ಎಂ ಬಿ ಬಸವರಾಜಗೆ ಒಲಿದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಶಸ್ತಿ

Karnataka Press Club Award for M.B. Basavaraj

ಎಂ ಬಿ ಬಸವರಾಜಗೆ ಒಲಿದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಶಸ್ತಿ  

ಲೋಕದರ್ಶನ ವರದಿ   

ಹೂವಿನ ಹಡಗಲಿ  26:  ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಎಂ ಬಿ ಬಸವರಾಜಗೆ ಲಭಿಸಿದೆ.ತಾಲೂಕಿನ ಸೋಗಿ ಗ್ರಾಮೀಣ ಪ್ರದೇಶದ ಪ್ರಗತಿಪರ ರೈತರಾದ ಎಂ ಬಿ ಬಸವರಾಜ 2024 ನೇ ಸಾಲಿನ ವ್ಯವಸಾಯ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ "ಕರ್ನಾಟಕ ಯುವ ಪ್ರಶಸ್ತಿ" ನೀಡಿ ಗೌರವಿಸಲಾಯಿತು.ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಕನ್ನಡದ ಹೆಸರಾಂತ ನಟಿ ಶೃತಿ ಹಾಗೂ ಆರೋಗ್ಯ ಕ್ಷೇತ್ರದ ಪ್ರಸಿದ್ಧ ವೈದ್ಯೆ ಡಾ ಪದ್ಮಿನಿ ಪ್ರಸಾದ್ ಅವರು ಬಸವರಾಜ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಎಂ ಬಿ ಬಸವರಾಜ ಸೋಗಿ ಗ್ರಾಮದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದರು.ತಂದೆ ತಾಯಿ ಇಬ್ಬರು ಕೃಷಿ ಆಧಾರಿಸಿ ಬದುಕು ಕಟ್ಟಿಕೊಂಡವರು.  

ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಮಾಡಿರುವ ಇವರು ತಮ್ಮ ಜಮೀನಿನಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ. ವಾಣಿಜ್ಯ ಬೆಳೆಗಳಿಗೆ  ಹೆಚ್ಚಿನ ಆದ್ಯತೆಯನ್ನು ನೀಡಿ. ಯಶಸ್ಸು ಕಂಡವರು. ರೈತ ಸಂಪರ್ಕ ಕೇಂದ್ರದ ಮಾಹಿತಿ ಪಡೆದು ಕಡಿಮೆ ಕ್ರಿಮೀನಾಶಕಗಳನ್ನು ಬಳಸಿ ಜೊತೆಗೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ದಾಳಿಂಬೆ, ಬಾಳೆ ಹಣ್ಣು, ಪಪ್ಪಾಯಿ, ಕುಂಬಳಕಾಯಿ,  ಅರಿಶಿಣ,  ಸೇರಿದಂತೆ ಮಿಶ್ರ ಬೆಸಾಯ ಪದ್ಧತಿಮನ್ನು ಅಳವಡಿಸಿಕೊಂಡ. ಮೆಕ್ಕೆ ಜೋಳ, ಗೋಧಿ, ರಾಗಿಯನ್ನು ಬೆಳೆದು  ವೈಜ್ಞಾನಿಕ ಬೇಸಾಯದಿಂದ  ರಾಜ್ಯದ ರೈತರಿಗೆ ಮಾದರಿಯಾಗಿದ್ದಾರೆ. ವಾರ್ಷಿಕ ಸುಮಾರು 50 ಲಕ್ಷದ ಆದಾಯ ಗಳಿಸಿ ಐಟಿ ಬಿಟಿ ಕಂಪನಿಗಳ ಕೆಲಸಗಾರರಿಗೆ ಸೆಡ್ಡು ಹೊಡೆದು. ತಮ್ಮದೇ ಹೊಲಗಳಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಸಹಾಯವನ್ನು ಮಾಡಿದ್ದಾರೆ.ಮೂಲತಃ ಕೃಷಿಯೇ ಇವರ ಬದುಕಿಗೆ ರಹದಾರಿ. ಇದರ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.ಅಭಿನಂದನೆ: ಎಂ ಬಿ ಬಸವರಾಜ ರವರಿಗೆ ಕೃಷಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದ್ದಕ್ಕೆ ಮಾಜಿ ಶಾಸಕ ಬಿ ಚಂದ್ರನಾಯ್ಕ್‌, ಮುಖಂಡರಾದ ಪಿ ಪೂಜಪ್ಪ, ಓದೋ ಗಂಗಪ್ಪ, ಈಟಿ ಲಿಂಗರಾಜ, ಬಾವಿ ಹಳ್ಳಿ ಸಿರಾಜ್, ಆರ್ ಟಿ ನಾಗರಾಜ್, ಹೊಳಲಿನ ಮುದ್ದ ನೂರು ಬಸಣ್ಣ, ರಾಮಮೂರ್ತಿ,ಗೋಣೆಗೌಡ.ಪ್ರದೀಪ್, ಶಂಕರ್, ಸಂಜೀವ ರೆಡ್ಡಿ,ಎಂ. ಪಿ. ಸುಮಾ ವಿಜಯ್, ಮಂಜುನಾಥ ಜೈನ್, ಶಂಕರಗೌಡ. ಉಮೇಶ್ ಎಣಗಿ. ಸುಭಾಷ್ ಹಂಪಸಾಗರ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ಇತರರು ಶುಭ ಹಾರೈಸಿ ಅಭಿನಂದಿಸಿದ್ದಾರೆ.