ಕೊಟ್ಪಾ ದಾಳಿ: ಪಾನ್ ಶಾಪ್, ಹೋಟೆಲ್‌ಗಳಿಗೆ ದಂಡ

Kotpa attack: Pawn shops, hotels fined

ಮುದ್ದೇಬಿಹಾಳ 12: ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ತನಿಖಾದಳ ಸದಸ್ಯರೊಂದಿಗೆ ಕೊಟ್ಪಾ 2003 ಕಾಯ್ದೆ ಅಡಿ ದಾಳಿ ನಡೆಸಲಾಯಿತು. 

ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆವರೆಗೆ ಹಾಗೂ ಮುಖ್ಯ ರಸ್ತೆ ಬಜಾರ್ ಸುತ್ತ ಮುತ್ತ ಮಾರ್ಗಮಧ್ಯದಲ್ಲಿ ಇರತಕ್ಕಂತ ಪಾನ್ ಶಾಪ್ ಹಾಗೂ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿ ದಾಳಿಮಾಡಿ ದಂಡವನ್ನು ವಿಧಿಸಲಾಯಿತು. ದಾಳಿಯಲ್ಲಿ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಶ್ಪರಿಣಾಮಗಳು ಬಗ್ಗೆ ಅರಿವೂ ಮೂಡಿಸಲಾಯಿತು. 

ತಂಬಾಕು ಉತ್ಪನ್ನ ಮಾರಾಟಗಾರರಿಗೆ ದಂಡ: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲಕರಿಗೆ, ವ್ಯಾಪಾರಸ್ಥರಿಗೆ ಕೊಟ್ಟ 2003 ಕಾಯ್ದೆ ಅಡಿ 10 ಪ್ರಕರಣವನ್ನು ದಾಖಲಿಸಿ ರೂ.3700 ದಂಡ ವಸೂಲು ಮಾಡಲಾಯಿತು ಸೆಕ್ಷನ್ 4 ಮತ್ತು 6 (ಎ)ಗಳ ನಾಮಫಲಕಗಳನ್ನು ಅಳವಡಿಸಿ ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು.  

ದಾಳಿಯಲ್ಲಿ ಅಬಕಾರಿ ಮುಖ್ಯ ಪೇದೆ ಬಿ ಎಸ್ ತಡಕಲ್ ಗ್ರಹ ರಕ್ಷಕ ಶರಣು ಹೆಬ್ಬಾಳ ಇಲಾಖೆಯ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಎಂ ಎಸ್ ಗೌಡರ, ಆರ್ ಎಸ್ ಸಜ್ಜನ, ಇಸ್ಮಾಯಿಲ್ ವಾಲಿಕಾರ ಹಾಗೂ ಪುರಸಭೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.