ಸುಧಾಕರ ದೈವಜ್ಞ
ಶಿಗ್ಗಾವಿ14 : ವಿಶ್ವದಾದ್ಯಂತ ಬೀಕರವಾಗಿ ಪಸರಿಸುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಣ ಮಾಡಲು ಮತ್ತು ದೇಶದಾದ್ಯಂತ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮನೆಯಲ್ಲಿಯೇ ಇರಲು ಕಾರಣಿಕರ್ತರಾದ ಇಲಾಖೆ ಗೃಹ ಇಲಾಖೆ ಮತ್ತು ಈ ಎಲ್ಲ ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಕಂದಾಯ ಇಲಾಖೆಯ ಸಿಬ್ಬಂದಿಗಳ ಕಾರ್ಯವು ಶ್ಲಾಘನೀಯವಾದದ್ದು. ಅಲ್ಲದೇ ದಿನದ 24 ಗಂಟೆಯು ಸೇವೆಯನ್ನು ಸಲ್ಲಿಸಿದ ಇಲಾಖೆಗಳು ಎಂದು ಹೇಳಬಹುದಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಪೊಲೀಸ ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ತಾಲೂಕಿನಲ್ಲಿ ಯಾವುದೇ ಸೋಂಕಿತರು ಪತ್ತೆಯಾಗದಿರುವುದಕ್ಕೆ ನಿದರ್ಶನ ಎಂದು ಹೇಳಬಹುದು.
ಪೋಲಿಸ ಉಪಾಧೀಕ್ಷಕರು: ಉಪ ವಿಭಾಗ ಕಾಯರ್ಾಲಯದ ಅಧಿಕಾರಿ ಕೆ.ಒಬಳಪ್ಪ ಸರ ಆನಾರೋಗ್ಯ ನಿಮಿತ್ಯ ರಜೆ ಮೇಲೆ ಇರುವುದರಿಂದ ಪ್ರಭಾರಿ ವಿನೋದ ಮುಕ್ತೆದಾರ ನೇತೃತ್ವದಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು ಹಾವೇರಿ ಹಾಗೂ ಗೃಹ ಇಲಾಖೆಯ ಆದೇಶದಂತೆ ನಿರ್ವಹಿಸಿ ತಾಲೂಕಿನಲ್ಲಿ ಲಾಕಡೌನ ಸಮಯದಲ್ಲಿ ಯಾವುದೇ ತೊಂದರೆ ಆಗದ ಹಾಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪೊಲೀಸ ವೃತ್ತ ನಿರೀಕ್ಷಕರು : ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬಸವರಾಜ ಹಳಬಣ್ಣವರ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವ ಮತ್ತು ಮಾರ್ಗದರ್ಶನ ಹಾಗೂ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಹಿತದೃಷ್ಟಿಯಿಂದ ಪಟ್ಟಣದ ಪೋಲಿಸ ಠಾಣೆಯ ಉಪ ನಿರೀಕ್ಷಕ ಅಧಿಕಾರಿಗಳಾದ ಕೆ.ಎನ್.ಹಳ್ಳಿಯವರ, ಎಂ.ಜಿ.ತಗಡಿನಮನಿ, ಬಂಕಾಪೂರ ಠಾಣೆಯ ಪೋಲಿಸ ಉಪನಿರೀಕ್ಷಕ ಅಧಿಕಾರಿ ಸಂತೋಷ ಪಾಟೀಲ, ತಡಸ ಠಾಣೆಯ ಪೋಲಿಸ ಉಪ ನಿರೀಕ್ಷಕ ಅಧಿಕಾರಿ ಡಿ.ಎನ್.ಸಣ್ಣಮನಿ ಈ ಎಲ್ಲ ಮೇಲ್ಕಾಣಿಸಿದ ಅಧಿಕಾರಿಗಳ ನಿರಂತರ ಪ್ರರಿಶ್ರಮದಿಂದ ಹಗಲಿರುಳ ಸಾರ್ವಜನಿಕರ ಸೇವೆಯನ್ನು ಸಲ್ಲಿಸಿದ ನಮ್ಮ ಪೋಲಿಸ ಅಧಿಕಾರಿಗಳಿಗೆ ವಂದನೆ ಅಭಿನಂದನೆಗಳು.
ಶಿಗ್ಗಾವಿ ಠಾಣೆ ಪೊಲೀಸ್ ಉಪ ನಿರೀಕ್ಷಕರು : ಕೆ.ಎನ್.ಹಳ್ಳಿಯವರ, ಎಂ.ಜಿ.ತಗಡಿನಮನಿ ಇವರಿಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಶಿಗ್ಗಾವಿ ಪಟ್ಟಣ ಹಾಗೂ ತಾಲೂಕಿನ 32 ಗ್ರಾಮಗಳಲ್ಲಿ ಈ ಅಧಿಕಾರಿಗಳ ಜೊತೆಗೆ ಪೋಲಿಸ ಸಹಾಯಕ ಉಪ ನಿರೀಕ್ಷಕ 04, ಹವಾಲ್ದಾರ 14, ಪೋಲಿಸ್ ಪೇದೆಗಳು 21 ಅದರಲ್ಲಿ ಮಹಿಳಾ ಪೋಲಿಸ ಪೇದೆ 03, ಗೃಹ ರಕ್ಷಕದಳದ ಸಿಬ್ಬಂದಿ 25 ಇವರೆಲ್ಲರ ಸಹಯೋಗದೊಂದಿಗೆ ಪಟ್ಟಣ ಮತ್ತು ಗ್ರಾಮಗಳ ಗಸ್ತು ತಿರುಗುವುದು, ಅಂಗಡಿ ಮುಗ್ಗಟ್ಟುಗಳು ಮತ್ತು ದೇವಾಲಯ ಹಾಗೂ ಮಸೀದಿಗಳು ಮತ್ತು ತಾಲೂಕಿನ ಸರಹದ್ದಿನ ಮೇಲ್ವಿಚಾರಣೆಯ ಜೊತೆಗೆ ಬೇರೆ ಬೇರೆ ಕಡೆಯಿಂದ ಬಂದಂತಹ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಮುಖಾಂತರ ಕೊರೋನಾ ಸೋಕು ತಡೆಗಟ್ಟುವಲ್ಲಿ ಹಗಲಿರುಳು ಪ್ರಾಮಾಣಿಕ ಸೇವೆಯನ್ನು ಮಾಡಿದ ಸಿಬ್ಬಂದಿಗಳಿಗೆ ತಾಲೂಕಿನ ಪರವಾಗಿ ಅಭಿನಂದನೆಗಳು.
ಬಂಕಾಪೂರ ಠಾಣೆ ಪೊಲೀಸ್ ಉಪ ನಿರೀಕ್ಷಕರು : ಸಂತೋಷ ಪಾಟೀಲ ಅಧಿಕಾರಿಗಳ ನೇತೃತ್ವದಲ್ಲಿ ಬಂಕಾಪೂರ ಪಟ್ಟಣ ಹಾಗೂ ಸುತ್ತಮುತ್ತಲಿನ 32 ಗ್ರಾಮಗಳಲ್ಲಿ ಈ ಅಧಿಕಾರಿಗಳ ಜೊತೆಗೆ ಪೊಲೀಸ್ ಸಹಾಯಕ ಉಪ ನಿರೀಕ್ಷಕ 04, ಹವಾಲ್ದಾರ 10, ಪೊಲೀಸ್ ಪೇದೆಗಳು 21 , ಗೃಹ ರಕ್ಷಕದಳದ ಸಿಬ್ಬಂದಿ 10 ಇವರೆಲ್ಲರ ಸಹಯೋಗದೊಂದಿಗೆ ಪಟ್ಟಣ ಮತ್ತು ಗ್ರಾಮಗಳ ಗಸ್ತು ತಿರುಗುವುದು, ಅಂಗಡಿ ಮುಗ್ಗಟ್ಟುಗಳು ಮತ್ತು ದೇವಾಲಯ ಹಾಗೂ ಮಸೀದಿಗಳು ಮತ್ತು ತಾಲೂಕಿನ ಸರಹದ್ದಿನ ಮೇಲ್ವಿಚಾರಣೆಯ ಜೊತೆಗೆ ಬೇರೆ ಬೇರೆ ಕಡೆಯಿಂದ ಬಂದಂತಹ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಮುಖಾಂತರ ಕೊರೋನಾ ಸೋಕು ತಡೆಗಟ್ಟುವಲ್ಲಿ ಹಗಲಿರುಳು ಪ್ರಾಮಾಣಿಕ ಸೇವೆಯನ್ನು ಮಾಡಿದ ಸಿಬ್ಬಂದಿಗಳಿಗೆ ತಾಲೂಕಿನ ಪರವಾಗಿ ಅಭಿನಂದನೆಗಳು.
