ಕನ್ನಡ ಭಾಷೆಗೆ ಎರಡು ಸಾವಿರ ವರುಷದ ಇತಿಹಾಸ ಇದೆ: ಕಂಬಳಿ

ಶಿಗ್ಗಾವಿ08 : ಕನ್ನಡ ಭಾಷೆಗೆ ಎರಡು ಸಾವಿರ ವರುಷದ ಇತಿಹಾಸ ವಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ತನ್ನದಾಗಿಸಿಕೋಂಡ ಕೀತರ್ಿ ಕನ್ನಡ ಭಾಷೆಗೆ ಲಭಿಸುತ್ತದೆ ಎಂದು ಅಕ್ಕಿಆಲೂರ ಸಿ.ಜಿ.ಬೆಲ್ಲದ ಮಹಾ ವಿದ್ಯಾಲಯದ ಉಪನ್ಯಾಸಕ ದಿಲೀಪ್ ಕಂಬಳಿ ಹೇಳಿದರು.

      ಪಟ್ಟಣದ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ `ಅನ್ನ ನೀಡುವ ಭಾಷೆಯಾಗಿ ಕನ್ನಡ' ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿದ ಅವರು, ಅನಿಶ್ಚಿತ ಕಾಲಘಟ್ಟದಿಂದ 7 ನೇ ಶತಮಾನದವರಗೂ ಪೂರ್ವದ ಹಳಗನ್ನಡ ಭಾಷೆ ಚಾಲ್ತಿಯಲ್ಲಿದ್ದಿತು. ನಂತರ 12 ನೇ ಶತಮಾನದವರೆಗೆ ಹಳಗನ್ನಡ, 18 ನೇ ಶತಮಾನದವರೆಗೆ ನಡುಗನ್ನಡ, 18 ನೇ ಶತಮಾನದಿಂದ ಇಲ್ಲಿಯವರೆಗೆ ಹೊಸಗನ್ನಡ ಬಾಷೆ ಮುಂದುವರೆದುಕೋಂಡು ಬಂದಿದೆ ಎಂದು ಹೇಳಿದರು.

     21 ನೇ ಶತಮಾನದಲ್ಲಿ ಕನ್ನಡ ಭಾಷೆ ಅಭಿವೃದ್ದಿ ಬಹಳ ವ್ಯಾಪಕವಾಗಿ ಹರಡಿದ್ದು, ಕನ್ನಡಭಾಷೆಗೆ ಕೇಂದ್ರ ಸರಕಾರ ಅಭಿಜಾತ ಭಾಷೆ ಎಂಬ ಸ್ಥಾನಮಾನವನ್ನು ನೀಡಿದೆ. ಅಂತರಜಾಜದಲ್ಲೂ ಕೂಡಾ ಕನ್ನಡ ಬಾಷೆಯ ಬಳಕೆ ಯಥೇಚ್ಚವಾಗಿ ಬಳಕೆಯಾಗುತ್ತಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಕೂಡಾ ಮುಂಚೋಣಿ ಬಾಷೆಯಾಗಿ ಬೆಳೆಯತೋಡಗಿದೆ. ಇಗ ಎಸ್.ಡಿ.ಎ. ಎಫ್.ಡಿ.ಎ. ಪರೀಕ್ಷೆಗಳನ್ನು ಸೇರಿದಂತೆ, ಕೆ.ಎ.ಎಸ್. ಐ.ಎ.ಎಸ್. ಪರೀಕ್ಷೆಗಳನ್ನೂ ಕೂಡಾ ಕನ್ನಡದಲ್ಲಿ ಬರೆಯಬಹುದಾಗಿದೆ ಎಂದು ಹೇಳಿದರಲ್ಲದೆ, ತಮ್ಮ 13 ವರ್ಷಗಳ ಸ್ಪಧರ್ಾತ್ಮಕ ಪರೀಕ್ಷೆಗಳ ಅನುಭವದ ಹಿನ್ನಲೆಯಲ್ಲಿ ಕನ್ನಡಕ್ಕೆ ಇರುವ ಸ್ಥಾನಮಾನ, ಓದುವ ಬಗೆ, ರೀತಿ, ಅವಶ್ಯವಿರುವ ಪುಸ್ತಕಗಳ ಪಟ್ಟಿ ಹೀಗೆ ಒಟ್ಟಾರೆ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯಕ್ಕೆ ಹೇಗೆ ತಯಾರಿ ಮಾಡಬೇಕೆಂಬುದರ ಬಗ್ಗೆ ವಿದ್ಯಾಥರ್ಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

      ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಆನಂದ ಇಂದೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

     ಪ್ರೋ. ನಿಂಗಪ್ಪ ಕಲಕೋಟಿ, ನಾಜ್ನೀನ್, ಲುಬ್ನಾನಾಜ್, ನಾರಾಯಣ, ಶರಣ ಹೊನ್ನಣ್ಣನವರ, ಸಂದೀಪಗೌಡ ಪಾಟೀಲ, ಉಮೇಶ ಕರ್ಜಗಿ, ಚನ್ನಬಸವನಗೌಡ ದೊಡ್ಡಗೌಡ್ರ,  ಹುದಾಹುಸನಾ ಇಸಾಮತಿ, ಮಂಜುನಾಥ ನಾಯ್ಕ ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಪ್ರೊ ಡಿ.ಎಸ್ ಸೊಗಲದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ಹಿರೇಮಠ ಸ್ವಾಗತಿಸಿದರು.   ಯಲ್ಲಮ್ಮ ಲಕ್ಷ್ಮೇಶ್ವರ ನಿರೂಪಿಸಿದರು. ಸಂಗೀತಾ ಕುಂದೂರ ವಂದಿಸಿದರು.