ಲೋಕದರ್ಶನ ವರದಿಪುರಾಣ ಪ್ರವಚನಕ್ಕೆ ಚಾಲನೆಬಳ್ಳಾರಿ 27: ತಾಲ್ಲೂಕಿನ ಕುಡಿತಿನಿ ಪಟ್ಟಣದ 10ನೇ ವಾರ್ಡ್, ಕುಂಬಾರ ಓಣಿ ಭಜನಾ ಮಂದಿರದ ವರಗೈ ಆಂಜನೇಯ ಸ್ವಾಮಿ ಹಾಗೂ ಸದ್ಗುರು ವೆಂಕಾವಧೂತ ಸೇವಾ ಟ್ರಸ್ಟ್ ಹಾಗೂ ಎಸ್ ಎಸ್ ವಿ ಯುವಕರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ವೆಂಕಾವಧೂತರ ದೇವಸ್ಥಾನದ 14ನೇ ವಾರ್ಷಿಕೋತ್ಸವದ ನಿಮಿತ್ತ ಪ್ರತಿದಿನ ಸಂಜೆ 6.30 ರಿಂದ 09.00 ರವರೆಗೆ, 11 ದಿನಗಳ ಕಾಲ ಡಿ ಎಂ ಶಿವಮೂರ್ತಿ ಶಾಸ್ತ್ರಿಗಳು (ಏಳುಬೆಂಚೆ) ಬೈಲುವದ್ದಿಗೇರಿ ವಿರಚಿತ ಸದ್ಗುರು ವೆಂಕಾವಧೂತರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಬಸವರಾಜ ಅಮಾತಿ ಬಳ್ಳಾರಿ ಇವರು ಪುರಾಣ ಪ್ರವಚನ ಮಾಡಿದರು, ದೊಡ್ಡಬಸವ ಗವಾಯಿಗಳು ದಮ್ಮೂರು ಕಗ್ಗಲ್ಲು ಸಂಗೀತವನ್ನು ನೆರವೇರಿಸಿದರು. ಚಾಗಿ ಬಸವನಗೌಡರು ಏಳುಬೆಂಚೆ ತಬಲಾ ವಾದನ ಮಾಡಿದರು.ಈ ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟಿನ ಪದಾಧಿಕಾರಿಗಳು, ಎಸ್ ಎಸ್ ವಿ ಯುವಕರ ಬಳಗದ ಸದಸ್ಯರು ಕುಡತಿನಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಪುರಾಣ ಪ್ರವಚನ ಕಾರ್ಯಕ್ರಮ ಕಾರ್ಮಿಕ ದಿನಾಚರಣೆಯಂದು (ಮೇ 1 ರಂದು) ಮಹಾಮಂಗಲಗೊಳ್ಳುವುದು ಎಂದು ತಿಳಿಸಿದ್ದಾರೆ.