ತಡಸ ಠಾಣೆ ಪೊಲೀಸ್ ಉಪ ನಿರೀಕ್ಷಕರು : ಡಿ.ಎನ್. ಸಣ್ಣಮನಿ ಅಧಿಕಾರಿಗಳ ನೇತೃತ್ವದಲ್ಲಿ ತಡಸ ಪಟ್ಟಣ ಹಾಗೂ ಸುತ್ತಮುತ್ತಲಿನ 30 ಗ್ರಾಮಗಳಲ್ಲಿ ಈ ಅಧಿಕಾರಿಗಳ ಜೊತೆಗೆ ಪೋಲಿಸ ಸಹಾಯಕ ಉಪ ನಿರೀಕ್ಷಕ 04, ಹವಾಲ್ದಾರ 11, ಪೋಲಿಸ್ ಪೇದೆಗಳು 20 ಸಿಬ್ಬಂದಿ ಇವರೆಲ್ಲರ ಸಹಯೋಗದೊಂದಿಗೆ ಪಟ್ಟಣ ಮತ್ತು ಗ್ರಾಮಗಳ ಗಸ್ತು ತಿರುಗುವುದು, ಅಂಗಡಿ ಮುಗ್ಗಟ್ಟುಗಳು ಮತ್ತು ದೇವಾಲಯ ಹಾಗೂ ಮಸೀದಿಗಳು ಮತ್ತು ತಾಲೂಕಿನ ಸರಹದ್ದಿನ ತಡಸ ಕ್ರಾಸ ಬಳಿ ಚೆಕ್ ಪೋಸ್ಟ ಮೂಲಕ ಮೇಲ್ವಿಚಾರಣೆಯ ಜೊತೆಗೆ ಬೇರೆ ಬೇರೆ ಕಡೆಯಿಂದ ಬಂದಂತಹ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಮುಖಾಂತರ ಕೊರೊನಾ ಸೋಕು ತಡೆಗಟ್ಟುವಲ್ಲಿ ಹಗಲಿರುಳು ಪ್ರಾಮಾಣಿಕ ಸೇವೆಯನ್ನು ಮಾಡಿದ ಸಿಬ್ಬಂದಿಗಳಿಗೆ ತಾಲೂಕಿನ ಪರವಾಗಿ ಅಭಿನಂದನೆಗಳು.
ತಾಲೂಕಿನಲ್ಲಿ ಓಟ್ಟು 21 ದಿನಗಳ ಲಾಕಡೌನ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿತೆಂದು ಹೇಳಬಹುದು. ಸರಕಾರದ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಒಂದೊಂದು ಘಂಟೆಗೆ ಒಂದು ನಿರ್ಣಯವನ್ನು ತೆಗೆದುಕೊಂಡಾಗ ಅದನ್ನು ಸಾರ್ವಜನಿಕರ ಜೊತೆಗೆ ಸಹಯೋಗದೊಂದಿಗೆ ಕೆಲಸಮಾಡುವುದು ಕಷ್ಟದ ಕೆಲಸ ಆದಾಗ್ಯೂ ಸಹಿತ ಸಾರ್ವಜನಿಕರೊಂದಿಗೆ ವಿಶ್ವಾಸದಿಂದ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ತಾಲೂಕಿನಲ್ಲಿ ಪೊಲೀಸ್ ಉಪಾದೀಕ್ಷಕರು 01, ಪೊಲೀಸ್ ವೃತ್ತ ನಿರೀಕ್ಷಕರು 01, ಪೊಲೀಸ್ ಉಪ ನಿರೀಕ್ಷಕರು 04, ಪೊಲೀಸ್ ಸಹಾಯಕ ಉಪ ನಿರೀಕ್ಷಕರು 10, ಹವಾಲ್ದಾರ 37, ಪೊಲೀಸ್ ಪೇದೆಗಳು 62 ಅದರಲ್ಲಿ ಮಹಿಳಾ ಪೊಲೀಸ್ಪೇದೆ 03, ಗೃಹ ರಕ್ಷಕದಳದ ಸಿಬ್ಬಂದಿಗಳು 35 ಓಟ್ಟಿನಲ್ಲಿ 153 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಕಾರ್ಯನಿರ್ವಹಣೆ ಮಾಡಿ ಗೃಹ ಇಲಾಖೆಗೆ ಇರುವ ಗೌರವವನ್ನು ಹೆಚ್ಚಿಸಿದರು.