ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಲು ಕರಿಬಸಪ್ಪ ನಡಗುಂದಿ ಆಗ್ರಹ

Karibasappa Nadagandi demands strict punishment for terrorists

ಯಲಬುರ್ಗಾ 26: ಕಾಶ್ಮೀರದ ಪಹಲ್ಕಾಮ್‌ನಲ್ಲಿ ಪ್ರವಾಸಿಗರ ಮೇಲೆ ಭೀಕರವಾಗಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ನಡಗುಂದಿ ಆಗ್ರಹಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಜಮ್ಮು ಕಾಶ್ಮೀರದ ಪಹಲ್ಲಾಂನಲ್ಲಿ ದೇಶದ 26 ಅಧಿಕ ಜನರನ್ನು ಭಯೋತ್ಪಾದಕರ ಹತ್ಯೆ ಖಂಡಿಸಿ, ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ  ಮಾತನಾಡಿದ ಅವರು,  ಪಹಲ್ದಾಂ ದಾಳಿ ನಿಜಕ್ಕೂ ಆತಂಕ ಹುಟ್ಟಿಸಿದೆ. ಇಂತಹ ದುಷ್ಕೃತ್ಯಗಳು ಮಾಡಿದ ಭಯೋತ್ಪಾದಕರ ವಿರುದ್ಧ ಪ್ರಧಾನಿ ಮೋದಿ ಜೀ ಅವರು ತಕ್ಕ ಪಾಠವನ್ನು ಕಲಿಸಬೇಕು. ಮೋದಿ ಅವರಿಗೆ ನಮ್ಮ ಪಕ್ಷದ ಬೆಂಬಲವನ್ನು ನೀಡಲಾಗಿದೆ. ಈ ಘಟನೆಗೆ ಕಾರಣರಾದ ಅವರ ಮೇಲೆ ಕ್ರಮ ವಹಿಸಬೇಕು ಕೆಲವು ನಿರ್ಧಾರಗಳನ್ನು ಕೈಗೊಂಡಿರುವುದು ಅದನ್ನು ನಾವು ಸ್ವಾಗತಿಸುತ್ತೇವ.  ಇಂಥ ಅಮಾನವೀಯ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಪ್ರಮುಖರಾದ  ಸುಧೀರ್ ಕೊರ್ಲಹಳ್ಳಿ,  ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರೆಡ್ಡಿ,  ರೈಮನ್ ಸಾಬ್ ಮಕ್ಕಪ್ಪನವರ, ಸಂಗಮೇಶ ಗುತ್ತಿ,  ಮಲ್ಲು ಜಕ್ಕಲಿ, ಹಂಪಯ್ಯಸ್ವಾಮಿ ಹಿರೇಮಠ, ರೇವಣೆಪ್ಪ ಹಿರೇಕುರುಬರ, ಸಂಗಣ್ಣ ತೆಂಗಿನಕಾಯಿ, ಹನುಮಂತ ಭಜಂತ್ರಿ, ರಹಮಾನ್ ನಾಯಕ, ಎಂ.ಎಫ್ ನದಾಫ್, ನಿಂಗಪ್ಪ ಕಮತರ, ಶರಣಗೌಡ ಬಸಾಪೂರ, ಸಿದ್ದು ಪೋಪಾಟೀಲ, ತಿಪ್ಪಣ್ಣ ಹಡಗಲಿ ಸೇರಿ ಪಕ್ಷದ ಕಾರ್ಯಕರ್ತರು ಇದ್ದರು.