ಜಮಖಂಡಿ 19: ಶರಣರು, ಶರಣಿಯರು ಚಿಕ್ಕ ವಯಸ್ಸಿನಲ್ಲಿ ವಚನಗಳನ್ನು ರಚನೆ ಮಾಡಿ ಸಮಾಜದಲ್ಲಿನ ವ್ಯಕ್ತಿಗಳನ್ನು ಸುಧಾರಣೆ ಮಾಡುವ ಜ್ಞಾನವನ್ನು ನೀಡಿದ್ದಾರೆ. ಜ್ಞಾನ ಎಂಬುವದು ನಿಜವಾದ ಸಂಪತ್ತಾಗಿದೆ ಎಂದು ಗದಗ ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ನಗರದ ಓಲೇಮಠದಲ್ಲಿ ನಡೆದ ವಚನ ಜಾತ್ರಾ ಮಹೋತ್ಸವ ಸಂಜೆಯ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿ ಆರ್ಶೀವಚನದಲ್ಲಿ ಮಾತನಾಡಿದ ಅವರು, ಶಿವಶರಣರ ವಚನದಿಂದ ಮಾತ್ರ ಮನಸು ಪರಿವರ್ತನೆ ಆಗಲು ಸಾಧ್ಯ. ದುಶ್ಚಟ ತುಂಬಿರುವ ಬಂಡಿ ದೇಹವನ್ನು ಹೊರಗೆ ಬರಬೇಕಾದರೆ. ವಚನಗಳ ಮೂಲಕ ಮಾತ್ರ ಹೊರಗೆ ಬರಲು ಸಾಧ್ಯ. ಅಜ್ಞಾನ, ಅಂದಕಾರ, ಅಂದಶ್ರದ್ದೆ, ಲಿಂಗಭೇದವನ್ನು ಮತ್ತು ಜಾತಿ, ಮತ, ಪಂತಗಳನ್ನು ಮರೆತು ಸಮಾನತೆಗಾಗಿ ಶರಣರು ವಚನಗಳನ್ನು ಸಾರಿದಾರೆ. ಶರಣರು ಕಾಯಕ ಜೀವಿಗಳಾಗಿದರು ಎಂದರು.
ಶಿವಶರಣರು ಚಿಕ್ಕವಯಸ್ಸಿನಲ್ಲೇ ಜ್ಞಾನ ನೀಡಿದ್ದಾರೆ. ಅವರಂತೆ ಆನಂದ ದೇವರು ಸಹ ಚಿಕ್ಕವಯಸ್ಸಿನವರಾದರು ವಚನಗಳ ಜಾತ್ರೆಯನ್ನು ಮಾಡಿ. ಜನತೆಯಲ್ಲಿನ ಕಲ್ಮಷವಾದ ಮನಸನ್ನು ಸ್ವಚ್ಛಗೊಳಿಸುವ ಮೂಲಕ ವಚನಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಯಾರು ಕಾಯಕ ಮಾಡುತ್ತಾರೆ ಅವರು ಭಕ್ತರಾಗುತ್ತಾರೆ. ಸತ್ಯ ಶುದ್ದವಾದ ಕಾಯಕ ಮಾಡಬೇಕು. ಗಳಿಕೆ ಎಷ್ಟು ಮಹತ್ವದ್ದು ಅದನ್ನು ಬಳಸುವದು ಅಷ್ಟೇ ಮಹತ್ವದಾಗಿದೆ. ಎಲ್ಲರ ಜೊತೆ ಹಂಚಿಕೊಂಡರೆ ಮಾತ್ರ ಬಡತನ ನಿರ್ಮೂಲನೆ ಆಗುತ್ತದೆ. ವಚನಗಳ ಗ್ರಂಥಗಳು ಮಠದಲ್ಲಿ ಹುಟ್ಟುತ್ತವೆ, ಆದರೆ ಗ್ರಹಸ್ಥನ ಮನೆಯಲ್ಲಿ ಪುತ್ರೋತ್ಸವ ಹುಟ್ಟುತ್ತವೆ. ಮುಂದಿನ ದಿನಗಳಲ್ಲಿ ಪುಸ್ತಕಗಳು ಶಾಶ್ವತವಾಗಿ ಉಳಿತ್ತವೆ. ವಚನ ಓದುವ, ಬರೆಯುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳಸಿ ಉಳಿಸಬೇಕಾಗಿದೆ. ಮನೆಯಲ್ಲಿ ಸಂಸ್ಕಾರ ಉಳಿಸಿದ್ದರೆ ಮಾತ್ರ ಮಕ್ಕಳಲ್ಲಿ ಸಂಸ್ಕಾರ ಉಳಿಯಲು ಸಾಧ್ಯ ಎಂದು ಆರ್ಶೀವಚನ ನೀಡಿದರು.
ಮಾತೋಶ್ರೀ ಪ್ರಮೀಳಾ ತಾಯಿ, ರಾಹುಲ ಕಲೂತಿ, ಎ.ಕೆ.ಬಸನ್ನವರ, ಎನ್.ಎಸ್.ದೇವರವರ ಮಾತನಾಡಿದರು,
ಇದೇ ಸಂದರ್ಭದಲ್ಲಿ ಅಮೃತವಾಣಿ ವಚನದ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಎಂ.ಸಿ.ಗೊಂದಿ, .ಮಲ್ಲಮ್ಮ ಪಾಯಗೊಂಡ, ಗೀತಾ ಹಿರೇಮಠ, ನಂದಿನಿ ಬಾಂಗಿ, ಆಕಾಶ ಕಲಬೀಳಗಿ, ಹಡಪದ ಅಪ್ಪಣ ಸಮಾಜದ ಅಧ್ಯಕ್ಷರು. ಪದಾಧಿಕಾರಿಗಳು. ನೂಲಿ ಚಂದಯ್ಯ ಸಮಾಜದ ಅಧ್ಯಕ್ಷರು. ಪದಾಧಿಕಾರಿಗಳು, ಬಂಜತ್ರಿ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು. ಸರಸ್ವತಿ ಸಬರದ ಪ್ರಾರ್ಥನಿಸಿದರು. ಆನಂದ ದೇವರು ವಂದಿಸಿದರು.