ಎಸ್‌.ಎಸ್‌.ವಿದ್ಯಾಸಂಸ್ಥೆಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ

Lord Buddha Jayanti Celebration at SS Educational Institution

ಎಸ್‌.ಎಸ್‌.ವಿದ್ಯಾಸಂಸ್ಥೆಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ  

ತಾಳಿಕೋಟಿ 12: ಪಟ್ಟಣದ ಎಸ್ ಎಸ್ ವಿದ್ಯಾ ಸಂಸ್ಥೆಯಲ್ಲಿ ಭಗವಾನ ಗೌತಮ ಬುದ್ಧರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.  

ಗೌತಮ ಬುದ್ಧರ ಭಾವಚಿತ್ರಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಸ್‌.ಪಾಟೀಲರು ಪೂಜೆ ಸಲ್ಲಿಸಿ ಮಾತನಾಡಿ ಗೌತಮ ಬುದ್ದರು ಎಲ್ಲ ಸಾಮ್ರಾಜ್ಯವನ್ನು ಬಿಟ್ಟು ಬೋಧಿ ವೃಕ್ಷದ ಕೆಳಗೆ ತಪಸ್ಸಿಗೆ ಕುಳಿತುಕೊಂಡು ಜ್ಞಾನೋದಯವನ್ನು ಪಡೆದುಕೊಂಡರು ಎಂದು ತಿಳಿಸಿದರು.  

ಶಿಕ್ಷಕ ಎಸ್‌.ವಿ.ಜಾಮಗೊಂಡಿ ಅವರು ಗೌತಮ ಬುದ್ಧರು ತಂದೆಯ ಸಾಮ್ರಾಜ್ಯಕ್ಕೆ ಬೆಲೆ ನೀಡಲಿಲ್ಲ. ಅವರು ಸಾಮ್ರಾಜ್ಯ ಬಿಟ್ಟು ಬರುವಾಗ ದಾರಿಯಲ್ಲಿ ಮುದುಕನನ್ನು, ಬಡತನದಲ್ಲಿರುವ ಹೆಂಗಸನ್ನು ಹಾಗೂ ಶವವನ್ನು ನೋಡಿದರು. ಆಗ ಅವರಲ್ಲಿ ವೈರಾಗ್ಯ ಹುಟ್ಟಿತು ಎಂದು ಅವರ ಜೀವನದ ಕುರಿತು ವಿವರಿಸಿದರು.  

ಸಂಸ್ಥೆಯ ಕಾರ್ಯದರ್ಶಿ ಸಚಿನ ಎಚ್‌.ಪಾಟೀಲ, ಆಡಳಿತಾಧಿಕಾರಿ ಕಿರಣಎಚ್‌.ಪಾಟೀಲ, ರವಿ.ಬಿ.ಪಾಟೀಲ, ಮಾಸ್ಟರ್ ಮೈಂಡ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಸಿದ್ದಾರ್ಥರೆಡ್ಡಿ, ಡಾ. ಎಚ್‌.ಬಿ.ನಡುವಿನಕೇರಿ, ಶಿವಕುಮಾರ ನಾಯಕ, ವಿರೇಶ ಕನಕ, ಎಸ್‌.ಬಿ.ಮಂಗ್ಯಾಳ, ಶರಣು ಬಿರಾದಾರ, ಎಸ್‌.ಎಮ್‌.ಖಿಂಡಿಮನಿ, ಬಸವರಾಜ ಮಡಿವಾಳರ, ಆಂಗ್ಲ ಮಾಧ್ಯಮದ ಗುರುಮಾತೆ ಮೀರಾ ದೇಶಪಾಂಡೆ, ಶಿಕ್ಷಕರಾದ ಬಿ.ಆಯ್‌.ಹಿರೇಹೊಳಿ, ಎಸ್‌.ವಿ.ಜಾಮಗೊಂಡಿ, ಎಚ್‌.ಬಿ.ಪಾಟೀಲ ಎಮ್‌.ಎಸ್‌.ರಾಯಗೊಂಡ, ಯು.ಎಚ್‌.ಗಟನೂರ, ಪಿ.ಎಮ.ಚಲವಾದಿ, ಶರೀಪ, ಎಸ್‌.ಎಸ್‌.ವಿದ್ಯಾಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.