ಜಮಖಂಡಿ 15: ತಾಲೂಕಿನ ಹುನ್ನೂರ ಗ್ರಾಮದಲ್ಲಿ ಕರ್ನಾಟಕ ಭೀಮ ಸೇನೆ ಸಹಯೋಗದಲ್ಲಿ ಡಾ,ಬಿ,ಆರ್, ಅಂಬೇಡ್ಕರ ಅವರ 134ನೇ ಜಯಂತಿಯೋತ್ಸವವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು.
ಡಾ, ಬಿ,ಆರ್ ಅಂಬೇಡ್ಕರ್ ಸರ್ಕಲ್ನಲ್ಲಿ ಪತ್ಥಳಿಗೆ ಮಾಲಾರೆ್ಣಯನ್ನು ಮಾಡುವ ಮೂಲಕ ಗೌರವ ನಮನಗಳನ್ನು ಸಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಬಿಇಓ ಅಶೋಕ ಬಸಣ್ಣವರ, ತಾ,ಪಂ, ಇ,ಓ ಸಂಜು ಜುನ್ನೂರ, ಸಂಘಟನೆಯ ಜಿಲ್ಲಾಧ್ಯಕ್ಷ ಪ್ರವೀಣ ಹೋಳಪ್ಪಗೋಳ, ದಲಿತ ಮುಖಂಡರಾದ ಹನುಮಂತ ಹೊಳೆಪ್ಪಗೋಳ, ಶಿವಲಿಂಗ ಕಂಡಪಗೊಳ, ಸುರೇಶ ಹೊಳೆಪ್ಪಗೋಳ, ಕುಮಾರ ಮುಧೋಳ, ರಾಜು ಗಾಡಿವಡ್ಡರ, ರಮೇಶ ಸಿಂಗೆ, ಸುರೇಶ ಗಾಡಿವಡ್ಡರ, ಸಿದ್ದು ಸಿಂಗೆ, ಸಂತೋಷ ಕಲಬುರ್ಗಿ ಸೇರಿದಂತೆ ಅನೇಕರು ಇದ್ದರು.