ಲಾಕ್ಡೌನ್: ಜೆಸ್ಕಾಂ ಸಿಬ್ಬಂದಿಗಳಿಗೆ ರೇಷನ್ ಕಿಟ್ ವಿತರಣೆ

ಬಳ್ಳಾರಿ,ಏ.08: ಕೋವಿಡ್-19 ಕಾರಣದಿಂದಾಗಿ ಜಿಲ್ಲೆಯಾದ್ಯಂತ ಲಾಕ್ಡೌನ್ ಹಿನ್ನಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕುಮಾರ್ ಎಗ್ ಬ್ಯಾಂಕ್ ಇವರ ಸಹಯೋಗದಲ್ಲಿ ಮಂಗಳವಾರ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ರೇಷನ್ ಕಿಟ್ಗಳನ್ನು ವಿತರಿಸಲಾಯಿತು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದಶರ್ಿ ಎಂ.ಎ.ಷಕೀಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಜೆಸ್ಕಾಂ ಪಾಲನ ವಲಯದ ಕಚೇರಿ, ಗ್ರಾಮೀಣ ಪ್ರದೇಶದಲ್ಲಿಯ ವಿವಿಧ 30/11 ಕೆ.ವಿ.ಸಬ್ ಸ್ಟೇಷನ್ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ವಾಹನ ಚಾಲಕರಿಗೆ ಸೇರಿದಂತೆ ಸುಮಾರು 120 ಕ್ಕೂ ಹೆಚ್ಚು ಜನರಿಗೆ ರೇಷನ್ ಕಿಟ್ನ್ನು ವಿತರಿಸಲಾಯಿತು.     

   ಈ ಸಂದರ್ಭದಲ್ಲಿ ಕುಮಾರ್ ಎಗ್ ಬ್ಯಾಂಕ್ನ ಮಾಲಿಕ ಕುಮಾರಸ್ವಾಮಿ, ಜೆಸ್ಕಾಂನ ಸಿ ಮತ್ತು ಎಂ ವಿಭಾಗದ ಕಾರ್ಯನಿವರ್ಾಹಕ ಅಭಿಯಂತರರಾದ ಅಸ್ಮಾ ಖಾತೂನ್ ಸೇರಿದಂತೆ ಜೆಸ್ಕಾಂ ಸಿಬ್ಬಂದಿಗಳು ಇತರರು ಇದ್ದರು