ಕುಮಾರಸ್ವಾಮಿ, ಸಿದ್ಧರಾಮಯ್ಯ ಹಾವು-ಮುಂಗುಸಿಯಂತೆ: ಚಿಂಚನಸೂರ

ಲೋಕದರ್ಶನವರದಿ

ರಾಣೇಬೆನ್ನೂರು: ಮೈತ್ರಿ ಸಕರ್ಾರದಲ್ಲಿ ಆಡಳಿತ ನಡೆಸಿದ ಜೆಡಿಎಸ್ನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಕಾಂಗ್ರೇಸ್ನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೈತ್ರಿ ಆಡಳಿತದಲ್ಲಿದ್ದಾಗ ಈ ಇಬ್ಬರೂ ಹಾವು ಮುಂಗುಸಿಯಂತೆ ಆಟವಾಡಿದರು.  ಇದರ ಪರಿಣಾಮ ಇವರ ಆಟಕ್ಕೆ ಬೇಸತ್ತು ಶಾಸಕರು ರಾಜೀನಾಮೆ ಕೊಟ್ಟು ಇದರಿಂದ ಸಕರ್ಾರ ಕೆಲವೇ ತಿಂಗಳಲ್ಲಿ ಬೀಳಬೇಕಾಯಿತು ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ವಿಷಾಧವ್ಯಕ್ತಪಡಿಸಿದರು. 

ಅವರು ಮಂಗಳವಾರ ಇಲ್ಲಿನ ಸಭಾಗೃಹದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿಜಿ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತದ ಬಿಜೆಪಿ ಸಕರ್ಾರ ಸಂಪೂರ್ಣ ಸುಭದ್ರವಾಗಿದೆ. ಅವಧಿ ಮುಗಿಯುವವರೆಗೂ ಯಾರೂ ಈ ಸಕರ್ಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಮೋದಿಜೀ ಅವರು  ಭವ್ಯ ಕನರ್ಾಟಕದ ಇತಿಹಾಸ, ವಿಶ್ವಕ್ಕೆ ಪರಿಚಯಿಸಿದ್ದಾರೆ.  ವಿಶ್ವವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ.  ಅವರ ಕಾರ್ಯವನ್ನು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ಸಹ ಹಾಡಿಹೊಗಳಿದ್ದಾರೆ ಎಂದು ವಿವರಿಸಿದರು. 

ಪ್ರಸ್ತುತ ಅಧಿಕಾರದ ಗದ್ದುಗೆ ಏರಲು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಅನೇಕ ಗೊಂದಲವನ್ನು ಸೃಷ್ಠಿಸುತ್ತಿದ್ದಾರೆ.  ಇದರಿಂದ ಯಾವುದೇ ಪ್ರಯೋಜನ ಕಾಂಗ್ರೇಸ್ಗೆ ಇಲ್ಲದಂತಾಗಿದೆ. ಕಾಂಗ್ರೇಸ್ನ ಹಿರಿಯ ನಾಯಕರಾದ ಮುನಿಯಪ್ಪ, ವೀರಪ್ಪ ಮೋಯ್ಲಿ, ಜಿ.ಪರಮೇಶ್ವರ ಸೇರಿದಂತೆ ಬಹುತೇಕ ಘಟಾನು-ಘಟಿ ನಾಯಕರು ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲವೆಂಬ ಕೂಗು ಜಗಜ್ಜಾಹಿರಾತಾಗಿದೆ.  ಮತ್ತು ಕಾಂಗ್ರೇಸ್ ಇದೀಗ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಹೇಳಿದರು. 

