ಕಾರವಾರ ಉತ್ತರ ಕನ್ನಡದಲ್ಲಿ ಪ್ರಚಾರ ಆರಂಭಿಸಿದ ಬಿಜೆಪಿ

ಕಾರವಾರ 13: ಕಾರವಾರ ತಾಲ್ಲೂಕಿನ ಕಿನ್ನರ, ವೈಲವಾಡ, ಮಲ್ಲಾಪುರ ವಿಜರ್ೆ, ಗೋಟೆಗಾಳಿ, ದೇವಳಮಕ್ಕಿ ಗ್ರಾಮಗಳಲ್ಲಿ  ಬಿಜೆಪಿ ಈಗಾಗಲೇ ಭಾರೀ ಪ್ರಚಾರ ನಡೆಸಿತು. 

ಮಂಗಳವಾರ ವಿವಿದೆಡೆ  ಭಾರತೀಯ ಜನತಾ ಪಕ್ಷದ ಪರವಾಗಿ  ಅನಂತಕುಮಾರ ಹೆಗಡೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ  ಶಾಸಕಿ  ರೂಪಾಲಿ ಎಸ್. ನಾಯ್ಕ ವಿವಿದೆಡೆ ಗ್ರಾಮಗಳಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಮಾಡಿದರು.  ಮೋದಿ ಸರಕಾರದ ಸಾಧನೆಗಳು ಹಾಗೂ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ಯೋಜನೆಗಳ ಬಗ್ಗೆ ಅವರು ಜನರಿಗೆ ವಿವರಿಸಿದರು.  ಹಾಗೂ ಮೋದಿರವರ ನೇತೃತ್ವದಲ್ಲಿ ದೇಶದ ಮುನ್ನಡೆಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದರು.   ಎಲ್ಲಾ ಗ್ರಾಮಗಳಲ್ಲಿಯೂ ಜನರು  ಸೇರಿದ್ದು ಕಂಡು ಬಂತು.  ಈ ಸಂದರ್ಭದಲ್ಲಿ  ಬಿಜೆಪಿ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದು ಪಕ್ಷದ ಪರವಾಗಿ ಪ್ರಚಾರ ನಡೆಸಿದರು.