ಬೆಳಗಾವಿ 22: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ವೈಷ್ಣವಿ ಕೊಣ್ಣೂರು ಮತ್ತು ಸಹಾನಾ ವಾಲಿ ಅವರು ಬೆಂಗಳೂರು ಕೆಎಲ್‌ಇ ಲಾ ಕಾಲೇಜು ಆಯೋಜಿಸಿದ ರಾಜಕೀಯ ತತ್ವಶಾಸ್ತ್ರದ ಅನ್ವೇಷಣೆ ವಿಷಯದ ಸಂವಿಧಾನಿಕ ಕಾನೂನು ಸಮ್ಮೇಳನದಲ್ಲಿ ಪೇಪರ್ ಪ್ರಸ್ತುತಪಡಿಸುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಆರ್. ಕುಲಕರ್ಣಿ, ಪ್ರಾಚಾರ್ಯ ಡಾ. ಎ. ಹೆಚ್. ಹವಾಲ್ದಾರ್, ಸೆಮಿನಾರ್ ವಿಭಾಗದ ಸಂಯೋಜಕ ಪ್ರೊ. ಶಿಲ್ಪಾ ರೈಕರ್ ಹಾಗೂ ಎಲ್ಲಾ ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಈ ಸಾಧನೆಗಾಗಿ ವಿಜೇತರನ್ನು ಅಭಿನಂದಿಸಿದ್ದಾರೆ.