿಮಿತ್ಯವಾಗಿ ಇದೇ ಭಾನುವಾರ ಭವ್ಯ ಸಮಾರಂಭ ಆಯೋಜನೆ ಮಾಡಲಾಗಿದೆ. ಹಾಗೂ ಮರಾಠವಾಡದಲ್ಲಿ ಕನ್ನಡದ ಕಂಪು ಹರಿಸುವ ಕಾರ್ಯ ನಿರಂತರವಾಗಿ ಮಾಡುತ್ತಾ ಬರುತ್ತಿದ್ದೇವೆ. ಈ ವರ್ಷದ ವಿಶೇಷ ಸಮಾರಂಭದಲ್ಲಿ ಕನ್ನಡ ನಾಡು ನುಡಿಯ ಕಲಾ ಸಿರಿಮಂತಿಕೆಯನ್ನು ಹೊಂದಿರುವ ಸಾಂಸ್ಕೃತಿಕ ಮನೋರಂಜನೆಯ ರಸಮಂಜರಿ ಸಮಾರಂಭವು ಆಯೋಜಿಸಲಾಗಿದೆ. ನಗರದ ಕನ್ನಡಿಗರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗಿಳಿಸಬೇಕು ಎಂದು ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘದ ಕೇಶಪ್ಪ ಹೊನ್ನಳಿ ಹಾಗೂ ಶ್ರೀನಿವಾಸ ತೇಲಂಗ ಕನ್ನಡಿಗರಿಗೆ ಮನವಿ ಮಾಡಿದರು.
ನಗರದ ಸಿಡಕೋ ಆರ್ಚಡ ಶಾಲೆಯ ಆವರಣದಲ್ಲಿ ಕರ್ನಾಟಕ 50ರ ಸವಿನೆನಪಿಗಾಗಿ ಮರಾಠವಾಡ ಕನ್ನಡ ಸಾಂಸ್ಕೃತಿಕ ಸಂಘ ಓರಂಗಬಾದ ಹಾಗೂ ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಇಬ್ಬರ ಸಂಯುಕ್ತಾಶ್ರಯದಲ್ಲಿ ಗಡಿನಾಡು ಕನ್ನಡ ಉತ್ಸವವನ್ನು ಆಯೋಜನೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಶ್ರೀನಿವಾಸ ತೇಲಂಗ ಮಾಹಿತಿ ನೀಡಿದರು.
ಭಾನುವಾರ ಅಂದರೆ 1-12-2024ರಂದು ಸಾಯಂಕಾಲ ಸಮಾರಂಭವು ಮಹಾನಗರ ಪಾಲಿಕೆಯಆಯುಕ್ತಕನ್ನಡಿಗರಾದ ಶ್ರೀಕಾಂತ ಜಿ ಅವರುಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಸಲಿದ್ದಾರೆ. ಸಮಾರಂಭದಅಧ್ಯಕ್ಷತೆಯನ್ನುಕರ್ನಾಟಕಗಡಿಅಭಿವೃದಿ ಪ್ರಾಧಿಕಾರದಅಧ್ಯಕ್ಷ ಹಾಗೂ ಮಾಜಿ ಶಾಸಕ ಶ್ರೀ ಸೋಮಣ್ಣ ಬೇವಿನಮರದ ವಹಿಸಿಕೊಳ್ಳಲಿದ್ದಾರೆ. ಮುಖ್ಯಅಥಿತಿಯಾಗಿರಾಜಕೀಯಧುರಿಣ್ಯ ಮಾಜಿಮಂತ್ರಿಚಂದ್ರಕಾಂತಖೈರೆ. ಉದಗಿರ ಮಹಾವಿದ್ಯಾಲಯದಕನ್ನಡ ವಿಭಾಗದ ಮುಖ್ಯಸ್ಥಡಾರಮೇಶ ಮೂಲಗೆ ಆಗಮಿಸಲಿದ್ದಾರೆ. ಸಮಾರಂಭದಲ್ಲಿಆಶಯ ನುಡಿಕರ್ನಾಟಕಗಡಿಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಮಾಡುವವರು. ಎಂದು ಶ್ರೀನಿವಾಸ ತೇಲಂಗ ಮಾಹಿತಿ ನೀಡಿದರು. ಕನ್ನಡ ಸೇವಕರರಿಗೆ ಹೆಮ್ಮೆಯಕನ್ನಡಿಗ ಪ್ರಶಸ್ತಿ ಪ್ರದಾನ ನಿರಂತರವಾಗಿಕನ್ನಡ ಸೇವೆ ಮಾಡುತ್ತಿರುವ ಪ್ರಮುಖ ಸೇವಕರಿಗೆ ಹೆಮ್ಮೆಯಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ನಿಟ್ಟಿನಲ್ಲಿ ಮರಾಠವಾಡ ಭಾಗದಲ್ಲಿಕನ್ನಡ ಸೇವೆ ಮಾಡುತ್ತಿರುವ ಶ್ರೀ ಸೋಮಣ್ಣ ಬೇವಿನಮರದ, ಡಾ. ರಮೇಶ ಮೂಲಗೆ, ಶ್ರೀಕಾಂತ, ನಾಗರಾಜ ಬೆಂಗಳೂರು ಇವರಿಗೆಕನ್ನಡ ಸೇವೆಯನ್ನು ಗುರುರಿಸಿ ಹೆಮ್ಮೆಯಕನ್ನಡಗ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತದೆ. ಸಾಂಸ್ಕೃತಿಕರಸಮಂಜರಿಕಾರ್ಯಕ್ರಮಕನ್ನಡಗಡಿಉತ್ಸವ ನಿಮಿತ್ಯವಾಗಿ ಬೆಂಗಳೂರಿನ ಖ್ಯಾತಕಲಾವಿದರಾದತಮಟೆ ನಾಗರಾಜಅವರ ತಂಡದಿಂದ ವಿನೂತನ ಕನ್ನಡ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ವರ್ಷದ ಕಾರ್ಯಕ್ರಮದ ವಿಶೇಷ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ಜನರು ನೋಡಿ ಆನಂದಿಲಿದ್ದಾರೆ ಎಂದು ಕೇಶಪ್ಪ ಹೊನ್ನಳಿ ತಿಳಿಸಿದರು.ನಗರದಲ್ಲಿರುವ ಎಲ್ಲಾ ಕನ್ನಡಿಗರು ಭಾನುವಾರದ ಕನ್ನಡ ಸಮಾರಂಭದಲ್ಲಿ ಭಾಗಿಯಾಗಬೇಕು ಎಂದು ಹೊನ್ನಳಿಯವರು ಮನವಿ ಮಾಡಿದ್ದಾರೆ. ಕನ್ನಡ ಭವನ ನಿರ್ಮಾಣ ಮಾಡಬೇಕು ಕನ್ನಡಿಗರುಓರಂಗಬಾದನಲ್ಲಿಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿದು. ಎಲ್ಲರೂಒಂದೇಡೆ ಸೇರಿಕೊಂಡು ಸಾಂಸ್ಕೃತಿಕ ಸಮಾರಂಭ ಮಾಡಲುಒಂದು ಭವ್ಯಕನ್ನಡ ಭವನದ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಓರಂಗಬಾದನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವು ಭೂಮಿ ಖರೀದಿಸಿ ಕನ್ನಡ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಮರಾಠವಾದ ಕನ್ನಡ ಸಾಂಸ್ಕೃತಿಕ ಸಂಘವು ಕರ್ನಾಟಕಕ್ಕೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಫಲ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸದಸ್ಯರು ಈ ಬಗ್ಗೆ ಅಧ್ಯಕ್ಷ ಸೋಮಣ್ಣ ಬೇವಿನಮರದ ಗಮನಹರಿಸಬೇಕು ಎಂದು ಒತ್ತಾಯಿಸಿದೆ.
ಕನ್ನಡ ಮಾಧ್ಯಮದಲ್ಲಿ ಓದಿ ದುಡಿಮೆಗಾಗಿ ಮಹಾರಾಷ್ಟ್ರದಲ್ಲಿಜೀವನ ಮಾಡುತ್ತಿರುವಕನ್ನಡಿಗರ ಸ್ಥಿತಿ ಡೋಲಾಯಮಾನವಾಗಿದೆ. ಈ ಕಡೆ ಮಹಾರಾಷ್ಟ್ರದಿಂದ ಏನು ಪ್ರಯೋಜನೆಇಲ್ಲ. ಆ ಕಡೆಗೆಕರ್ನಾಟಕ ಸರ್ಕಾರದಿಂದ ಏನು ಪ್ರಯೋಜನೆಇಲ್ಲದೆ ಸ್ಥಿತಿಯನ್ನು ಮಹಾರಾಷ್ಟ್ರದ ಕನ್ನಡಿಗರು ಅನುಭವಿಸುತ್ತಿದ್ದಾರೆ,
ಕರ್ನಾಟಕಗಡಿ ಪ್ರದೇಶಅಭಿವೃದ್ದಿ ಪ್ರಾಧಿಕಾರ ಈ ಕಡೆ ಗಮನಹರಿಸಿ ಕನ್ನಡಿಗರ ಸ್ಥಿತಿಯನ್ನು ಸರ್ಕಾರ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕುಎಂದು ಮರಾಠವಾಡಕನ್ನಡ ಸಾಂಸ್ಕೃತಿಕ ಸಂಘದಒತ್ತಾಯವಾಗಿದೆ ಭಾನುವಾರ ನಡೆಯುವ ಕರ್ನಾಟಕ ಸಂಭ್ರಮ 50ರ ಸವಿನೆನಪಿನ ಸಮಾರಂಭಕ್ಕೆ ಕ್ಷೆಣಗಣನೆ ಆರಂಭವಾಗಿದು. ಓರಂಗಾ ಬಾದ ನಗರದ ಕನ್ನಡಿಗರಲ್ಲಿ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕನ್ನಡಿಗರು ಉತ್ಸಾಹ ಉಲ್ಲಾಸದಿಂದ ಸಮಾರಂಭದ ಆಯೋಜನೆಯಲ್ಲಿ ತೊಡಗಿದ್ದಾರೆ. ಈ ಸಮಾರಂಭವು ಓರಂಗಬಾದನಲ್ಲಿ ಇತಿಹಾಸ ನಿರ್ಮಾಣ ಮಾಡಲಿದೆ.