ಅಧಿಕಾರದ ಆಸೆ ಇದ್ದಿದ್ದರೇ, ಅಥವಾ ಮೈತ್ರಿ ಸಕರ್ಾರದ ಆಡಳಿತ 17 ಶಾಸಕರನ್ನು ಸರಿಯಾದ ರೀತಿಯಲ್ಲಿ ಸಮಾನತೆಯಿಂದ ಕಂಡು ಅವರ ಕ್ಷೇತ್ರಗಳಿಗೆ ಪರಿಪೂರ್ಣ ಅನುದಾನ ನೀಡಿದ್ದರೇ, ಪುನ: ಇದೀಗ ಉಪ-ಚುನಾವಣೆ ನಡೆಸುವ ಸ್ಥಿತಿ ಬರುತ್ತಿತರಲಿಲ್ಲ.  ಮೈತ್ರಿ ಸಕರ್ಾರ ಮಾಡಿದ ಮಹಾ ದೊಡ್ಡ ಅಪರಾಧದಿಂದ ತಮ್ಮ ಸ್ಥಾನವನ್ನು ಲೆಕ್ಕಿಸದೇ, ಶಾಸಕರು ಹೊರಬಂದಿದ್ದಾರೆ.  ಬಿಜೆಪಿ ಸಕರ್ಾರ ನುಡಿದಂತೆ ನಡೆದಿದೆ. ಅಲ್ಲದೇ, ಸ್ಪಧರ್ಿಸಲು ಪುನ: ಅವಕಾಶ ನೀಡಿದೆ.  ನಂಬಿಕೆ ಅಂದರೆ ಬಿಜೆಪಿ ಎಂದರು. 

15ಸ್ಥಾನಕ್ಕೆ ನಡೆಯುತ್ತಿರುವ ಈ ಉಪ-ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಅಭ್ಯಥರ್ಿಗಳ ಗೆಲುವನ್ನು ಸಂಪೂರ್ಣವಾಗಿ ಕಾಣಲಿದೆ.  ಇದರಲ್ಲಿ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಿಂಚನಸೂರ ಅವರು ಭವಿಷ್ಯದಲ್ಲಿ ಯುವಕರಾಗಿರುವ ಸ್ಥಳೀಯ ಅಭ್ಯಥರ್ಿ ಅರುಣಕುಮಾರ ಪೂಜಾರ ಅವರು ಭಾರಿ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ.  ಮತ್ತು ಕೆಲವೇ ತಿಂಗಳುಗಳ ಅವಧಿಯಲ್ಲಿ ಮಂತ್ರಿಯಾಗಿಯೂ ಸಹ ಅವರು ಸೇರ್ಪಡೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.  

 ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿಂದುಳಿದ ಬಡವರ ದೀನದಲಿತರ ಅತೀ ಕಷ್ಟದಲ್ಲಿರುವ ಮತ್ತು ಸಣ್ಣ-ಸಣ್ಣ ಸಮಾಜಗಳನ್ನು ಗುರುತಿಸಿ ಅವರಿಗೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಎಲ್ಲ ರೀತಿಯ ಅನುಕೂಲತೆಯನ್ನು ಮಾಡಿ ಕೊಡುವುದರ ಮೂಲಕ ಮಾನವೀಯತೆಯ ವ್ಯಕ್ತಿಯಾಗಿದ್ದಾರೆ. ತಮ್ಮ ಗಂಗಾಮತ ಸಮಾಜದ ಪೀಠಕ್ಕೆ ಕೋಟ್ಯಾಂತರ ಅನುದಾನ ನೀಡಿ ನರಸೀಪುರ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.  ಗಂಗಾಮತ, ಅಂಬಿಗ, ಕೋಳಿ ಸಮುದಾಯವನ್ನು ಗುರುತಿಸಿ ಅನೇಕ ರೀತಿಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು. 

 ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ನಿದರ್ೇಶಕ ಲಚ್ಚಪ್ಪ ಜಮಾದಾರ, ಶಾಂತಪ್ಪ ಕೋಡಿ, ಪ್ರಕಾಶ್ ಚಿನ್ನಿಕಟ್ಟಿ, ಫಕ್ಕೀರಪ್ಪ ತುಮ್ಮಿನಕಟ್ಟಿ ಸೇರಿಂದತೆ ಅನೇಕ ಗಣ್ಯರು, ಚಿಂಚನಸೂರ ಅಭಿಮಾನಿಗಳು ಉಪಸ್ಥಿತರಿದ್ದರು.